Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026: ಪರ್ಸ್‌ನಲ್ಲಿ ಉಳಿದ ಹಣ ಎಷ್ಟು? ಯಾವ ಆಟಗಾರ್ತಿಯರಿಗೆ ಎಷ್ಟು ಹಣ?

ಮಹಿಳಾ ಏಕದಿನ ವಿಶ್ವಕಪ್‌ ಮುಗಿದಿದೆ. ನವೆಂಬರ್‌ 2ರ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. ಸದ್ಯ ಭಾರತೀಯ ಆಟಗಾರರ್ತಿಯರು ಸಂಭ್ರಮಾಚರಣೆಯ ಮೂಡ್‌ನಲ್ಲಿದ್ದಾರೆ. ಇದೇ ವೇಳೆ ಮಹಿಳಾ ಪ್ರೀಮಿಯರ್ ಲೀಗ್‌ಗೆ ಸಂಬಂಧಿಸಿದಂತೆ ರಿಟೇನ್‌ ಹಾಗೂ ರಿಲೀಸ್‌ ಲೀಸ್ಟ್‌ ಸಹ ಹೊರ ಬಿದ್ದಿದೆ. ಹಾಗಿದ್ದಾರೆ ಲೀಗ್‌ನಲ್ಲಿ ಭಾಗವಹಿಸಲಿರುವ ತಂಡಗಳು ಉಳಿಸಿಕೊಂಡ ಆಟಗಾರರು ಯಾರು? ಅವರಿಗೆ ನೀಡಿದ ಹಣ ಎಷ್ಟು ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್ಸ್‌ ಇಲ್ಲಿದೆ.

ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮೆಗಾ ಹರಾಜು ನಡೆಯಲಿದೆ. ಈ ವೇಳೆ ಐದೂ ತಂಡಗಳು ಸಹ ಅಳೆದು ತೂಗಿ ಆಟಗಾರ್ತಿಯರಿಗೆ ಮಣೆ ಹಾಕಿವೆ. ಎಲ್ಲ ತಂಡಗಳು ಸಹ 5 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವನ್ನು ನೀಡಲಾಗಿತ್ತು. ಆರ್‌ಸಿಬಿ ಈ ಹರಾಜಿನಲ್ಲಿ 4 ಆಟಗಾರ್ತಿಯರನ್ನು ಮಾತ್ರ ಉಳಿಸಿಕೊಂಡಿದೆ. ತಂಡಗಳು ಉಳಿಸಿಕೊಂಡ ಹಾಗೂ ರಿಲೀಸ್‌ ಮಾಡಿದ ಆಟಗಾರರ ಮಾಹಿತಿ ಇಲ್ಲಿದೆ.

WPL Mega Auction Retained Players Purse and RTM Details Ahead of New Season
ತಂಡ ಆಟಗಾರ್ತಿ ಮೊತ್ತ
ಆರ್‌ಸಿಬಿ ಸ್ಮೃತಿ ಮಂಧಾನ ₹3.5 ಕೋಟಿ
ಎಲಿಸ್ ಪೆರ್ರಿ ₹2 ಕೋಟಿ
ರಿಚಾ ಘೋಷ್ ₹2.75 ಕೋಟಿ
ಶ್ರೇಯಾಂಕ ಪಾಟೀಲ್ ₹60 ಲಕ್ಷ
ಮುಂಬೈ ಇಂಡಿಯನ್ಸ್ ಹರ್ಮನ್‌ಪ್ರೀತ್ ಕೌರ್ ₹2.5 ಕೋಟಿ
ನ್ಯಾಟ್ ಸಿವರ್-ಬ್ರಂಟ್ ₹3.5 ಕೋಟಿ
ಹೇಲಿ ಮ್ಯಾಥ್ಯೂಸ್ ₹1.75 ಕೋಟಿ
ಅಮನ್‌ಜೋತ್ ಕೌರ್ ₹1 ಕೋಟಿ
ಜಿ ಕಮಲಿನಿ ₹50 ಲಕ್ಷ
ದೆಹಲಿ ಕ್ಯಾಪಿಟಲ್ಸ್ ಜೆಮಿಮಾ ರೋಡ್ರಿಗಸ್ ₹2.2 ಕೋಟಿ
ಶಫಾಲಿ ವರ್ಮಾ ₹2.2 ಕೋಟಿ
ಮರಿಜಾನ್ನೆ ಕಪ್ ₹2.2 ಕೋಟಿ
ಅನ್ನಾಬೆಲ್ ಸದರ್ಲ್ಯಾಂಡ್ ₹2.2 ಕೋಟಿ
ನಿಕಿ ಪ್ರಸಾದ್ ₹50 ಲಕ್ಷ
ಗುಜರಾತ್ ಜೈಂಟ್ಸ್ ಆಶ್ ಗಾರ್ಡ್ನರ್ ₹3.5 ಕೋಟಿ
ಬೆತ್ ಮೂನಿ ₹2.5 ಕೋಟಿ
ಯುಪಿ ವಾರಿಯರ್ಜ್ ಶ್ವೇತಾ ಸೆಹ್ರಾವತ್ ₹50 ಲಕ್ಷ

ತಂಡಗಳ ಬಳಿ ಇರುವ ಮೊತ್ತ

ಮುಂಬೈ ಇಂಡಿಯನ್ಸ್‌ 5.75 ಕೋಟಿ ರೂ.
ರಾಯಲ್ ಚಾಲೆಂಜರ್ಸ್‌ ಬೆಂಗಳೂರು, 6.15 ಕೋಟಿ ರೂ.
ಡೆಲ್ಲಿ ಕ್ಯಾಪಿಟಲ್ಸ್‌, 5.70 ಕೋಟಿ ರೂ.
ಗುಜರಾತ್‌ ಜೈಂಟ್ಸ್‌, 9 ಕೋಟಿ ರೂ.
ಯುಪಿ ವಾರಿಯರ್ಸ್‌, 14.5 ಕೋಟಿ ರೂ.

WPL Mega Auction Retained Players Purse and RTM Details Ahead of New Season

ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 8 ಆರ್‌ಟಿಎಂ ಕಾರ್ಡ್‌ ಬಳಸಬಹುದಾಗಿದೆ. ಯುಪಿ ವಾರಿಯರ್ಸ್‌ ಅತಿ ಹೆಚ್ಚು ಆರ್‌ಟಿಎಂ ಕಾರ್ಡ್‌ಗಳನ್ನು ಹೊಂದಿದೆ. ಯುಪಿ ಬಳಿ 4 ರೈಟ್‌ ಟು ಮ್ಯಾಚ್ ಕಾರ್ಡ್‌ ಇದ್ರೆ, ಗುಜರಾತ್ ಬಳಿ 3, ಆರ್‌ಸಿಬಿ ಬಳಿ ಒಂದು ಕಾರ್ಡ್‌ ಇದೆ. ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್‌ ಬಳಿ ಯಾವುದೇ ಕಾರ್ಡ್‌ ಇಲ್ಲ.

Story first published: Friday, November 7, 2025, 17:30 [IST]
Other articles published on Nov 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+