Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026: ಆಸೀಸ್‌ ಸ್ಟಾರ್‌ ಪ್ಲೇಯರ್‌ ಮೇಲೆ 3 ತಂಡಗಳ ಚಿತ್ತ

ಇನ್ನೇನು ಕೆಲವೇ ದಿನಗಳಲ್ಲಿ ಮಹಿಳಾ ಪ್ರೀಮಿಯರ್ ಲೀಗ್‌ (WPL) ಮೆಗಾ ಹರಾಜು ನಡೆಯಲಿದೆ. ಈ ವೇಳೆ ಎಲ್ಲರ ಕಣ್ಣುಗಳು ಸ್ಟಾರ್ ಆಟಗಾರ್ತಿಯರ ಮೇಲೆ ನೆಟ್ಟಿರಲಿವೆ. ಬಹುಮುಖ ಪ್ರತಿಭೆಗಳಿಗೆ ಈ ಹರಾಜಿನಲ್ಲಿ ದೊಡ್ಡ ಮೊತ್ತವನ್ನು ನೀಡಲು ಫ್ರಾಂಚೈಸಿಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಡಬ್ಲ್ಯೂಪಿಎಲ್‌ (WPL) ಐದು ಫ್ರಾಂಚೈಸಿಗಳು ಈಗಾಗಲೇ ಸ್ಟಾರ್ ಆಟಗಾರ್ತಿಯರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ರೂಪಿಸಿಕೊಳ್ಳುತ್ತಿವೆ. ಮೆಗಾ ಹರಾಜಿನಲ್ಲಿ ಮೂರು ಮಾಲೀಕರ ಕಣ್ಣುಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೈ ಬಿಟ್ಟ ಮೆಗ್ ಲ್ಯಾನಿಂಗ್ (Meg Lanning) ಮೇಲೆ ಇರಲಿದೆ.

ಡಬ್ಲ್ಯೂಪಿಎಲ್‌ (WPL) ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ರಿಲೀಸ್ ಮಾಡಿದಾಗ ದೆಹಲಿ ಕ್ಯಾಪಿಟಲ್ಸ್‌ (Delhi Capitals) ತಂಡ ಮೆಗ್ ಲ್ಯಾನಿಂಗ್‌ ಅವರನ್ನು ಕೈ ಬಿಟ್ಟಿತ್ತು. ಇವರು ಈಗಾಗಲೇ ಡಬ್ಲ್ಯೂಪಿಎಲ್‌ (WPL)ನಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇವರನ್ನು ಉಳಿಸಿಕೊಳ್ಳದ ಡೆಲ್ಲಿ ಹರಾಜಿನ ಅಂಗಳಕ್ಕೆ ಬಿಟ್ಟಿದೆ ಇವರ ಅನುಭವವನ್ನು ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಈ ಸಾಲಿನಲ್ಲಿ ಮೂರು ತಂಡಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ.

WPL Mega Auction Three Franchises Eyeing Delhi Capitals Released Star Skipper Meg Lanning

ಡಬ್ಲ್ಯೂಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಮೆಗ್ ಲ್ಯಾನಿಂಗ್ ನಾಯಕತ್ವದಲ್ಲಿ ಸಮಬದಲ್ಲಿ ಕಂಡು ಬಂದಿತ್ತು. ಇವರು ತಂಡದಲ್ಲಿ ಚುರುಕುತನ ಹಾಗೂ ವಿಭಿನ್ನ ಯೋಜನೆ ಹಾಗೂ ಯೋಚನೆ ತರಬಲ್ಲ ಪ್ಲೇಯರ್‌. ಅಲ್ಲದೆ ಟಾಪ್‌ ಆರ್ಡರ್‌ನಲ್ಲಿ ನುರಿತ ಬ್ಯಾಟರ್‌.

ಯುಪಿ ಟಾರ್ಗೆಟ್‌

ಯುಪಿ ವಾರಿಯರ್ಸ್‌ (UP Warriorz) ಹರಾಜು ಅಂಗಳದಲ್ಲಿ ಮೆಗ್ ಲ್ಯಾನಿಂಗ್ ಅವರನ್ನು ಟಾರ್ಗೆಟ್‌ ಮಾಡಬಹುದು. ಈ ತಂಡ ನಾಯಕಿಯನ್ನು ಸಹ ಹುಡುಕಾಟ ನಡೆಸುತ್ತಿರುವುದರಿಂದ ಮೆಗ್‌ ತಂಡಕ್ಕೆ ಸಮತೋಲನವನ್ನು ತಂದು ಕೊಡುತ್ತಾರೆ. ಕಳೆದ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ದೀಪ್ತಿ ಶರ್ಮಾರನ್ನು ರಿಟೇನ್ ಮಾಡದ ಡೆಲ್ಲಿ, ಈಗ ಮೆಗ್ ಲ್ಯಾನಿಂಗ್‌ಗೆ ಗಾಳ ಹಾಕಲಿದೆ.

ಗುಜರಾತ್ ಜೈಂಟ್ಸ್‌

ಗುಜರಾತ್ ಜೈಂಟ್ಸ್ ಇಬ್ಬರು ವಿದೇಶಿ ಆಟಗಾರರಾದ ಬೆತ್ ಮೂನಿ ಹಾಗೂ ಆಶ್ಲೀ ಗಾರ್ಡ್ನರ್ ಮಾತ್ರ ಉಳಿಸಿಕೊಂಡಿದೆ. ತನ್ನ ಕೋರ್‌ ಟೀಮ್‌ನಲ್ಲಿ ಮತ್ತೊಬ್ಬ ಆಸೀಸ್ ಪ್ಲೇಯರ್‌ ಸೇರಿಸಿಕೊಂಡು ತಂಡವನ್ನು ಬಲಿಷ್ಠ ಪಡಿಸಿಕೊಳ್ಳುವ ಇರಾದೆ ಗುಜರಾತ್ ತಂಡದ್ದಾಗಿದೆ. ಮೆಗ್‌ ಲ್ಯಾನಿಂಗ್‌ ಗುಜರಾತ್‌ ತಂಡವನ್ನು ಸೇರಿಕೊಳ್ಳುವುದರಿಂದ ಮ್ಯಾನೇಜ್ಮೆಂಟ್‌ಗೆ ಹಲವು ನಾಯಕತ್ವದ ಆಕ್ಷನ್‌ ಸಿಗಲಿವೆ. ಇವರ ಅನುಭವ ಸಹ ತಂಡಕ್ಕೆ ಆಧಾರವಾಗಲಿದೆ.


ಡೆಲ್ಲಿ ಕ್ಯಾಪಿಟಲ್ಸ್‌

ಡಲ್ಲಿ ಕ್ಯಾಪಿಟಲ್ಸ್‌ ಮೆಗ್ ಲ್ಯಾನಿಂಗ್ ಅವರನ್ನು ಹರಾಜಿನ ಅಂಗಳದಲ್ಲಿ ಆರ್‌ಟಿಎಂ ಬಳಸಿ ಪಡೆಯಲಿದೆ ಎಂಬ ಮಾತುಗಳ ಸಹ ಕೇಳಿ ಬರುತ್ತಿವೆ. ಈ ಹಿಂದೆ ಡೆಲ್ಲಿ 1.10 ಕೋಟಿ ರೂ. ನೀಡಿ ಮೆಗ್ ಲ್ಯಾನಿಂಗ್ ಅವರಿಗೆ ಮಣೆ ಹಾಕಿತ್ತು. ಆದರೆ ಈ ಬಾರಿ ಅವರನ್ನು ಕೈ ಬಿಟ್ಟಿದೆ. ಇದರ ಹಿಂದೆಯೂ ಡೆಲ್ಲಿ ಕ್ಯಾಪಿಟಲ್ಸ್‌ ಯೋಜನೆ ಕಾಣುತ್ತಿದೆ. ಇವರು ಈಗಾಗಲೇ ಮ್ಯಾನೇಜ್ಮೆಂಟ್‌ ಹಾಗೂ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಇವರಿಗೆ ಡೆಲ್ಲಿ ಮಣೆ ಹಾಕಿದರೆ ಅಚ್ಚರಿಯಿಲ್ಲ.

Story first published: Friday, November 14, 2025, 12:09 [IST]
Other articles published on Nov 14, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+