WPL Mini Auction 2025: ಡಿಸೆಂಬರ್‌ನಲ್ಲಿ ನಡೆಯಲಿದೆ ಮತ್ತೊಂದು ಹರಾಜು: ಬೆಂಗಳೂರಿನಲ್ಲಿ ಬಿಡ್ಡಿಂಗ್
ಸೌದಿ ಅರೇಬಿಯಾದಲ್ಲಿ ನವೆಂಬರ್ 24 ಹಾಗೂ 25 ರಂದು ಐಪಿಎಲ್ ಮೆಗಾ ಹರಾಜು ಆಯೋಜಿಸಲಾಗಿತ್ತು. ಈ ಹರಾಜಿನಲ್ಲಿ ಐಪಿಎಲ್‌ನಲ್ಲಿ ಭಾಗವಹಿಸುವ 10 ತಂಡಗಳು ಭಾಗವಹಿಸಿದ್ದವು. ತಂಡಗಳಿಗೆ ಈ ಬಾರಿ ಒಟ್ಟು 120 ಕೋಟಿ ರೂಪಾಯಿ ನೀಡಲಾಗಿತ್ತು. ಈ ವೇಳೆ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಈ ಬಾರಿಯ ದುಬಾರಿ ಆಟಗರ ಎಂಬ ಹಣೆ ಪಟ್ಟೆಯನ್ನು ರಿಷಭ್ ಪಂತ್ ಹೊಂದಿದ್ದಾರೆ. ಈಗ ಇನ್ನೊಂದು ಹರಾಜಿಗೆ ಕ್ರಿಕೆಟ್ ವಿಶ್ವ ಸಾಕ್ಷಿಯಾಗಲಿದೆ.
ಈಗ ಮಹಿಳಾ ಪ್ರೀಮಿಯರ್ ಲೀಗ್‌ನ ಮೂರನೇ ಸೀಸನ್ (ಡಬ್ಲ್ಯೂಪಿಎಲ್) ಅನ್ನು 2025 ರಲ್ಲಿ ನಡೆಯಲಾಗುತ್ತಿದೆ. ಇದಕ್ಕಾಗಿ ಈ ಬಾರಿ ಮಿನಿ ಹರಾಜನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಬದಲಾವಣೆಗಳನ್ನು ಕಾಣಬಹುದು. ಪ್ರತಿ ತಂಡಗಳು ತಮ್ಮ ತಂಡದಲ್ಲಿ 18 ಆಟಗಾರರನ್ನು ಹೊಂದಿರಲಿದ್ದು, 5 ತಂಡಗಳು ಬಿಡ್‌ನಲ್ಲಿ ಭಾಗವಹಿಸಲಿವೆ. ಪುರುಷರ ಮೆಗಾ ಹರಾಜು ಮುಗಿಯುತ್ತಿದ್ದಂತೆ ಬಿಸಿಸಿಐ ಮಹಿಳಾ ಹರಾಜಿನ ದಿನಾಂಕವನ್ನು ಬಹಿರಂಗಪಡಿಸಿದೆ.

ಎಲ್ಲಿ ನಡೆಯಲಿದೆ ಮಿನಿ ಹರಾಜು?
ಸೌದಿಯಲ್ಲಿ ಪುರುಷರ ಹರಾಜನ್ನು ಎರಡು ದಿನಗಳ ಕಾಲ ನಡೆಸಲಾಗಿತ್ತು. ಆದರೆ ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮಿನಿ ಹರಾಜು ನಡೆಯಲಿದ್ದು, ಒಂದು ದಿನ ನಡೆಯಲಿದೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ಮಾಹಿತಿಯಂತೆ ಮತ್ತೊಂದು ಹರಾಜಿಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿ ಹರಾಜು ವಿದೇಶದಲ್ಲಿ ಅಲ್ಲ, ನಮ್ಮ ಬೆಂಗಳೂರಿನಲ್ಲಿ ನಡೆಯಲಿದೆ. ಮಹಿಳಾ ಪ್ರೀಮಿಯರ್ ಲೀಗ್‌ನ 10 ತಂಡಗಳು ತಾವು ಉಳಿಸಿಕೊಂಡಿರುವ ಆಟಗರರ ಲೀಸ್ಟ್‌ನ್ನು ಬಿಸಿಸಿಐಗೆ ನೀಡಿದೆ.
ಈ ವೇಳೆ ಎಲ್ಲರ ಕಣ್ಣು ಭಾರತದ ಸ್ನೇಹ ರಾಣಾ, ಪೂನಂ ಯಾದವ್ ಮತ್ತು ವೇದಾ ಕೃಷ್ಣಮೂರ್ತಿ ಮೇಲೆ ನೆಟ್ಟಿರಲಿದೆ. ಇದಲ್ಲದೆ, ವಿದೇಶಿ ಆಟಗಾರರ ಹೆಸರುಗಳಲ್ಲಿ ಲೀ ತಹುಹು, ಹೀದರ್ ನೈಟ್ ಮತ್ತು ಡಿಯಾಂಡ್ರಾ ಡಾಟಿನ್ ನಂತಹ ಸ್ಟಾರ್ ಆಟಗಾರರು ಸಹ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಐದು ತಂಡಗಳು ತಮ್ಮ ತಂಡದಲ್ಲಿ ಗರಿಷ್ಠ 6 ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಯಾವ ತಂಡಗಳ ಪರ್ಸ್ ಸೈಜ್ ಎಷ್ಟು?
ಈ ಬಾರಿಯ ಮೆಗಾ ಹರಾಜಿನಲ್ಲಿ ಭಾಗವಹಿಸುವ ಅತ್ಯಂತ ಶ್ರೀಮಂತ ತಂಡ ಎಂಬ ಹೆಗ್ಗಳಿಕೆ ಗುಜರಾತ್ ಜೈಂಟ್ಸ್ ತಂಡದ ಪಾಲಾಗಿದೆ. ಈ ತಂಡ 4.40 ಕೋಟಿ ರೂ. ಹೊಂದಿದೆ ಈ ವೇಳೆ ಈ ತಂಡ 2 ವಿದೇಶಿ ಆಟಗಾರರು ಸೇರಿದಂತೆ 4 ಆಟಗಾರರನ್ನು ಖರೀದಿಸುವ ಅವಕಾಶ ಇದೆ. ಯುಪಿ ವಾರಿಯರ್ಸ್ ತಂಡದ ಬಳಿ 3.90 ಕೋಟಿ ರೂ.ಗಳ ಪರ್ಸ್ ಉಳಿದಿದೆ. ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 2.65 ಕೋಟಿ ರೂ., ಡೆಲ್ಲಿ 2.5 ಕೋಟಿ ರೂ., ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ 3.25 ಕೋಟಿ ರೂ. ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications