WPL 2025: ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗಲಿರುವ ಟಾಪ್-5 ಆಟಗಾರರು
ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಮಿನಿ ಹರಾಜು ಪ್ರಕ್ರಿಯೆ ಇಂದು ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ. ಡಬ್ಲ್ಯೂಪಿಎಲ್ ಮಿನಿ ಹರಾಜು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆಯನ್ನು ಬಿಸಿಸಿಐ ಯಶಸ್ವಿಗೊಳಿಸಿದೆ. ಡಬ್ಲ್ಯೂಪಿಎಲ್ ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಲಿರುವ ಆಟಗಾರರ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈ ಆಟಗಾರರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ಎರಡು ವರ್ಷಗಳಿಂದ ಆರಂಭವಾಗಿರುವ ಡಬ್ಲ್ಯೂಪಿಎಲ್ ಟೂರ್ನಿ ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಸಾಕಷ್ಟು ಜನಪ್ರಿಯತೆ ಪಡೆದಿದೆ. ಮೊದಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಆದರೆ, ಕಳೆದ ಬಾರಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡ ಕಪ್ ಗೆದ್ದು ಬೀಗಿತ್ತು. ಇದೀಗ ಡಬ್ಲ್ಯೂಪಿಎಲ್ ಮೂರನೇ ಆವೃತ್ತಿ ಎಲ್ಲಾ ಫ್ರಾಂಚೈಸಿ ಬಲಿಷ್ಠ ತಂಡವನ್ನು ಕಟ್ಟಲು ಯೋಜನೆಗಳು ಹಾಕಿಕೊಂಡಿದ್ದು, ಸ್ಟಾರ್ ಆಟಗಾರರನ್ನು ಬಿಡ್ ಮಾಡಲು ಯೋಜನೆ ರೂಪಿಸಿವೆ.

ತೇಜಲ್ ಹಸ್ಬಾನಿಸ್
ಭಾರತ ಮಹಿಳಾ ತಂಡ ಸ್ಟಾರ್ ಆಲ್‌ರೌಂಡರ್ ಆಗಿರುವ ತೇಜಲ್ ಹಸ್ಬಾನಿಸ್ ಅವರ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಕೆಳಕ್ರಮಾಂಕದಲ್ಲಿ ರನ್ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಜೊತೆಗೆ ಬೌಲಿಂಗ್‌ನಲ್ಲಿಯೂ ಮಿಂಚಿದ್ದಾರೆ. ಭಾರತ ಪರ ಕೆಲವೇ ಪಂದ್ಯಗಳನ್ನು ಆಡಿದ್ದರೂ, ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಹೀಗಾಗಿ ತೇಜಲ್ ಹಸ್ಬಾನಿಸ್ ಅವರು ಡಬ್ಲ್ಯೂಪಿಎಲ್ ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗುವ ಸಾಧ್ಯತೆಯಿದೆ.
ಸ್ನೇಹ್ ರಾಣಾ
ಭಾರತ ತಂಡದ ಮತ್ತೊರ್ವ ಆಲ್‌ರೌಂಡರ್ ಸ್ನೇಹ ರಾಣಾ ಅವರು ಈ ಬಾರಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡಗ ಆಗುವ ನಿರೀಕ್ಷೆಯಿದೆ. ಕಳೆದ ಎರಡು ವರ್ಷ ಗುಜರಾತ್ ಜೈಂಟ್ಸ್ ಪರ ಆಡಿರುವ ರಾಣಾ ಅವರನ್ನು ಈ ಬಾರಿಗೆ ಫ್ರಾಂಚೈಸಿ ಉಳಿಸಿಕೊಂಡಿಲ್ಲ. ಹೀಗಾಗಿ ಅವರು ಬೇರೆ ತಂಡ ಸೇರುವ ಸಾಧ್ಯತೆಯಿದೆ. ಡಬ್ಲ್ಯೂಪಿಎಲ್ ಎರಡು ಆವೃತ್ತಿಗಳಲ್ಲಿ ಆಡಿರುವ 12 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಪಡೆದಿದ್ದಾರೆ. ಸದ್ಯ ಸ್ನೇಹ್ ರಾಣಾ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಹೀದರ್ ನೈಟ್
ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್ ಅವರು ಡಬ್ಲ್ಯೂಪಿಎಲ್‌ನಲ್ಲಿ ಆರ್‌ಸಿಬಿ ಪರ ಕಣಕ್ಕಿಳಿದಿದ್ದಾರೆ. ಆದರೆ, ಮುಂದಿನ ಆವೃತ್ತಿ ಆರ್‌ಸಿಬಿ ಫ್ರಾಂಚೈಸಿ ಅವರನ್ನು ಉಳಿಸಿಕೊಂಡಿಲ್ಲ. ಹೀದರ್ ನೈಟ್ ನಾಯಕಿಯಾಗಿ ಇಂಗ್ಲೆಂಡ್ ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಮಿನಿ ಹರಾಜಿನಲ್ಲಿ ಹೀದರ್ ನೈಟ್ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಡಬ್ಲ್ಯೂಪಿಎಲ್‌ನಲ್ಲಿ ನೈಟ್ ಆಡಿರುವ 8 ಪಂದ್ಯಗಳಲ್ಲಿ 135 ರನ್‌ಗಳೊಂದಿಗೆ 4 ವಿಕೆಟ್‌ಗಳನ್ನು ಸಹಾ ಪಡೆದಿದ್ದಾರೆ.
ಕಮಲಿನಿ ಜಿ
ತಮಿಳುನಾಡಿ ಯುವ ಬ್ಯಾಟರ್ ಕಮಲಿನಿ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್ ಮೂಲಕ ಭರವಸೆ ಮೂಡಿಸಿರುವ ಕಮಲಿನಿ ಅವರು ಈ ಬಾರಿ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಬಿಡ್ ಆಗಬಹುದು. ಫ್ರಾಂಚೈಸಿಗಳು ಕೂಡ ಅವರ ಮೇಲೆ ಕಣ್ಣಿಟ್ಟಿವೆ.
ನಂದಿನಿ ಕಶ್ಯಪ್
ಡಬ್ಲ್ಯೂಪಿಎಲ್ ಮಿನಿ ಹರಾಜಿನಲ್ಲಿ ಗಮನ ಸೆಳೆಯಲಿರುವ ಮತ್ತೊಂದು ಹೆಸರು ನಂದಿನಿ ಕಶ್ಯಪ್. ಭಾರತ ತಂಡದ ಪರ ಆಡುತ್ತಿರುವ ನಂದಿನಿ ಕಶ್ಯಪ್ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಬಿಡ್ ಆಗುವ ನಿರೀಕ್ಷೆಯಿದೆ. ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ನಂದಿನಿ ಉತ್ತರಖಂಡದ ಪರ ಆಡುತ್ತಿದ್ದು, ಅದ್ಭುತವಾಗಿ ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications