ಮಹಿಳಾ ಪ್ರೀಮಿಯರ್ ಲೀಗ್‌ನ ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡದ ಸ್ಟಾರ್ ಆಟಗಾರ್ತಿ ಸೋಫಿಯಾ ಡಿವೈನ್ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿ ದಾಖಲೆಯ ಪುಸ್ತಕಕ್ಕೆ ಎಂಟ್ರಿ ಪಡೆದರು, ಡೆಲ್ಲಿ ಕ್ಯಾಪಿಟಲ್ಸ್ ತಂಡದ 24 ವರ್ಷದ ನಂದೀನಿ ಶರ್ಮಾ ಹ್ಯಾಟ್ರಿಕ್ ಪಡೆದು ಬೀಗಿದರು.
ಗುಜರಾತ್ ಜೈಂಟ್ಸ್ ಪರ ಸೋಫಿ ಡಿವೈನ್ ಇನ್ನಿಂಗ್ಸ್ ಆರಂಭಿಸಿದರು. ತಮ್ಮ ನೈಜ ಆಟವನ್ನು ಆಡಿದ ಸೋಪಿ ಡಿವೈನ್ ಬ್ಯಾಟಿಂಗ್‌ನಲ್ಲಿ ಮನಮೋಹಕ ಪ್ರದರ್ಶನ ನೀಡಿದರು. ಇವರು 42 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ 95 ರನ್ ಗಳಿಸಿದರು. ಇವರು ಸ್ನೇಹಾ ರಾಣಾ ಅವರು ಎಸೆದ ಆರನೇ ಓವರ್‌ನಲ್ಲಿ ಒಟ್ಟು 32 ರನ್ ಬಾರಿಸಿ ಅಬ್ಬರಿಸಿದರು. ಇವರು ಕೇವಲ 5 ರನ್‌ಗಳಿಂದ ಶತಕ ವಂಚಿತರಾದರು.

ಸ್ನೇಹಾ ರಾಣಾ ಎಸೆದ ಆರನೇ ಓವರ್‌ನಲ್ಲಿ ಸೋಫಿ ಡಿವೈನ್ ಅಬ್ಬರಿಸಿದರು. ಸೋಫಿ ಡಿವೈನ್ ಮೊದಲ ಎರಡು ಎಸೆತಗಳಲ್ಲಿ ಬೌಂಡರಿ ಬಾರಿಸಿದರು. ಇದಾದ ಬಳಿಕ ಅವರು ಸತತ ನಾಲ್ಕು ಸಿಕ್ಸರ್ ಬಾರಿಸಿ ಆರ್ಭಟಿಸಿದರು. ಈ ಮೂಲಕ ಒಂದೇ ಓವರ್‌ನಲ್ಲಿ 32 ರನ್ ಬಾರಿಸಿ ಹಿರಿಮೆ ತಮ್ಮದಾಗಿಸಿಕೊಂಡರು. ಸ್ನೇಹಾ ರಾಣಾ ಬೇಡದ ದಾಖಲೆ ಬರೆದರು. ಸ್ನೇಹಾ ರಾಣಾ, 2025 ರಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ದೀಪ್ತಿ ಒಂದು ಓವರ್‌ನಲ್ಲಿ 28 ರನ್ ನೀಡಿದ್ದರು. ಈ ದಾಖಲೆಯನ್ನು ಸ್ನೇಹಾ ಅಳಿಸಿ ಹಾಕಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಂದಿನಿ ಶರ್ಮಾ ಅಮೋಘ ಬೌಲಿಂಗ್ ನಡೆಸಿದರು. ಇವರು ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಬೀಗಿದರು. ನಂದಿನಿ 33 ರನ್ ನೀಡಿ 5 ವಿಕೆಟ್ ಪಡೆದು ಬೀಗಿದರು.
ನಂದಿನಿ ಶರ್ಮಾ ಇನಿಂಗ್ಸ್‌ನ ಕೊನೆಯ ಓವರ್ ಬೌಲಿಗ್ ಮಾಡಿದರು. ಇವರು ನಾಲ್ಕನೇ ಎಸೆತದಲ್ಲಿ, ಕನಿಕಾ ಅಹುಜಾ ಅವರನ್ನು ಔಟ್ ಮಾಡಿದರು. ಐದನೇ ಎಸೆತದಲ್ಲಿ ರಾಜೇಶ್ವರಿ ಗಾಯಕ್ವಾಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಆರನೇ ಎಸೆತದಲ್ಲಿ, ಅವರು ರೇಣುಕಾ ಸಿಂಗ್ ಅವರನ್ನು ಔಟ್ ಮಾಡಿದರು. ಈ ಮೂಲಕ ನಂದಿನಿ ಶರ್ಮಾ ಹ್ಯಾಟ್ರಿಕ್ ಸಾಧನೆಯನ್ನು ಮಾಡಿ ಬೀಗಿದಿರು. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಎರಡನೇ ಭಾರತೀಯ ಬೌಲರ್ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ದೀಪ್ತಿ ಶರ್ಮಾ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.
ಡಬ್ಲ್ಯೂಪಿಎಲ್ ಇತಿಹಾಸದಲ್ಲಿ 5 ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಕೀರ್ತಿ ನಂದೀನಿ ಪಾಲಾಯಿತು. ಇವರಿಗಿಂತಲೂ ಮೊದಲು ಆಶಾ ಶೋಭನಾ ಈ ಸಾಧನೆ ಮಾಡಿದ್ದರು.