For Quick Alerts
ALLOW NOTIFICATIONS  
For Daily Alerts
 

wpl 2026: ಗರಿಷ್ಠ ರನ್‌ ಸಾಧಕರು ಇವರೇ..: ಪಟ್ಟಿಯಲ್ಲಿ RCB ಆಟಗಾರ್ತಿಗೂ ಸ್ಥಾನ

ಮಹಿಳಾ ಪ್ರೀಮಿಯರ್ ಲೀಗ್‌ಗೆ ದಿನಗಣನೆ ಆರಂಭವಾಗಿದೆ. ಈ ಲೀಗ್‌ಗಾಗಿ ಆಟಗಾರರು ಸಹ ಸಿದ್ಧತೆ ನಡೆಸಿದ್ದಾರೆ. ಐದು ತಂಡಗಳು ಈ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಕಾದಾಟವನ್ನು ನಡೆಸಲಿವೆ. ಆರ್‌ಸಿಬಿ ಸಹ ಎರಡನೇ ಬಾರಿಗೆ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸುವತ್ತ ಚಿತ್ತ ನೆಟ್ಟಿದೆ. ಐಪಿಎಲ್‌ ಮಾದರಿಯಲ್ಲಿ ನಡೆಯುತ್ತಿರುವ ಈ ಲೀಗ್‌ ಅಭಿಮಾನಿಗಳ ತನ್ನತ್ತ ಸೆಳೆಯುವಲ್ಲಿ ಸಫಲವಾಗುತ್ತಿದೆ. ದಿನೇ ದಿನೇ ಈ ಲೀಗ್‌ ನೋಡುಗರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆ ಆಗಿದೆ. ಹೊಡಿ ಬಡಿ ಆಟದಲ್ಲಿ ಬ್ಯಾಟರ್‌ಗಳು ಆರ್ಭಟ ಜೋರಾಗಿರುತ್ತದೆ.

ಈಗಾಗಲೇ ಮೂರು ಆವೃತ್ತಿಯ ಡಬ್ಲ್ಯೂಪಿಎಲ್‌ ಆಡಲಾಗಿದ್ದು, ನಾಲ್ಕನೇ ಆವೃತ್ತಿಯ ತಯಾರಿ ಭರದಿಂದ ನಡೆದಿದೆ. ಈ ಬಾರಿ ಎರಡು ಮೈದಾನದಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತದೆ. ಐದು ತಂಡಗಳು ಲೀಗ್‌ ನಲ್ಲಿ ಮುಖಾಮುಖಿಯಾಗಲಿವೆ. ಈ ಮೊದಲು ನಡೆದ ಮೂರು ಆವೃತ್ತಿಯ ಲೀಗ್‌ನಲ್ಲಿ ವಿದೇಶಿ ಬ್ಯಾಟರ್‌ಗಳು ತಮ್ಮ ಕ್ಷಮತೆ ಪ್ರದರ್ಶಿಸಿದ್ದಾರೆ. ಅಲ್ಲದೆ ಅಧಿಕ ರನ್‌ ಬಾರಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

WPL Top Run-Scorers Nat Sciver-Brunt Leads as Ellyse Perry and Indian Stars Eye Records

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯಧಿಕ ರನ್‌ ಬಾರಿಸಿದ ಕೀರ್ತಿ ಎರಡು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್ ಅವರದ್ದಾಗಿದೆ. ಇವರು ಆಡಿದ 20 ಪಂದ್ಯಗಳಲ್ಲಿ 46ರ ಸರಾಸರಿಯಲ್ಲಿ 1027 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 8 ಅರ್ಧಶತಕಗಳು ಸೇರಿವೆ. ಇವರು ರನ್‌ ವೇಗಕ್ಕೆ ಚುರುಕು ಮುಟ್ಟಿಸಲು ಹೆಸರುವಾಸಿ.

ಆರ್‌ಸಿಬಿ ಆಟಗಾರ್ತಿಗೂ ಸ್ಥಾನ

ರನ್‌ ಸಾಧಕರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಆರ್‌ಸಿಬಿ ಸ್ಟಾರ್ ಆಲ್‌ರೌಂಡರ್‌ ಎಲ್ಲಿಸ್‌ ಪೆರ್ರಿ ಇದ್ದಾರೆ. ಇವರು ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕಕ್ಕೆ ಆಧಾರವಾದ ಪ್ಲೇಯರ್. ಆದರೆ ಇವರು ಈ ಬಾರಿಯ ಲೀಗ್‌ನಲ್ಲಿ ವೈಯಕ್ತಿಕ ಕಾರಣದಿಂದ ಆಡುತ್ತಿಲ್ಲ. ಈ ಹಿಂದಿನ ಮೂರು ಆವೃತ್ತಿಗಳಲ್ಲಿ ಇವರು ರನ್‌ ಶಿಖರ ಏರಿದ್ದಾರೆ. ಆಡಿದ 25 ಪಂದ್ಯಗಳಲ್ಲಿ 972 ರನ್‌ ಸಿಡಿಸಿದ್ದಾರೆ. ಇವರು ಲೀಗ್‌ನಲ್ಲಿ 8 ಅರ್ಧಶತಕ ಬಾರಿಸಿದ್ದಾರೆ.

WPL Top Run-Scorers Nat Sciver-Brunt Leads as Ellyse Perry and Indian Stars Eye Records

ಆಸ್ಟ್ರೇಲಿಯಾದ ದಿಗ್ಗಜ ಆಟಗಾರ್ತಿ ಮೆಗ್‌ ಲ್ಯಾನಿಂಗ್‌ ಬ್ಯಾಟ್‌ನಿಂದಲೂ ರನ್‌ ಹರಿದು ಬಂದಿವೆ. ಕಳೆದ ಮೂರು ಆವೃತ್ತಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಬ್ಯಾಟ್ ಮಾಡಿದ್ದ ಮೆಗ್ ಲ್ಯಾನಿಂಗ್, ಈ ಬಾರಿ ಯುಪಿ ವಾರಿಯರ್ಜ್‌ ಪರ ಆಡಲಿದ್ದಾರೆ. ಇವರು ಈ ವರೆಗೆ ಆಡಿದ 27 ಪಂದ್ಯಗಳಲ್ಲಿ 952 ರನ್‌ ಸಿಡಿಸಿದ್ದಾರೆ. ರನ್‌ ವೇಗದ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಕಲೆ ಇವರದ್ದಾಗಿದೆ.

ಶಫಾಲಿ ವರ್ಮಾ

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಮೂರು ಸ್ಥಾನಗಳನ್ನು ವಿದೇಶಿ ಆಟಗಾರರೇ ಪಡೆದಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಭಾರತದ ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ ಇದ್ದಾರೆ. ಇವರು ಲೀಗ್‌ನಲ್ಲಿ 162ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಬಲ್ಲರು. ಇವರು ಆಡಿದ 27 ಪಂದ್ಯಗಳಲ್ಲಿ 865 ರನ್‌ ಸಿಡಿಸಿದ್ದಾರೆ. ಬೌಂಡರಿ, ಸಿಕ್ಸರ್‌ಗಳನ್ನು ಇವರು ಸಲೀಸಾಗಿ ಬಾರಿಸಬಲ್ಲ ಕ್ಷಮತೆಯನ್ನು ಹೊಂದಿರುವ ಆಟಗಾರ್ತಿ.

ಗರಿಷ್ಠ ರನ್‌ ಕಲೆ ಹಾಕಿದ ಐದನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಇದ್ದಾರೆ. ಇವರು ಲೀಗ್‌ನಲ್ಲಿ ಆಡಿದ 27 ಪಂದ್ಯಗಳಲ್ಲಿ 143ರ ಸ್ಟ್ರೈಕ್ ರೇಟ್‌ನಲ್ಲಿ ರನ್‌ ಕಲೆ ಹಾಕಿದ್ದಾರೆ. ಒಟ್ಟಾರೆ ಇವರು 851 ರನ್‌ ಸೇರಿಸಿದ್ದು, ಇದರಲ್ಲಿ 8 ಅರ್ಧಶತಕಗಳು ಸೇರಿವೆ. ಬೌಂಡರಿಗಳನ್ನು ಬಾರಿಸಿ ರನ್‌ಗಳನ್ನು ಹೆಚ್ಚಿಸಬಲ್ಲ ಕ್ಷಮತೆ ಇವರದ್ದಾಗಿದೆ.

Story first published: Friday, January 2, 2026, 11:11 [IST]
Other articles published on Jan 2, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+