For Quick Alerts
ALLOW NOTIFICATIONS  
For Daily Alerts
 

Wriddhiman Saha: ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾ ಪ್ಲೇಯರ್‌

ಭಾನುವಾರ ಮುಂಬೈನಲ್ಲಿ ಟೀಮ್ ಇಂಡಿಯಾ ಆಡಿದ ಆಟ ಎಲ್ಲರ ಕಣ್ಣು ಮುಂದೆ ಹಾಗೆ ಕಟ್ಟಿದಂತೆ ಇದೆ. ಭಾರತ ತಂಡ ತವರಿನಲ್ಲಿ ಹೀನಾಯ ಪ್ರದರ್ಶನ ನೀಡಿ, ಕ್ಲೀನ್ ಸ್ವೀಪ್‌ ಸೋಲು ಕಂಡಿದೆ. ಈ ಮೂಲಕ ಟೀಕೆಗಳಿಗೆ ಗುರಿಯಾಗುತ್ತಿದೆ. ಇದೇ ವೇಳೆ ಟೀಮ್ ಇಂಡಿಯಾ ಪರ ಆಡಿದ ಆಟಗಾರರೊಬ್ಬರು ಏಕಾಏಕಿ ನಿವೃತ್ತಿ ಘೋಷಿಸಿದ್ದಾರೆ.

ವಿಕೆಟ್‌ ಕೀಪರ್‌ ಆಗಿ ಅಮೋಘ ಸ್ಕಿಲ್‌ಗಳನ್ನು ಹೊಂದಿದ್ದು, ಬ್ಯಾಟರ್‌ ಆಗಿ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುತ್ತಿದ್ದ ವೃದ್ಧಿಮನ್ ಸಹಾ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ವೃದ್ಧಿಮಾನ್ ಸಾಹಾ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.

Wriddhiman Saha Announces Retirement to End Career with 2024 Ranji Trophy

ನಿವೃತ್ತಿ ಬಗ್ಗೆ ಮೌನ ಮುರಿದ ವಿಕೆಟ್ ಕೀಪರ್

ಟೀಮ್ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮನ್ ಸಹಾ ನಿವೃತ್ತಿಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದೇ ನನ್ನ ಕೊನೆಯ ಸೀಸನ್‌ ಆಗಿರಲಿದೆ ಎಂದು ವೃದ್ಧಿಮನ್ ಹೇಳಿದ್ದಾರೆ. ಅಲ್ಲದೆ ಬಂಗಾಳ ತಂಡವನ್ನು ಪ್ರತಿನಿಧಿಸಿರುವ ಗೌರವ ನನಗಿದೆ. ನಿವೃತ್ತಿಗೂ ಮುನ್ನ ರಣಜಿ ಟ್ರೋಫಿಯಲ್ಲಿ ಮಾತ್ರ ಆಡುವೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಪ್ರಸಕ್ತ ರಣಜಿ ಋತುವನ್ನು ಸ್ಮರಣೀಯವಾಗಿಸೋಣ ಎಂದು ತಿಳಿಸಿದ್ದಾರೆ.

ಟೀಮ್ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿ ನಿರ್ಗಮನದ ಬಳಿಕ ಹಲವು ವರ್ಷಗಳ ಕಾಲ ವಿಕೆಟ್ ಹಿಂದಿನ ಕಾರ್ಯವನ್ನು ಅಚ್ಚು ಕಟ್ಟಾಗಿ ಮಾಡಿದ ಕೀರ್ತಿ ಸಹಾಗೆ ಸಲ್ಲುತ್ತದೆ. ತಂಡಕ್ಕೆ ಅಗತ್ಯವಿದ್ದಾಗ ಸಮಯೋಚಿತ ಬ್ಯಾಟಿಂಗ್ ಮೂಲಕವೂ ಆಧಾರವಾಗುತ್ತಿದ್ದ ಆಟಗಾರ. ಇವರು ಭಾರತದ ಪರ ಅಷ್ಟೇ ಅಲ್ಲ, ಪಶ್ಚಿಮ ಬಂಗಾಳ ರಣಜಿ ತಂಡ ಹಾಗೂ ಐಪಿಎಲ್‌ನಲ್ಲಿ ತಾವಾಡಿದ ಫ್ರಾಂಚೈಸಿ ಪರ ಅಮೋಘ ಪ್ರದರ್ಶನ ನೀಡಿರುವ ಪ್ಲೇಯರ್.

Wriddhiman Saha Announces Retirement to End Career with 2024 Ranji Trophy

ಸಹಾ ಐಪಿಎಲ್‌ನಲ್ಲಿ ಐದು ತಂಡಗಳ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಪರ ವಿಕೆಟ್‌ ಕೀಪರ್ ಹಾಗೂ ಬ್ಯಾಟ್ ಮಾಡಿ ಸೈ ಎನಿಸಿಕೊಂಡಿದ್ದಾರೆ.

ವೃದ್ಧಿಮನ್‌ ಸಹಾ ಕ್ರಿಕೆಟ್ ಬದುಕು

ಟೀಮ್ ಇಂಡಿಯಾ ಪರ 40 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಸಹಾ 29.41ರ ಸರಾಸರಿಯಲ್ಲಿ 1353 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 3 ಶತಕ ಹಾಗೂ 6 ಅರ್ಧಶತಕಗಳು ಸೇರಿವೆ. ಇವರು ಭಾರತದ ಪರ 9 ಏಕದಿನ ಪಂದ್ಯಗಳನ್ನು ಆಡಿದ್ದು, 41 ರನ್‌ ಸಿಡಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 138 ಪಂದ್ಯಗಳನ್ನು ಆಡಿದ್ದು, 41.74ರ ಸರಾಸರಿಯಲ್ಲಿ 7013 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 14 ಶತಕ ಹಾಗೂ 43 ಅರ್ಧಶತಕಗಳು ಸೇರಿವೆ. ಇವರು ಭಾರತದ ಪರ ಟಿ20 ಕ್ರಿಕೆಟ್‌ ಆಡುವ ಅವಕಾಶ ಸಿಕ್ಕಿರಲಿಲ್ಲ. ಈಗ ಟೀಮ್ ಇಂಡಿಯಾದಲ್ಲಿ ಬಹುದಿನಗಳಿಂದ ಅವಕಾಶ ಲಭಿಸಿರಲಿಲ್ಲ.

Story first published: Monday, November 4, 2024, 9:26 [IST]
Other articles published on Nov 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+