ನ್ಯೂಜಿಲ್ಯಾಂಡ್ ಟೆಸ್ಟ್‌ಗಾಗಿ ರಣಜಿಯಿಂದ ವೃದ್ಧಿಮಾನ್ ಸಾಹಾಗೆ ವಿಶ್ರಾಂತಿ

ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ ಟೆಸ್ಟ್ ಫಾರ್ಮೆಟ್‌ನ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಅವರಿಗೆ ರಣಜಿ ಪಂದ್ಯದಿಂದ ವಿಶ್ರಾಂತಿ ನೀಡುವಂತೆ ಸೂಚಿಸಲಾಗಿದೆ. ಪಶ್ಷಿಮ ಬಂಗಾಳ ತಂಡವನ್ನು ರಣಜಿಯಲ್ಲಿ ಪ್ರತಿನಿಧಿಸುವ ಸಾಹಾ ಮುಂದಿನ ರಣಜಿ ಪಂದ್ಯದಿಂದ ವಿಶ್ರಾಂತಿಯನ್ನು ಪಡೆಯಲಿದ್ದಾರೆ.
ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿಯನ್ನಾಡಲು ಈಗಾಗಲೆ ನ್ಯೂಜಿಲ್ಯಾಂಡ್‌ಗೆ ಪ್ರವಾಸಕ್ಕೆ ತೆರಳಿದೆ. 24ರಂದು ಸರಣಿ ಮೊದಲ ಪಂದ್ಯ ನಡೆಯಲಿದೆ. ಐದು ಟಿ20 ಪಂದ್ಯದ ಬಳಿಕ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಅದಾದ ಬಳಿಕ ನ್ಯೂಜಿಲ್ಯಾಂಡ್ ತಂಡದ ವಿರುದ್ಧವೇ 2 ಟೆಸ್ಟ್ ಪಂದ್ಯ ನಡೆಯಲಿದೆ. ಫೆಬ್ರವರಿ 21ರಿಂದ ಮೊದಲ ಟೆಸ್ಟ್ ಪಂದ್ಯಯ ಆರಂಭವಾಗಲಿದೆ.
ಈ ಟೆಸ್ಟ್ ಸರಣಿಗೆ ಫಿಟ್ ಇರಬೇಕಾದ ಹಿನ್ನೆಲೆಯಲ್ಲಿ ವೃದ್ಧಿಮಾನ್ ಸಾಹಾ ಮುಂದಿನ ರಣಜಿ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಮುಂದಿನ ಭಾನುವಾರದಿಂದ ರಣಜಿ ಟೂರ್ನಿಯಲ್ಲಿ ಪಶ್ಚಿಮ ಬಂಗಾಳ ತಂಡ ಡೆಲ್ಲಿ ತಂಡವನ್ನು ಎದುರಿಸಲಿದೆ.
ಹೈದರಾಬಾದ್ ವಿರುದ್ಧದ ರಣಜಿ ಪಂದ್ಯವನ್ನು ಪಶ್ಚಿಮ ಬಂಗಾಳ ತಂಡ ಇನ್ನಿಂಗ್ಸ್ ಮತ್ತು 303 ರನ್‌ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿತು. ಬಳಿಕ ಮಾತನಾಡಿದ ಪಶ್ಚಿಮ ಬಂಗಾಳ ತಂಡದ ಕೋಚ್ ಅರುಣ್ ಲಾಲ್, ವೃದ್ಧಿಮಾನ್ ಸಾಹಾ ಅವರ ಅಲಭ್ಯತೆಯ ಕುರಿತಾಗಿ ಹೇಳಿಕೆಯನ್ನು ನೀಡಿದ್ದಾರೆ.
ಮತ್ತೊಂದು ಕಡೆ ಟೀಮ್ ಇಂಡಿಯಾದ ಅನುಭವಿ ವೇಗಿ ಇಶಾಂತ್ ಶರ್ಮಾ ರಣಜಿ ಪಂದ್ಯದ ವೇಳೆ ಗಾಯಗೊಂಡಿದ್ದಾರೆ. ಪಾದದ ಗಾಯಕ್ಕೊಳಗಾಗಿರುವ ಇಶಾಂತ್ ಶರ್ಮಾ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ತಂಡದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications