ಡೇ-ನೈಟ್ ಟೆಸ್ಟ್: ಕೀಪಿಂಗ್ ದಾಖಲೆ ನಿರ್ಮಿಸಿದ ಭಾರತದ ವೃದ್ಧಿಮಾನ್ ಸಹಾ

ಕೋಲ್ಕತ್ತಾ, ನವೆಂಬರ್ 22: ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಡೇ-ನೈಟ್ ಟೆಸ್ಟ್‌ನಲ್ಲಿ ಆಡುತ್ತಿರುವ ಟೀಮ್ ಇಂಡಿಯಾ, ಆರಂಭಿಕ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ತಂಡವನ್ನು ಅತೀ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದೆ. ಪಿಂಕ್ ಬಾಲ್‌ನಲ್ಲಿ ಭಾರತದ ವೇಗಿಗಳು ಪಾರಮ್ಯ ಮೆರೆದಿದ್ದಾರೆ. ಇದೇ ಪಂದ್ಯದಲ್ಲಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾ ದ್ವಿತೀಯ ಟೆಸ್ಟ್ (ಡೇ-ನೈಟ್ ಟೆಸ್ಟ್)ನಲ್ಲಿ ವೃದ್ಧಿಮಾನ್ ಸಹಾ, 100ಕ್ಕೂ ಔಟ್‌ಗಳಿಗೆ ಕಾರಣರಾದ ಭಾರತದ ವಿಕೆಟ್ ಕೀಪರ್ ದಾಖಲೆಗೆ ಕಾರಣರಾಗಿದ್ದಾರೆ. ಸಹಾ, ಬಾಂಗ್ಲಾ ಮೊದಲ ಇನ್ನಿಂಗ್ಸ್‌ನಲ್ಲಿ ಶಾದ್ಮನ್ ಇಸ್ಲಾಮ್ ಮತ್ತು ಮೊಹಮದುಲ್ಲ ಕ್ಯಾಚ್ ಪಡೆದು ಪೆವಿಲಿಯನ್‌ಗಟ್ಟಿದ್ದರು.
ಭಾರತ vs ಬಾಂಗ್ಲಾದೇಶ, ಡೇ-ನೈಟ್ ಟೆಸ್ಟ್, Live ಸ್ಕೋರ್‌ಕಾರ್ಡ್
ಭಾರತದ ವಿಕೆಟ್ ಕೀಪರ್ ಆಗಿದ್ದುಕೊಂಡು ಅತ್ಯಧಿಕ ಔಟ್‌ಗಳಿಗೆ ಕಾರಣರಾದವರಲ್ಲಿ 5ನೇ ಆಟಗಾರರಾಗಿ ಸಹಾ ಗುರುತಿಸಿಕೊಂಡಿದ್ದಾರೆ. ಒಟ್ಟು 69 ಟೆಸ್ಟ್ ಇನ್ನಿಂಗ್ಸ್‌ಗಳನ್ನು ಆಡಿರುವ ಸಹಾ, 100+ ಔಟ್‌ಗಳಿಗೆ ಕಾರಣರಾಗಿದ್ದಾರೆ. ಇದರಲ್ಲಿ 89 ಬಾರಿ ಕ್ಯಾಚ್ ಮೂಲಕ ಔಟ್ ಮಾಡಿದಂತಾಗಿದೆ.
ಈ ದಾಖಲೆ ಸಾಲಿನಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಮೊದಲ ಸ್ಥಾನದಲ್ಲಿದ್ದಾರೆ. ಧೋನಿ 166 ಇನ್ನಿಂಗ್ಸ್‌ಗಳಲ್ಲಿ 294 ಔಟ್, ಸೈಯ್ಯದ್ ಕಿರ್ಮಾನಿ 151 ಇನ್ನಿಂಗ್ಸ್‌ಗಳಲ್ಲಿ 198, ಕಿರಣ್ ಮೋರೆ 90 ಇನ್ನಿಂಗ್ಸ್‌ಗಳಲ್ಲಿ 130, ನಯನ್ ಮೋಂಗಿಯಾ 77 ಇನ್ನಿಂಗ್ಸ್‌ಗಳಲ್ಲಿ 107, ವೃದ್ಧಿಮಾನ್ ಸಹಾ 69 ಇನ್ನಿಂಗ್ಸ್‌ಗಳಲ್ಲಿ 100 ಔಟ್ ದಾಖಲೆ ಹೊಂದಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ, ಶಾದ್ಮನ್ ಇಸ್ಲಾಂ 29, ಇಮ್ರುಲ್ ಕಾಯೆಸ್ 4, ಮೊಹಮದುಲ್ಲ 6, ಲಿಟನ್ ದಾಸ್ 24, ನಯೀಮ್ ಹಸನ್ 19, ಮೆಹಿದಿ ಹಸನ್ 8 ರನ್‌ನೊಂದಿಗೆ 30.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 106 ಬಾರಿಸಿತು. ಇಶಾಂತ್ ಶರ್ಮಾ 5, ಉಮೇಶ್ ಯಾದವ್ 3, ಮೊಹಮ್ಮದ್ ಶಮಿ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications