ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ದಾಖಲೆ ಮುರಿದ ವಿಕೆಟ್ ಕೀಪರ್ ಸಹಾ

By Mahesh
Wriddhiman Saha surpasses MS Dhoni's record of most dismissals in a Test as Indian wicketkeeper

ಕೇಪ್ ಟೌನ್, ಜನವರಿ 09: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿ ಟೀಂ ಇಂಡಿಯಾ ಸೋಲೊಪ್ಪಿಕೊಂಡಿದೆ. ಆದರೆ, ಭಾರತದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಈ ಪಂದ್ಯದಲ್ಲಿ ಎಂಎಸ್ ಧೋನಿ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ಟೆಸ್ಟ್ ಪಂದ್ಯವೊಂದರಲ್ಲಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದ ಧೋನಿಯನ್ನು ಸಹಾ ಹಿಂದಿಕ್ಕಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್ ಟೌನ್ ಪಂದ್ಯದಲ್ಲಿ ಸಹಾ ಅವರಿಗೆ 10 ವಿಕೆಟ್ ಲಭಿಸಿದೆ. ಪಂದ್ಯವೊಂದರಲ್ಲಿ 9 ವಿಕೆಟ್ ಗಳಿಸಿ ಧೋನಿ ದಾಖಲೆ ಬರೆದಿದ್ದರು.

ಮೆಲ್ಬೋರ್ನ್ ನಲ್ಲಿ ಡಿಸೆಂಬರ್ 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧೋನಿ ಈ ಸಾಧನೆ ಮಾಡಿದ್ದರು. ಧೋನಿ ಅವರು ಕ್ಯಾಚ್, ಸ್ಟಂಪಿಂಗ್ ಮೂಲಕ ವಿಕೆಟ್ ಗಳಿಸಿದ್ದರೆ, ಸಹಾ ಅವರು ಎಲ್ಲಾ ವಿಕೆಟ್ ಗಳನ್ನು ಕ್ಯಾಚ್ ಮೂಲಕ ಪಡೆದಿದ್ದಾರೆ.

2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ಚೊಚ್ಚಲ ಪಂದ್ಯವಾಡಿದ ಸಹಾ, ಒಟ್ಟಾರೆಯಾಗಿ ಭಾರತ ಪರ 32 ಟೆಸ್ಟ್ ಪಂದ್ಯಗಳಲ್ಲಿ 85 ವಿಕೆಟ್ ಗಳಿಸಿದ್ದು, 75 ಕ್ಯಾಚ್ ಹಾಗೂ 10 ಸ್ಟಂಪಿಂಗ್ ಸಾಧನೆ ಮಾಡಿದ್ದಾರೆ.

1980ರಲ್ಲಿ ಮುಂಬೈನಲ್ಲಿ ಭಾರತ ವಿರುದ್ಧ ಇಂಗ್ಲೆಂಡಿನ ಬಾಬ್ ಟೇಲರ್, 2000ರಲ್ಲಿ ಹ್ಯಾಮಿಲ್ಟನ್ ನಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾದ ಆಡಂ ಗಿಲ್ ಕ್ರಿಸ್ಟ್ ಕೂಡಾ ಈ ಹಿಂದೆ ಇದೇ ರೀತಿ ಸಾಧನೆಯನ್ನು ಮಾಡಿದ್ದಾರೆ.

ಆದರೆ, ಪಂದ್ಯವೊಂದರಲ್ಲಿ ಹೆಚ್ಚು ವಿಕೆಟ್ ಪಡೆದ ಜಂಟಿ ದಾಖಲೆ ಜಾಕ್ ರಸೆಲ್ ಹಾಗೂ ಎಬಿ ಡಿ ವಿಲಿಯರ್ಸ್ ಹೆಸರಿನಲ್ಲಿದೆ. 1995ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡಿನ ವಿಕೆಟ್ ಕೀಪರ್ ಜಾಕ್ ರಸೆಲ್ 11 ಕ್ಯಾಚ್ ಗಳಿಸಿದ್ದರು. ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಅವರು 2013ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ಪಾಕಿಸ್ತಾನ ವಿರುದ್ಧ ಇದೇ ಸಾಧನೆ ಮಾಡಿದ್ದರು.

Story first published: Tuesday, January 9, 2018, 10:44 [IST]
Other articles published on Jan 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X