ವೃದ್ಧಿಮಾನ್ ಸಾಹ ಕೋವಿಡ್ ವರದಿ ನೆಗೆಟಿವ್, ಶೀಘ್ರ ತಂಡಕ್ಕೆ ಸೇರ್ಪಡೆ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಟೆಸ್ಟ್ ಸ್ಪೆಷಾಲಿಷ್ಟ್, ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಅವರ ಕೋವಿಡ್-19 ವರದಿ ನೆಗೆಟಿವ್ ಬಂದಿದೆ. ಅವರಿನ್ನು ಮುಂಬರಲಿರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಟೀಮ್ ಇಂಡಿಯಾ ಸೇರಲಿದ್ದಾರೆ. ಸದ್ಯ ಕ್ವಾರಂಟೈನ್ ಪಾಲಿಸುತ್ತಿರುವ ಸಾಹ ಕೊರೊನಾ ವರದಿ ನೆಗೆಟಿವ್ ಬಂದಿದೆ.
2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳೆ ವೃದ್ಧಿಮಾನ್ ಸಾಹಗೆ ಕೋವಿಡ್ ಸೋಂಕು ತಗುಲಿತ್ತು. ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದ ಸಾಹ ಸೋಂಕಿಗೀಡಾಗಿದ್ದರು. ಆ ಬಳಿಕ ಇನ್ನೂ ಮೂರು ಫ್ರಾಂಚೈಸಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ 14ನೇ ಆವೃತ್ತಿಯ ಐಪಿಎಲ್ ಅಮಾನತಾಗಿತ್ತು.
ತನ್ನ ಕೋವಿಡ್ ವರದಿ ನೆಗೆಟಿವ್ ಬಂದಿರುವುದನ್ನು ಸಾಹ ಟ್ವೀಟ್ ಮೂಲಕ ತಿಳಿಸಿದ್ದಾರೆ. 'ನನ್ನ ಕ್ವಾರಂಟೈನ್ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ದೈನಂದಿನ ಪರೀಕ್ಷೆಯಂತೆ ಎರಡು ಪರೀಕ್ಷೆಗಳು ನಡೆದಿದ್ದು ಅದರಲ್ಲಿ ಒಂದರ ವರದಿ ನೆಗೆಟಿವ್ ಬಂದಿದೆ. ಅದಕ್ಕೂ ಮುಂದಿನ ವರದಿ ಪಾಸಿಟಿವ್ ಬಂದಿತ್ತು,' ಎಂದು ಬರೆದುಕೊಂಡಿದ್ದಾರೆ.
ಸಾಹ ಮುಂದಿನ ಟ್ವೀಟ್ ಸಾಲುಗಳಲ್ಲಿ ಕೋವಿಡ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸದಂತೆ ಕೋರಿಕೊಂಡಿದ್ದಾರೆ. 'ಕೋವಿಡ್‌ಗೆ ಸಂಬಂಧಿಸಿ ಹಾದಿ ತಪ್ಪಿಸುವ ವರದಿಗಳನ್ನು ಮಾಡಬೇಡಿ ಎಂದು ನಾನು ಕೋರಿಕೊಳ್ಳುತ್ತೇನೆ' ಎಂದು ಸಾಹ ಬರೆದುಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ಹೋಗಲಿರುವ ಟೀಮ್ ಇಂಡಿಯಾ ಆಟಗಾರರೂ ಸದ್ಯ ಕ್ವಾರಂಟೈನ್‌ನಲ್ಲಿದ್ದಾರೆ. ಜೂನ್ 2ಕ್ಕೆ ತಂಡ ಇಂಗ್ಲೆಂಡ್‌ಗೆ ಹೋಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications