WTC 2023 Final: ವಿರಾಟ್ ಕೊಹ್ಲಿ ಸೇರಿ 7 ಕ್ರಿಕೆಟಿಗರು ಲಂಡನ್‌ಗೆ ಪ್ರಯಾಣ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಹಂತವನ್ನು ತಲುಪಿದ್ದು ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳು ಮಾತ್ರವೇ ಬಾಕಿಯಿದೆ. ಹೀಗಾಗಿ ಪ್ಲೇಆಫ್‌ನಿಂದ ಹೊರಬಿದ್ದಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಸದಸ್ಯರು ಶೀಘ್ರದಲ್ಲೇ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ.
ಮೊದಲ ಬ್ಯಾಚ್‌ನಲ್ಲಿ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಸೇರಿದಂತ ಒಟ್ಟು 11 ಕ್ರಿಕೆಟಿಗರು ಪ್ರಯಾಣ ಬೆಳಸಲಿದ್ದು ಇದರಲ್ಲಿ 7 ಆಟಗಾರರು ಸ್ಕ್ವಾಡ್‌ನ ಸದಸ್ಯರಾಗಿದ್ದು ಓರ್ವ ರಿಸರ್ವ್ ಬೌಲರ್ ಹಾಗೂ ಮೂವರು ನೆಟ್ ಬೌಲರ್‌ಗಳು ಸೇರಿದ್ದಾರೆ. ಮಂಗಳವಾರ ಮುಂಜಾನೆಯೇ ಈ ಆಟಗಾರರ ಬಳಗ ಲಂಡನ್‌ಗೆ ಪ್ರಯಾಣ ಬೆಳೆಸಿದೆ.

ಪಿಟಿಐ ವರದಿಯ ಪ್ರಕಾರ ತಂಡದ ಮೊದಲ ಬ್ಯಾಚ್ ಮುಂದಿನ ವಾರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರಯಾಣಿಸಿದೆ. ಏಳು ತಂಡದ ಸದಸ್ಯರಲ್ಲಿ ವಿರಾಟ್ ಕೊಹ್ಲಿ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕತ್ ಸೇರಿದ್ದಾರೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದ ಸಹಾಯಕ ಸಿಬ್ಬಂದಿಗಳು ಕೂಡ ಲಂಡನ್‌ಗೆ ಪ್ರಯಾಣಬೆಳೆಸಿದ್ದಾರೆ.
ಭಾರತೀಯ ತಂಡದ ಸದಸ್ಯರೊಂದಿಗೆ ಇನ್ನೂ ನಾಲ್ಕು ಆಟಗಾರರು ಪ್ರಯಾಣಿಸಿದ್ದಾರೆ. ಮೀಸಲು ಬೌಲರ್ ಆಗಿರುವ ಮುಖೇಶ್ ಕುಮಾರ್ ಲಂಡನ್‌ಗೆ ತೆರಳಲಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್‌ಗೆ ಯುವ ವೇಗಿಗಳಾದ ಅನಿಕೇತ್ ಚೌಧರಿ, ಆಕಾಶ್ ದೀಪ್ ಮತ್ತು ಯರ್ರಾ ಪೃಥ್ವಿರಾಜ್ ನೆಟ್ ಬೌಲರ್‌ಗಳಾಗಿ ತಂಡದೊಂದಿಗೆ ಪ್ರಯಾಣಿಸಿದ್ದಾರೆ.
7 ಆಟಗಾರರು ಐಪಿಎಲ್‌ನಲ್ಲಿ ಇನ್ನು ಸ್ಪರ್ಧಿಸುತ್ತಿದ್ದು ಉಳಿದಂತೆ ಚೇತೇಶ್ವರ್ ಪೂಜಾರ ಈಗಾಗಲೇ ಇಂಗ್ಲೆಂಡ್‌ನಲ್ಲಿದ್ದು ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಭಾಗಿಯಾಗಿದ್ದಾರೆ. ಎರಡರಿಂದ ಮೂರು ಹಂತಗಳಲ್ಲಿ ಆಟಗಾರರು ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.
ಸ್ಕ್ವಾಡ್ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಇಶಾನ್ ಕಿಶನ್ (ವಿಕೆಟ್ ಕೀಪರ್).
ಮೀಸಲು ಆಟಗಾರರು: ಋತುರಾಜ್ ಗಾಯಕ್‌ವಾಡ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications