ಒಂದು ಟೆಸ್ಟ್ ಸೋಲುತ್ತಿದ್ದಂತೆ ಬದಲಾಯಿತು WTC ಅಂಕ ಪಟ್ಟಿಯ ಚಿತ್ರಣ: 4 ತಂಡಗಳಿಂದ 2 ಸ್ಥಾನಕ್ಕೆ ಫೈಟ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್ ಪಂದ್ಯದಲ್ಲಿ ಮುಗಿದಿದೆ. ಆಡಿಲೇಡ್‌ನಲ್ಲಿ ನಡೆದ ಡೇ ಆಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿ, ಸರಣಿಯಲ್ಲಿ ಮುನ್ನಡೆ ಸಾಧಿಸುವ ಭಾರತದ ಆಸೆ ಕಮರಿದೆ. ಭಾರತ ಈ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಸೋಲು ಕಂಡಿದೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 180 ರನ್‌ಗಳಿಗೆ ಆಲೌಟ್ ಆಗಿದ್ದ ಟೀಮ್ ಇಂಡಿಯಾ, ಎರಡನೇ ಇನಿಂಗ್ಸ್‌ನಲ್ಲೂ ಕೇವಲ 175 ರನ್ ಸಿಡಿಸಿತು. ಆದರೆ ಆಸೀಸ್ ಮೊದಲ ಇನಿಂಗ್ಸ್‌ನಲ್ಲೇ 337 ರನ್ ಸೇರಿಸಿ ಭರ್ಜರಿ ಮುನ್ನಡೆ ಸಾಧಿಸಿತು. ಟೀಮ್ ಇಂಡಿಯಾ ನೀಡಿದ್ದ 19 ರನ್‌ಗಳ ಗುರಿಯನ್ನು ಆಸೀಸ್ 3.2 ಓವರ್‌ಗಳಲ್ಲಿ ಮುಟ್ಟಿ ಬೀಗಿತು. ಈ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದೆ.

ಆಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಾಣುತ್ತಿದ್ದಂತೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ ಫೈನಲ್ ತಲುಪುವ ಸಮೀಪಕರಣ ಸಹ ಚೇಂಜ್ ಆಗಿದೆ. ಈ ಒಂದು ಪಂದ್ಯದ ಸೋಲಿನ ಬಳಿಕ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ಭಾರತ
ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದ್ದು ತಂಡಕ್ಕೆ ಬಹುವಾಗಿ ಕಾಡುತ್ತಿದೆ. ಈ ಸೋಲಿನ ಕಹಿ ಈಗ ಪ್ರತಿ ಹಂತದಲ್ಲೂ ತಂಡದ ನಿದ್ದೆ ಗೆಡಿಸುತ್ತಿದೆ. ಆಡಿಲೇಡ್‌ನಲ್ಲಿ ಕಂಡ ಸೋಲು ಭಾರತವನ್ನು ಮೂರನೇ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಉಳಿದ ಮೂರು ಪಂದ್ಯಗಳನ್ನು ಭಾರತ ಗೆದ್ದರೆ, PCT 64.05 ತಲುಪಬಹುದು.
ಭಾರತಕ್ಕೆ ಉಳಿದ ಪಂದ್ಯ: 3
ಅಂಕ ಪಟ್ಟಿಯಲ್ಲಿ ಗೆಲುವಿನ ಶೇಕಡಾ ವಾರು: 57.29
ಆಸ್ಟ್ರೇಲಿಯಾ
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಆಸೀಸ್ ಎರಡನೇ ಪಂದ್ಯದಲ್ಲಿ ಬೌನ್ಸ್ ಬ್ಯಾಕ್ ಮಾಡಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಆಸೀಸ್ ಡಬ್ಲ್ಯುಟಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಂದು ನಿಂತಿದೆ. ಆಸೀಸ್ ತಾನು ಆಡುವ ಪ್ರತಿ ಪಂದ್ಯದಲ್ಲೂ ಗೆಲುವು ದಾಖಲಿಸಿದರೆ 71.05 ಅಂಕಗಳನ್ನು ಕಲೆ ಹಾಕಲಿದೆ. ಭಾರತದ ವಿರುದ್ಧದ ಸರಣಿ ಗೆಲುವು ಹಾಗೂ ಲಂಕಾ ವಿರುದ್ಧ ಕ್ಲೀನ್ ಸ್ವೀಪ್ ಸಾಧನೆ ಮಾಡಿದರೂ ಫೈನಲ್ ಪ್ರವೇಶಿಸಬಹುದು.
ಆಸ್ಟ್ರೇಲಿಯಾಕ್ಕೆ ಉಳಿದ ಪಂದ್ಯ: 5
ಅಂಕ ಪಟ್ಟಿಯಲ್ಲಿ ಗೆಲುವಿನ ಶೇಕಡಾ ವಾರು: 60.71
ಶ್ರೀಲಂಕಾ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಶ್ರೀಲಂಕಾ ಸ್ಥಿರ ಪ್ರದರ್ಶನವನ್ನು ನೀಡುತ್ತಿದೆ. ಈ ತಂಡ ಆಡಿದ ಟ0 ಪಂದ್ಯಗಳಲ್ಲಿ 5 ಗೆಲುವು, 5 ಸೋಲು ಕಂಡಿದ್ದು, ಗೆಲುವಿನ ಶೇಕಡಾ ವಾರು 50 ಆಗಿದೆ. ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ಈ ತಂಡ ಸಹ ಫೈನಲ್ ಪ್ರವೇಶಿಸಲು ಬೇಕಾದ (69.44 ಅಂಕ) ಕಲೆ ಹಾಕಬಹುದು.
ಶ್ರೀಲಂಕಾಕ್ಕೆ ಉಳಿದ ಪಂದ್ಯ: 3
ಅಂಕ ಪಟ್ಟಿಯಲ್ಲಿ ಗೆಲುವಿನ ಶೇಕಡಾ ವಾರು: 50.00
ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ ತಂಡಕ್ಕೂ ಫೈನಲ್ ಪ್ರವೇಶಿಸುವ ಚಾನ್ಸ್ ಇದೆ. ಆಫ್ರಿಕಾ ಇನ್ನು ಮೂರು ಪಂದ್ಯಗಳನ್ನು ಆಡಬೇಕಿದ್ದು, ಈ ಮೂರರಲ್ಲೂ ಜಯ ಸಾಧಿಸಿದರೆ, ಅಂಕ 69.44 ಆಗುತ್ತದೆ. ಲಂಕಾ ವಿರುದ್ಧ ಜಯ ಸಾಧಿಸಿ, ಪಾಕ್ ವಿರುದ್ಧ ಡ್ರಾ ಸಾಧಿಸಿದರೂ ಆಫ್ರಿಕಾ ಫೈನಲ್ ಪ್ರವೇಶಿಸಬಹುದು.
ದಕ್ಷಿಣ ಆಫ್ರಿಕಾಕ್ಕೆ ಉಳಿದ ಪಂದ್ಯ: 3
ಅಂಕ ಪಟ್ಟಿಯಲ್ಲಿ ಗೆಲುವಿನ ಶೇಕಡಾ ವಾರು: 59.26
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications