WTC Final: ತಮ್ಮ 83ನೇ ಟೆಸ್ಟ್ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ ಅಜಿಂಕ್ಯ ರಹಾನೆ
ಲಂಡನ್‌ನ ಓವಲ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ವಿರುದ್ಧ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿತ್ತು. ಮೂರನೇ ದಿನದಾಟದಲ್ಲಿ ಭಾರತ ತಂಡ ಫಾಲೋ-ಆನ್ ತಪ್ಪಿಸಿಕೊಳ್ಳಲು ಪ್ರತ್ಯುತ್ತರ ನೀಡಲಾಗುತ್ತಿದೆ.
ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್‌ಗಳಿಗೆ ಸರ್ವಪತನ ಕಂಡಿದ್ದರೆ, ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಸದ್ಯ 265 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ 129 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 89 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಸದ್ಯ ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್ ಕ್ರಮವಾಗಿ 40 ಮತ್ತು 1 ರನ್ ಗಳಿಸಿ ಮೂರನೇ ದಿನದಾಟದಲ್ಲಿ ಭಾರತದ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಇದೇ ವೇಳೆ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಶುಕ್ರವಾರ ಟೆಸ್ಟ್ ಕ್ರಿಕೆಟ್‌ನಲ್ಲಿ 5000 ರನ್ ಪೂರೈಸಿ, ಸುದೀರ್ಘ ಸ್ವರೂಪಕ್ಕೆ ಅತ್ಯುತ್ತಮವಾಗಿ ಪುನರಾಗಮನ ಮಾಡಿದರು. ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ 3ನೇ ದಿನದಂದು 35 ವರ್ಷದ ಅಜಿಂಕ್ಯ ರಹಾನೆ ಈ ಸಾಧನೆ ಮಾಡಿದರು.
ಅಜಿಂಕ್ಯ ರಹಾನೆ ತಮ್ಮ 83ನೇ ಟೆಸ್ಟ್ ಪಂದ್ಯದಲ್ಲಿ 69 ರನ್ ಗಳಿಸಿದಾಗ 5000 ರನ್‌ಗಳ ಸಾಧನೆ ಮಾಡಿದರು. ಈ ಹಾದಿಯಲ್ಲಿ ತಮ್ಮ 26ನೇ ಅರ್ಧಶತಕವನ್ನು ಪೂರೈಸಿದರು. ಜನವರಿ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ವಿದೇಶ ಸರಣಿಯ ನಂತರ ಅಜಿಂಕ್ಯ ರಹಾನೆ ಅವರನ್ನು ಭಾರತದ ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು.

ನಂತರದ ಶ್ರೀಲಂಕಾ ವಿರುದ್ಧದ ತವರಿನ ಸರಣಿ, ಇಂಗ್ಲೆಂಡ್ ವಿರುದ್ಧದ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಮತ್ತು 2023ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಐಪಿಎಲ್ ಸೇರಿದಂತೆ ದೇಶೀಯ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಭಾರತ ಟೆಸ್ಟ್ ತಂಡಕ್ಕೆ ಮರಳಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ 5000 ರನ್‌ಗಳಿಗಿಂತ ಹೆಚ್ಚು ರನ್ ಗಳಿಸಿದ ಭಾರತದ ಹಲವು ದಿಗ್ಗಜರೊಂದಿಗೆ ಮುಂಬೈ ಬ್ಯಾಟರ್ ಅಜಿಂಕ್ಯ ರಹಾನೆ 13ನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಭಾರತೀಯ ಆಟಗಾರರು
ಸಚಿನ್ ತೆಂಡೂಲ್ಕರ್ - (15921)
ರಾಹುಲ್ ದ್ರಾವಿಡ್ - (13265)
ಸುನಿಲ್ ಗವಾಸ್ಕರ್ - (10122)
ವಿವಿಎಸ್ ಲಕ್ಷ್ಮಣ್ - (8781)
ವೀರೇಂದ್ರ ಸೆಹ್ವಾಗ್ - (8503)
ವಿರಾಟ್ ಕೊಹ್ಲಿ - (8430*)
ಸೌರವ್ ಗಂಗೂಲಿ - (7212)
ಚೇತೇಶ್ವರ ಪೂಜಾರ - (7168*)
ದಿಲೀಪ್ ವೆಂಗ್‌ಸರ್ಕರ್ - (6868)
ಮೊಹಮ್ಮದ್ ಅಜರುದ್ದೀನ್ - (6215)
ಗುಂಡಪ್ಪ ವಿಶ್ವನಾಥ್ - (6080)
ಕಪಿಲ್ ದೇವ್ - (5248)
ಅಜಿಂಕ್ಯ ರಹಾನೆ - (5020*)
ಇತ್ತೀಚಿಗೆ 2023ರ ಐಪಿಎಲ್ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ತನ್ನ ಹೊಸ ರೂಪವನ್ನು ಪ್ರದರ್ಶಿಸಿದರು. ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಅಜೇಯ 71 ರನ್ ಸೇರಿದಂತೆ 326 ರನ್ ಗಳಿಸಿದರು.
ಸಿಎಸ್‌ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ರಹಾನೆ ಅವರ ರೂಪಾಂತರದ ಬಗ್ಗೆ ಮೊದಲು ಮಾತನಾಡಿದ್ದು, ಬಲಗೈ ಆಟಗಾರ ಅಜಿಂಕ್ಯ ರಹಾನೆ ಉತ್ತಮವಾಗಿ ಆಡಿದರು. ಸಿಎಸ್‌ಕೆ ತಂಡ ಅವರಿಂದ ಅತ್ಯುತ್ತಮ ಪ್ರದರ್ಶನ ಹೊರಗೆ ತೆಗೆಯಿತು ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications