WTC Final: ಕೈ ಬೆರಳು ಗಾಯದ ಬಗ್ಗೆ ಮಹತ್ವದ ಮಾಹಿತಿ ನೀಡಿದ ಅಜಿಂಕ್ಯ ರಹಾನೆ
ಎರಡು ವರ್ಷಗಳ ನಂತರ ಭಾರತ ತಂಡಕ್ಕೆ ಹಿಂದಿರುಗಿದ ನಂತರ, ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ 89 ರನ್ ಗಳಿಸಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ತಂಡ 296 ರನ್‌ಗಳನ್ನು ಗಳಿಸಲು ನೆರವಾದರು.
ಭಾರತದ ಅಗ್ರ ಕ್ರಮಾಂಕ ದೊಡ್ಡ ಮೊತ್ತ ಗಳಿಸಲು ವಿಫಲವಾದಾಗ, ಅಜಿಂಕ್ಯ ರಹಾನೆ ನೆಲಕಚ್ಚಿ ಆಡಿದರು. ಅಲ್ಲದೇ ಪಂದ್ಯದಲ್ಲಿ ಸಾಕಷ್ಟು ಬಿಗಿ ಹಿಡಿತ ಸಾಧಿಸಲು ಪ್ರಯತ್ನಿಸಿದರು. ಮಧ್ಯಮ ಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್ ಅವರೊಂದಿಗೆ ಅತ್ಯಂತ ನಿರ್ಣಾಯಕ ಜೊತೆಯಾಟ ನಿರ್ಮಿಸಿದರು.

ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿದ್ದಾಗ, ಆಸ್ಟ್ರೇಲಿಯಾದ ಬೌಲರ್‌ಗಳು ತುಂಬಾ ಕಠಿಣವಾಗಿ ಬೌಲಿಂಗ್ ಮಾಡಿದರು. ಈ ವೇಳೆ 35 ವರ್ಷದ ಬ್ಯಾಟರ್ ರಹಾನೆ ಶಾಂತವಾಗಿ ದೇಹಕ್ಕೆ ಸಾಕಷ್ಟು ಹೊಡೆತಗಳು ಬಿದ್ದವು. ಬ್ಯಾಟಿಂಗ್ ಮಾಡುವಾಗ ತಮ್ಮ ಕೈ ಬೆರಳಿಗೆ ಬಲವಾದ ಹೊಡೆತ ಬಿದ್ದಿತು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಬೆರಳಿನ ಗಾಯ ತಮಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಸುದೀರ್ಘ ಅವಧಿಗೆ ಟೆಸ್ಟ್ ತಂಡದಿಂದ ಹೊರಗುಳಿದಿದ್ದ ಅಜಿಂಕ್ಯ ರಹಾನೆ, ಇದೀಗ ಮಧ್ಯಮ ಕ್ರಮಾಂಕದಲ್ಲಿ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 320ರಿಂದ 330 ರನ್ ತಲುಪಲು ನೋಡುತ್ತಿತ್ತು. ಆದರೆ 3ನೇ ದಿನದ ಆಟದಲ್ಲಿ 296 ರನ್‌ಗಳಿಗೆ ಭಾರತ ಆಲೌಟ್ ಆಯಿತು.
"ಬೆರಳಿನ ನೋವಿದೆ, ಆದರೆ ಸಾಕಷ್ಟು ನಿರ್ವಹಿಸಬಲ್ಲೆ. ಇದು ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸಬೇಡಿ," ಎಂದು ಅಜಿಂಕ್ಯ ರಹಾನೆ ಮೂರನೇ ದಿನದಾಟದ ನಂತರ ತಮ್ಮ ಗಾಯದ ಬಗ್ಗೆ ಕೇಳಿದಾಗ ಹೇಳಿದರು.
"ನಾನು ಬ್ಯಾಟಿಂಗ್ ಮಾಡಿದ ರೀತಿಯಿಂದ ನನಗೆ ಸಂತೋಷವಿದೆ. ನಾವು 320-330 ರನ್ ಗಳಿಸಲು ಎದುರು ನೋಡುತ್ತಿದ್ದೆವು. ಆದರೆ ಒಟ್ಟಾರೆಯಾಗಿ ನಾವು ಉತ್ತಮ ದಿನವನ್ನು ಹೊಂದಿದ್ದೇವೆ," ಎಂದು ಅಜಿಂಕ್ಯ ರಹಾನೆ ತಿಳಿಸಿದರು.
ವೇಗದ ಬೌಲರ್‌ಗಳಿಗೆ ಪಿಚ್ ಸಹಾಯ ಮಾಡುತ್ತದೆ ಎಂದ ರಹಾನೆ
ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಆಡಿಸದಿರುವುದು ಇನ್ನೂ ಬಹಳ ಚರ್ಚೆಯ ವಿಷಯವಾಗಿದೆ. ವಿಶೇಷವಾಗಿ 3ನೇ ದಿನದಂದು ಬಾಲ್ ತಿರುಗುತ್ತದೆ. ಆದಾಗ್ಯೂ, 2020-21ರಲ್ಲಿ ಐತಿಹಾಸಿಕ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಭಾರತ ಗೆಲ್ಲಲು ಅಜಿಂಕ್ಯ ರಹಾನೆ ಯಶಸ್ವಿಯಾಗಿ ಮುನ್ನಡೆಸಿದ್ದರು.
ಉಳಿದ ಎರಡು ದಿನಗಳಲ್ಲಿ ಪಿಚ್ ಇನ್ನೂ ವೇಗಿಗಳಿಗೆ ಸಹಾಯ ಮಾಡುತ್ತದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ರವೀಂದ್ರ ಜಡೇಜಾ 3ನೇ ದಿನದ ಅಂತ್ಯದ ವೇಳೆಗೆ ಎರಡು ವಿಕೆಟ್ ಕಬಳಿಸಿದ್ದಕ್ಕಾಗಿ ಶ್ಲಾಘಿಸಿದರು.
"ಬಹಳ ಬುದ್ಧಿವಂತಿಕೆಯಿಂದ ನಾವು ಚೆನ್ನಾಗಿ ಬೌಲಿಂಗ್ ಮಾಡಿದ್ದೇವೆ. ದಿನದ ಅಂತ್ಯದಲ್ಲಿ ಜಡೇಜಾ ಚೆನ್ನಾಗಿ ಬೌಲಿಂಗ್ ಮಾಡಿದರು. ಆದರೂ ವೇಗದ ಬೌಲರ್‌ಗಳಿಗೆ ವಿಕೆಟ್ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ," ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟರು.
ನಾಲ್ಕನೇ ದಿನದಾಟ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ 296 ರನ್‌ಗಳಿಂದ ಮುನ್ನಡೆಯಲ್ಲಿದೆ. ಭಾರತ ಪಂದ್ಯವನ್ನು ತನ್ನತ್ತ ತಿರುಗಿಸಿಕೊಳ್ಳಲು ಮೈದಾನದಲ್ಲಿ ಬೌಲರ್‌ಗಳು ಮ್ಯಾಜಿಕ್ ಮಾಡುವ ಅಗತ್ಯವಿದೆ. ಆ ಬಳಿಕ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಂಡು ರನ್ ಗಳಿಸಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications