WTC Final: ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಕೊಹ್ಲಿ-ರಹಾನೆ ಆಸರೆ; ಭಾನುವಾರ ಒಲಿಯುತ್ತಾ ಗೆಲುವು?
ಲಂಡನ್‌ನ ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ನಾಲ್ಕನೇ ದಿನ ಆಸ್ಟ್ರೇಲಿಯಾ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ, ಆರಂಭಿಕ ಮೂರು ವಿಕೆಟ್ ಪತನದ ನಡುವೆಯೂ ಉತ್ತಮ ಸ್ಥಿತಿ ಕಾಪಾಡಿಕೊಂಡಿದೆ.
444 ರನ್‌ಗಳ ದೊಡ್ಡ ಮೊತ್ತದ ಚೇಸಿಂಗ್‌ನಲ್ಲಿರುವ ರೋಹಿತ್ ಶರ್ಮಾ ಬಳಗ, ನಾಲ್ಕನೇ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಕಲೆಹಾಕಿದೆ. ಐದನೇ ಹಾಗೂ ಅಂತಿಮ ದಿನದಂದು ಭಾರತದ ಗೆಲುವಿಗೆ ಇನ್ನೂ 280 ರನ್‌ಗಳ ಅವಶ್ಯಕತೆ ಇದ್ದು, ಕೈಯಲ್ಲಿ 7 ವಿಕೆಟ್ ಉಳಿದಿವೆ.

ಆಸೀಸ್ ನೀಡಿದ 444 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಉತ್ತಮ ಜೊತೆಯಾಟ ನೀಡುವ ಮುನ್ಸೂಚನೆ ನೀಡಿದ್ದರು. ಆದರೆ 41 ರನ್‌ಗಳಾಗಿದ್ದಾಗ ಶುಭ್ಮನ್ ಗಿಲ್ 18 ರನ್ ಗಳಿಸಿ ವಿವಾದಾತ್ಮಕ ಕ್ಯಾಚ್‌ಗೆ ಔಟಾದರು.
ನಂತರ, ನಾಯಕ ರೋಹಿತ್ ಶರ್ಮಾ ಜೊತೆಗೂಡಿದ ಚೇತೇಶ್ವರ ಪೂಜಾರ ದೊಡ್ಡ ಮೊತ್ತ ಗಳಿಸಲು ವಿಫಲರಾದರು. 47 ಎಸೆತಗಳಲ್ಲಿ 27 ರನ್ ಗಳಿಸಿ ಕೀಪರ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಇನ್ನು ಅಬ್ಬರದ ಬ್ಯಾಟಿಂಗ್‌ಗೆ ಮುಂದಾಗಿದ್ದ ರೋಹಿತ್ ಶರ್ಮಾ 60 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 43 ರನ್ ಗಳಿಸಿದ್ದಾಗ ನಾಥನ್ ಲಿಯಾನ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.

ಆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಮುರಿಯದ ನಾಲ್ಕನೇ ವಿಕೆಟ್‌ಗೆ 71 ರನ್‌ಗಳ ಜೊತೆಯಾಟ ನೀಡಿ, ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ 7 ಬೌಂಡರಿ ಸಮೇತ 40 ರನ್ ಗಳಿಸಿದ್ದರೆ, ಅಜಿಂಕ್ಯ ರಹಾನೆ 59 ಎಸೆತಗಳಲ್ಲಿ 20 ರನ್ ಗಳಿಸಿದ್ದಾರೆ. ಇದೇ ರೀತಿ ಈ ಜೋಡಿ ಬ್ಯಾಟಿಂಗ್ ಮುಂದುವರೆಸಿದರೆ ಭಾರತಕ್ಕೆ ದಶಕದ ಬಳಿಕ ಐಸಿಸಿ ಪ್ರಶಸ್ತಿ ಒಲಿದು ಬರಲಿದೆ.
ಇನ್ನು ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ಪ್ಯಾಟ್ ಕಮ್ಮಿನ್ಸ್, ಸ್ಕಾಟ್ ಬೋಲ್ಯಾಂಡ್ ಮತ್ತು ನಾಥನ್ ಲಿಯಾನ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications