Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final: 'ಈ ಪೀಳಿಗೆಯ ಅತ್ಯುತ್ತಮ ಟೆಸ್ಟ್ ಆಟಗಾರ'; ಎದುರಾಳಿ ಆಟಗಾರನನ್ನು ಹೊಗಳಿದ ವಿರಾಟ್ ಕೊಹ್ಲಿ

ಜೂನ್ 7ರಿಂದ ಇಂಗ್ಲೆಂಡ್‌ನ ಓವಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆರಂಭವಾಗಿದ್ದು, ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ 3 ವಿಕೆಟ್‌ಗೆ 327 ರನ್ ಗಳಿಸಿ ಉತ್ತಮ ಮೊತ್ತ ಕಲೆಹಾಕಿದೆ.

ಇನ್ನು ಪಂದ್ಯಕ್ಕೂ ಮೊದಲು ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಮಾತನಾಡಿ, "ನನ್ನ ಪ್ರಕಾರ, ಸ್ಟೀವ್ ಸ್ಮಿತ್ ಈ ಪೀಳಿಗೆಯ ಅತ್ಯುತ್ತಮ ಟೆಸ್ಟ್ ಆಟಗಾರ" ಎಂದು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ನನ್ನು ಶ್ಲಾಘಿಸಿದ್ದಾರೆ.

WTC Final 2023: Indias Virat Kohli Praises Australia Batsman Steve Smith


"ಸ್ಟೀವ್ ಸ್ಮಿತ್ ಅವರ ಹೊಂದಾಣಿಕೆಯು ಸಂಪೂರ್ಣವಾಗಿ ಅದ್ಭುತವಾಗಿದೆ. ನೀವು ಈ ಪೀಳಿಗೆಯ ಯಾವುದೇ ಕ್ರಿಕೆಟಿಗರನ್ನು ನೋಡಿ, ಆದರೆ ಸ್ಮಿತ್ 85-90 ಟೆಸ್ಟ್‌ಗಳಲ್ಲಿ 60ರ ಸರಾಸರಿಯನ್ನು ಹೊಂದಿದ್ದಾರೆ, ಇದು ನಂಬಲಸಾಧ್ಯವಾಗಿದೆ. ಅವರು ರನ್ ಗಳಿಸುವ ಸ್ಥಿರತೆ ಮತ್ತು ಪ್ರಭಾವ ಕಳೆದ 10 ವರ್ಷಗಳಲ್ಲಿ ಬೇರೆ ಯಾರೂ ಹಾಗೆ ಮಾಡುವುದನ್ನು ನಾನು ನೋಡಿಲ್ಲ," ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

"ಖಂಡಿತವಾಗಿಯೂ, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ ಅವರೊಂದಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮುಖ ಆಟಗಾರ. ಏಕೆಂದರೆ ಅವರು ತಮ್ಮ ಬ್ಯಾಟಿಂಗ್ ಲೈನ್‌ಅಪ್ ಅನ್ನು ನಿಯಂತ್ರಿಸುತ್ತಾರೆ," ಎಂದು ವಿರಾಟ್ ಕೊಹ್ಲಿ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

"ಸ್ಟೀವ್ ಸ್ಮಿತ್ ಯಾವಾಗಲೂ ನಮ್ಮ ವಿರುದ್ಧ ಉತ್ತಮವಾಗಿ ಆಡಿದ್ದಾರೆ ಮತ್ತು ಅವರು ಇಂಗ್ಲೆಂಡ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನೀವು ಅವರನ್ನು ಆದಷ್ಟು ಬೇಗ ಔಟ್ ಮಾಡಲು ಬಯಸುತ್ತೀರಿ. ಏಕೆಂದರೆ ಅವರು ಪಂದ್ಯವನ್ನು ಗೆಲ್ಲಿಸುವ ಪ್ರಭಾವ ಹೊಂದಿರುತ್ತಾರೆ," ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟರು.

WTC Final 2023: Indias Virat Kohli Praises Australia Batsman Steve Smith

2022ರ ಕೊನೆಗೆ ಎಲ್ಲಾ ಮಾದರಿಯ ಆಟಗಳಲ್ಲಿ ಬ್ಯಾಟಿಂಗ್ ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ, ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 48.26 ಸರಾಸರಿ ಮತ್ತು 52.25 ಸ್ಟ್ರೈಕ್ ರೇಟ್‌ನೊಂದಿಗೆ ಒಟ್ಟು 1979 ರನ್‌ಗಳನ್ನು ಬಾರಿಸಿದ್ದಾರೆ. ಇನ್ನು ಸ್ಟೀವ್ ಸ್ಮಿತ್ ಭಾರತದ ವಿರುದ್ಧ 65.06 ಸರಾಸರಿ ಮತ್ತು 52.79 ಸ್ಟ್ರೈಕ್ ರೇಟ್‌ನೊಂದಿಗೆ 1887 ಟೆಸ್ಟ್ ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಒಟ್ಟು 8 ಟೆಸ್ಟ್ ಶತಕ ಮತ್ತು 5 ಅರ್ಧಶತಕಗಳನ್ನು ಗಳಿಸಿದ್ದಾರೆ. ಸ್ಟೀವ್ ಸ್ಮಿತ್ ಕೂಡ ಭಾರತದ ವಿರುದ್ಧ 8 ಟೆಸ್ಟ್ ಶತಕಗಳು ಮತ್ತು 5 ಅರ್ಧಶತಕಗಳನ್ನು ಬಾರಿಸಿರುವುದು ವಿಶೇಷವಾಗಿದೆ.

ಆಸ್ಟ್ರೇಲಿಯಾದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತದ ವಿರುದ್ಧ ಸ್ಟೀವ್ ಸ್ಮಿತ್ ಅವರ ಅತ್ಯಧಿಕ ಟೆಸ್ಟ್ ಸ್ಕೋರ್ 192 ಆಗಿದೆ. ಇದೇ ವೇಳೆ, ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಅವರ ಅತ್ಯಧಿಕ ಟೆಸ್ಟ್ ಸ್ಕೋರ್ ಭಾರತದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 186 ರನ್ ಆಗಿದೆ.

WTC Final 2023: Indias Virat Kohli Praises Australia Batsman Steve Smith

ಐಸಿಸಿ ನಾಕೌಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಒಟ್ಟಾರೆ 15 ಪಂದ್ಯಗಳ 16 ಇನ್ನಿಂಗ್ಸ್‌ಗಳಲ್ಲಿ 51ಕ್ಕಿಂತ ಹೆಚ್ಚು ಸರಾಸರಿಯಲ್ಲಿ 620 ರನ್ ಗಳಿಸಿದ್ದಾರೆ. ಈ ವೇಳೆ ಆರು ಅರ್ಧಶತಕ ಬಂದಿವೆ. ಮತ್ತೊಂದೆಡೆ, ಸ್ಟೀವ್ ಸ್ಮಿತ್ ಏಳು ನಾಕೌಟ್ ಇನ್ನಿಂಗ್ಸ್‌ಗಳಲ್ಲಿ 80.5 ಸರಾಸರಿಯಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ ಒಟ್ಟು 322 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯಾ 19 ಪಂದ್ಯಗಳಲ್ಲಿ 11 ಗೆಲುವು, ಮೂರು ಸೋಲು ಮತ್ತು ಐದು ಡ್ರಾಗಳೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿ ಮುಗಿಸಿದರೆ, ಭಾರತ ತಂಡ 10 ಗೆಲುವು, ಐದು ಸೋಲು ಮತ್ತು ಮೂರು ಡ್ರಾಗಳೊಂದಿಗೆ ಎರಡನೇ ಸ್ಥಾನ ಪಡೆಯಿತು.

Story first published: Thursday, June 8, 2023, 8:26 [IST]
Other articles published on Jun 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+