WTC Final: ಭಾರತ vs ಆಸ್ಟ್ರೇಲಿಯಾ ಸಂಯೋಜಿತ ಆಡುವ 11ರ ಬಳಗ ಆಯ್ಕೆ ಮಾಡಿದ ನಾಸಿರ್ ಹುಸೇನ್
2022-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕೇವಲ ಒಂದು ವಾರ ಬಾಕಿಯಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ಜೂನ್ 7ರಿಂದ ಲಂಡನ್‌ನ ಓವಲ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸೆಣಸಾಡಲು ಸಿದ್ಧವಾಗಿವೆ.
ಬಹುನಿರೀಕ್ಷಿತ ಪಂದ್ಯಕ್ಕೆ ಮುಂಚಿತವಾಗಿ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ನಾಸಿರ್ ಹುಸೇನ್ ಭಾಗವಹಿಸುವ ಎರಡು ತಂಡಗಳಿಂದ ತಮ್ಮ ಸಂಯೋಜಿತ ಆಡುವ 11ರ ಬಳಗವನ್ನು ಆಯ್ಕೆ ಮಾಡಿದ್ದಾರೆ. ಈ ಆಡುವ 11ರ ತಂಡದಲ್ಲಿ ಕೇವಲ ನಾಲ್ಕು ಭಾರತೀಯ ಆಟಗಾರರು ಮತ್ತು ಏಳು ಆಸ್ಟ್ರೇಲಿಯನ್ನರನ್ನು ಒಳಗೊಂಡಿದೆ.

ನಾಸಿರ್ ಹುಸೇನ್ ಅವರ ಸಂಯೋಜಿತ ಆಡುವ 11ರ ಬಳಗದಿಂದ ಅತ್ಯಂತ ಆಶ್ಚರ್ಯಕರವಾಗಿ ಹೊರಗಿಡಲಾದ ಹೆಸರೆಂದರೆ ಭಾರತದ ಆಲ್-ರೌಂಡರ್ ರವೀಂದ್ರ ಜಡೇಜಾ. ಎಡಗೈ ಆಲ್‌ರೌಂಡರ್ ಇಂಗ್ಲೆಂಡ್‌ನಲ್ಲಿ 29.70 ಸರಾಸರಿಯಲ್ಲಿ ಮೂರು ಅರ್ಧಶತಕ ಮತ್ತು ಒಂದು ಶತಕ ಗಳಿಸಿದ್ದಾರೆ ಮತ್ತು ಅವರ ಹೆಸರಿನಲ್ಲಿ 23 ವಿಕೆಟ್‌ಗಳನ್ನು ಸಹ ಹೊಂದಿದ್ದಾರೆ.
ಆದರೆ, "ಇಂಗ್ಲೆಂಡ್‌ನ ಮಾಜಿ ನಾಯಕ ನಸಿರ್ ಹುಸೇನ್ ರವೀಂದ್ರ ಜಡೇಜಾ ಮತ್ತು ನಾಥನ್ ಲಿಯಾನ್ ಅವರ ಬದಲಿಗೆ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ತಂಡದಲ್ಲಿ ಏಕೈಕ ಸ್ಪಿನ್ನರ್ ಎಂದು ಆಯ್ಕೆ ಮಾಡಿದ್ದಾರೆ. ಇಂಗ್ಲೆಂಡ್‌ನಲ್ಲಿ ಫೈನಲ್ ಆಗಿರುವುದರಿಂದ ತಂಡಕ್ಕೆ ಇಬ್ಬರು ಸ್ಪಿನ್ನರ್‌ಗಳ ಅಗತ್ಯವಿಲ್ಲ," ಎಂದು ಸಮರ್ಥನೆ ನೀಡಿದ್ದಾರೆ.
"ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಭಾರತದಲ್ಲಿ ನಡೆದಿದ್ದರೆ, ನಾನು ರವೀಂದ್ರ ಜಡೇಜಾ ಅವರನ್ನು ಆರನೇ ಕ್ರಮಾಂಕದಲ್ಲಿ ಆಡಿಸುತ್ತಿದ್ದೆ. ಆದರೆ, ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಾರಣ ನಾನು ಆಯ್ಕೆ ಮಾಡಿಲ್ಲ. ನಾನು ಕ್ಯಾಮೆರಾನ್ ಗ್ರೀನ್‌ನಲ್ಲಿ ಬೌಲಿಂಗ್ ಆಲ್‌ರೌಂಡರ್, ವೇಗದ ಬೌಲರ್ ಹುಡುಕುತ್ತೇನೆ".

"ಕ್ಯಾಮೆರಾನ್ ಗ್ರೀನ್ ನನ್ನ ಆಲ್‌ರೌಂಡರ್ ಆಯ್ಕೆಯಾಗಿದ್ದಾನೆ. ನನ್ನ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಎಂಟನೇ ಸ್ಥಾನದಲ್ಲಿದ್ದಾರೆ. ಅತ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಷಯವಾಗಿ ನಂ.8 ನಲ್ಲಿ ತುಂಬಾ ಚೆನ್ನಾಗಿ ಆಡುತ್ತಾರೆ," ಎಂದು ನಾಸಿರ್ ಹುಸೇನ್ ಐಸಿಸಿ ರಿವ್ಯೂಗೆ ತಿಳಿಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಸಂಯೋಜಿತ ಆಡುವ 11ರ ಬಳಗದ ಬಗ್ಗೆ ಮತ್ತಷ್ಟು ಮಾತನಾಡಿದ ನಾಸಿರ್ ಹುಸೇನ್, ರೋಹಿತ್ ಶರ್ಮಾ ಅವರನ್ನು ತಂಡದ ನಾಯಕರಾಗಿ ಮತ್ತು ಉಸ್ಮಾನ್ ಖವಾಜಾ ಜೊತೆಗೆ ಆರಂಭಿಕ ಬ್ಯಾಟರ್ ಆಗಿ ಆಯ್ಕೆ ಮಾಡಿದರು.
ಆ ಬಳಿಕ ಆಧುನಿಕ ಯುಗದ ಮೂರು ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳಾದ ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಮೂರು, ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಆಯ್ಕೆ ಮಾಡಿದರು.

"ಹಿತ್ ಶರ್ಮಾ ಅವರನ್ನು ನಾಯಕನಾಗಿ ಮತ್ತು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡುತ್ತೇನೆ. ರೋಹಿತ್ ನಾಯಕತ್ವದ ಶೈಲಿಯನ್ನು ಪ್ರೀತಿಸುತ್ತೇನೆ. ನಾನು ಶುಭ್ಮನ್ ಗಿಲ್ ಅವರು ತಂಡದಲ್ಲಿರಲು ಬಯಸುತ್ತೇನೆ. ಆದರೆ ಅವರಿಗಿಂತ ಮುಂಚೆ ಉಸ್ಮಾನ್ ಖವಾಜಾ ಅವರನ್ನು ಆಯ್ಕೆ ಮಾಡುತ್ತೇನೆ," ಎಂದು ನಾಸಿರ್ ಹುಸೇನ್ ಹೇಳಿದ್ದಾರೆ.
ಇನ್ನು ತನ್ನ ತಂಡವನ್ನು ಪೂರ್ಣಗೊಳಿಸಲು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಅವರು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಮೊಹಮ್ಮದ್ ಶಮಿ ಮತ್ತು ಪ್ಯಾಟ್ ಕಮ್ಮಿನ್ಸ್ ಅವರನ್ನು ವೇಗದ ಬೌಲರ್‌ಗಳಾಗಿ ಆರಿಸಿಕೊಂಡರೆ, ಅಲೆಕ್ಸ್ ಕ್ಯಾರಿ ವಿಕೆಟ್ ಕೀಪಿಂಗ್ ಗ್ಲೌಸ್ ಧರಿಸಲಿದ್ದಾರೆ.
ನಾಸಿರ್ ಹುಸೇನ್ ಸಂಯೋಜಿತ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಆಡುವ 11ರ ಬಳಗ
ರೋಹಿತ್ ಶರ್ಮಾ (ನಾಯಕ), ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಮೊಹಮ್ಮದ್ ಶಮಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications