Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಶಸ್‌ನಲ್ಲಿ ವಾರ್ನರ್‌ಗೆ ಸ್ಥಾನ ಅನುಮಾನ ಎಂದ ಸುನಿಲ್ ಗವಾಸ್ಕರ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಡೇವಿಡ್ ವಾರ್ನರ್ ಕೇವಲ ಒಂದು ರನ್‌ಗಳಿಸಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 43 ರನ್‌ಗಳಿಸಿದ್ದ ವಾರ್ನರ್ ಮೇಲೆ ಎರಡನೇ ಇನ್ನಿಂಗ್ಸ್‌ನಲ್ಲಿ ಸಾಕಷ್ಟು ನಿರೀಕ್ಷೆಯಿತ್ತು. ಆದರೆ ಇಂಗ್ಲೆಂಡ ನೆಲದಲ್ಲಿ ವಾರ್ನರ್ ಮತ್ತೊಮ್ಮೆ ವಿಫಲವಾದರು. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ವಾರ್ನರ್ ಮುಂಬರುವ ಆಶಸ್ ಸರಣಿಯಲ್ಲಿ ವಾರ್ನರ್‌ಗೆ ಅವಕಾಶ ದೊರೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 173 ರನ್‌ಗಳ ದೊಡ್ಡ ಮುನ್ನಡೆ ಸಾಧಿಸಿದ ನಂತರ 3 ನೇ ದಿನದ ಎರಡನೇ ಸೆಷನ್‌ನಲ್ಲಿ ಉಸ್ಮಾನ್ ಖವಾಜಾ ಅವರೊಂದಿಗೆ ಬ್ಯಾಟಿಂಗ್‌ಗೆ ಇಳಿದರು. ಈ ಸಂದರ್ಭದಲ್ಲಿ ಭಾರತದ ಬೌಲಿಂಗ್ ದಾಳಿಯನ್ನು ಎದುರಿಸಲು ಖವಾಜ ಹೆಣಗಾಡಿದ್ದಾರೆ. 8 ಎಸೆಗಳನ್ನು ಎದುರಿಸಿದ ಅವರು 1 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.

WTC Final 2023: Sunil Gavaskar said David Warners place in Ashes squad will be a question mark

ಭಾರತದ ವೇಗಿಗಳ ಮೇಲೆ ಒತ್ತಡ ಹೇರುವ ಅವಕಾಶವಿದ್ದ ಸಂದರ್ಭದಲ್ಲಿಯೇ ಡೇವಿಡ್ ವಾರ್ನರ್ ಆಫ್ ಸ್ಟಂಪ್‌ನಿಂದ ಆಚೆಗಿದ್ದ ಎಸೆತವನ್ನು ಕೆಣಕಲು ಹೋಗಿ ವಿಕೆಟ್ ಕಳೆದುಕೊಂಡರು. ಮೊಹಮ್ಮದ್ ಸಿರಾಜ್ ಈ ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಈ ವಿಕೆಟ್ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಹೋರಾಟ ನೀಡಲು ಆತ್ಮವಿಶ್ವಾಸ ತುಂಬಿತು.

"ಇದು ಆತನನ್ನು ಬೇಕೆಂದೆ ಬಲೆಗೆ ಬೀಳಿಸಿದಂತೆ ತೋರುತ್ತದೆ. ಮೊದಲ ಕೆಲ ಎಸೆತಗಳು ಹೊರಗಿನ ಅಂಚನ್ನು ದಾಟಿ ಹೋದವು, ಹೀಗಾಗಿ ವಾರ್ನರ್ ಸಮಚಿತ್ತ ಕಳೆದುಕೊಂಡರು ನಂತರದ ಈ ಎಸೆತವನ್ನು ಕಾಲಿನ ಚಲನೆಯಿಲ್ಲದೆ ಬಾರಿಸುವ ಪ್ರಯತ್ನ ನಡೆಸಿದರು. ಕೆಳಗಿನಿಂದ ಬಂದ ಈ ಚೆಂಡನ್ನು ಭರತ್ ಉತ್ತಮವಾಗಿ ಕ್ಯಾಚ್ ಪಡೆದುಕೊಂಡರು. ಹೀಗಾಗಿ ವಾರ್ನರ್ ಅವರ ಕಳಪೆ ಫಾರ್ಮ್ ಮುಂದುವರಿದಿದೆ. ಹೀಗಾಘಿ ಆಶಸ್ ಸರಣಿಯಲ್ಲಿ ಅವರಿಗೆ ಸ್ಥಾನ ದೊರೆಯುವ ಬಗ್ಗೆ ಪ್ರಶ್ನೆಗಳು ಎದ್ದಿದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಆಸ್ಟ್ರೇಲಿಯಾ ಪ್ಲೇಯಿಂಗ್ XI: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಜೋಶ್ ಇಂಗ್ಲಿಸ್, ಮೈಕೆಲ್ ನೆಸರ್, ಟಾಡ್ ಮರ್ಫಿ, ಮಾರ್ಕಸ್ ಹ್ಯಾರಿಸ್
ಟೀಮ್ ಇಂಡಿಯಾ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ಅಕ್ಷರ್ ಪಟೇಲ್, ಜಯದೇವ್ ಉನದ್ಕತ್, ರವಿಚಂದ್ರನ್ ಅಶ್ವಿನ್

Story first published: Friday, June 9, 2023, 22:56 [IST]
Other articles published on Jun 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+