WTC Final: ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ ಅಭಿಮಾನಿಯ ಈ ವಿಡಿಯೋ!

ಸೌಥಾಂಪ್ಟನ್: ಸೌಥಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ನಡೆದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಒಂದು ಗಮ್ಮತ್ತಿನ ವಿಡಿಯೋ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ.
ಸ್ಟೇಡಿಯಂನಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದ ಭಾರತೀಯ ಅಭಿಮಾನಿ, ಟೀಮ್ ಇಂಡಿಯಾದ ಉಪನಾಯಕ ಅಜಿಂಕ್ಯ ರಹಾನೆ ಔಟ್ ಆದಾಗ ಕೊಟ್ಟಿದ್ದ ಪ್ರತಿಕ್ರಿಯೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಈ ವಿಡಿಯೋಗೆ ವಿವಿಧ ರೀತಿಯಲ್ಲಿ ಮೀಮ್ಸ್ ಕೂಡ ತಯಾರಾಗಿ ಓಡಾಡುತ್ತಿವೆ.
ರಿಸರ್ವ್ ಡೇಯಾಗಿದ್ದ ಜೂನ್ 23ರಂದು 6ನೇ ದಿನದಾಟದ ವೇಳೆ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಅಜಿಂಕ್ಯ ರಹಾನೆ 49.6ನೇ ಓವರ್‌ಗೆ ಟ್ರೆಂಟ್ ಬೌಲ್ಟ್ ಎಸೆತಕ್ಕೆ ಬಿಜೆ ವಾಟ್ಲಿಂಗ್‌ಗೆ ಕ್ಯಾಚಿತ್ತು 15 ರನ್‌ಗೆ ನಿರ್ಗಮಿಸಿದರು.
ರಹಾನೆ ಔಟ್ ಆಗಿ ಹೋಗುವುದಕ್ಕೂ ಮುನ್ನ ಭಾರತೀಯ ಅಭಿಮಾನಿಯೊಬ್ಬರು ತಂಡಕ್ಕೆ ಚಿಯರ್ ಮಾಡ್ತಾ ಪಂದ್ಯ ಎಂಜಾಯ್ ಮಾಡ್ತಿದ್ದರು. ಆಗಲೇ ರಹಾನೆ ಔಟ್ ಆಗಿದ್ದು ನೋಡಿ, ತಕ್ಷಣ ಖುಷಿಗೆ ಬದಲು ಬೇಸರದ ಪ್ರತಿಕ್ರಿಯೆ ನೀಡಿದ್ದರು. ಈ ವಿಡಿಯೋ ಒಂಥರಾ ತಮಾಷೆಯಾಗಿದ್ದು, ಅಭಿಮಾನಿಯ ಪ್ರಕ್ರಿಯಿಯೆಗೆ ಬಗೆ ಬಗೆ ಮೀಮ್ಸ್‌ಗಳು ನೆಟ್ಟಿಗರನ್ನು ನಗಿಸತೊಡಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications