Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC ಫೈನಲ್ ಮಾದರಿಯ ಬಗ್ಗೆ ಆಕಾಶ್ ಚೋಪ್ರ ಅಸಮಾಧಾನ: ಐಸಿಸಿಗೆ ಮಾಜಿ ಕ್ರಿಕೆಟಿಗ ನೀಡಿದ ಸಲಹೆ ಇದು!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ 2021-23ರ ಆವೃತ್ತಿಯ ಫೈನಲ್ ಪಂದ್ಯ ಆರಂಭವಾಗಿದ್ದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದೆ. ಟೆಸ್ಟ್ ಚಾಂಪಿಯನ್ ಪಟ್ಟಕ್ಕಾಗಿ ಎರಡು ದಿಗ್ಗಜ ತಂಡಗಳು ಕಾದಾಟ ಆರಂಭಿಸಿದೆ. ಈ ಸಂದರ್ಭದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ತಂಡವನ್ನು ಆರಿಸುವ ವಿಧಾನದ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅದಕ್ಕೆ ಅವರು ಕಾರಣವನ್ನೂ ನೀಡಿ ವಿವರಿಸಿದ್ದಾರೆ.

ಸುಮಾರು ಎರಡು ವರ್ಷಗಳ ಕಾಲ ತಂಡಗಳು ವಿವಿಧ ಸರಣಿಗಳಲ್ಲಿ ಆಡಿ ಅಲ್ಲಿ ಗೆಲುವು ಸಾಧಿಸಿದ ಆಧಾರದಲ್ಲಿ ಅಂಕಗಳನ್ನು ಪರಿಗಣಿಸಿ ಎರಡು ಅಗ್ರ ತಂಡಗಳನ್ನು ಫೈನಲ್‌ಗೆ ಆರಿಸಲಾಗುತ್ತದೆ. ಆದರೆ ಈ ಸುದೀರ್ಘ ಟೂರ್ನಿಯಲ್ಲಿ ಆಡಿದ ಬಳಿಕ ಕೇವಲ ಒಂದು ಪಂದ್ಯದಲ್ಲಿ ನೀಡಿದ ಪ್ರದರ್ಶನದ ಆಧಾರದಲ್ಲಿ ಚಾಂಪಿಯನ್ ತಂಡವನ್ನು ಆಯ್ಕೆ ಮಾಡುವುದು ಸೂಕ್ತವಲ್ಲ ಎಂಬುದು ಆಕಾಶ್ ಚೋಪ್ರ ಅವರ ಸ್ಪಷ್ಟ ನಿಲುವು. ಈ ಬಗ್ಗೆ ಆಕಾಶ್ ಚೋಪ್ರ ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

WTC Final: Aakash Chopra criticize WTC format side should decide by 3 match Test series

"ಎರಡು ವರ್ಷಗಳ ಕಾಲ ಚಾಂಪಿಯನ್‌ ಆಯೋಜನೆ ಮಾಡಲು ಆಗುತ್ತದೆ. ಆದರೆ 24 ತಿಂಗಳುಗಳ ಬಳಿಕ ಕೊನೆಯದಾಗಿ ಚಾಂಪಿಯನ್ ತಂಡವನ್ನು ಕಂಡುಕೊಳ್ಳಲು ನಿಮಗೆ ಮೂರು ಪಂದ್ಯಗಳ ಸರಣಿಯನ್ನು ಆಯೋಜಿಸಲು ಸಮಯ ದೊರೆಯುವುದಿಲ್ಲ" ಎಂದು ಆಕಾಶ್ ಚೋಪ್ರ ಟ್ವಿಟ್ಟರ್‌ನಲ್ಲಿ ಕೇವಲ ಒಂದು ಫೈನಲ್ ಪಂದ್ಯದ ಆಯೋಜನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಮುಂದುವರಿದು ಅವರು "ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಯೋಜನೆ ಮಾಡಲು ಸಾಧ್ಯವಾಗಲಿಲ್ಲ ಎಂಬುದಾದರೆ ಫೈನಲ್ ಪಂದ್ಯ ಯಾಕಾಗಿ ಬೇಕಿತ್ತು. ಎರಡು ವರ್ಷಗಳಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡಕ್ಕೆ ಟ್ರೋಫಿ ನೀಡಬಹುದಲ್ಲವೇ, ಈ ಹಿಂದೆ ಮಾಡಿದಂತೆ. ಇಲ್ಲಿ ಸರಣಿಗಳಲ್ಲಿ ಎಷ್ಟು ಪಂದ್ಯಗಳು ಇರಬೇಕು ಎಂಬ ಏಕರೂಪತೆಯೂ ಇಲ್ಲ" ಎಂದು ಟೂರ್ನಿಯ ಆಯೋಜನೆಯ ವಿಚಾರವಾಗಿ ಆಕಾಶ್ ಚೋಪ್ರ ತಮ್ಮ ಅನಿಸಿಕೆಯನ್ನು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದುಕೊಂಡಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದೆ. ಹೀಗಾಗಿ ಆಸ್ಟ್ರೇಲಿಯಾ ಆರಂಭದಲ್ಲಿ ಬ್ಯಾಟಿಂಗ್ ಮಾಡುವ ಸವಾಲು ಸ್ವೀಕರಿಸಿದೆ. ಮೊದಲ ಸೆಶನ್‌ನಲ್ಲಿ ಎರಡು ತಂಡಗಳು ಕುಡ ಸಮಬಲದ ಪ್ರದರ್ಶನ ನೀಡಿದ್ದು ಟೀಮ್ ಇಂಡಿಯಾ ಆಸ್ಟ್ರೇಲಿಯಾದ ಇಬ್ಬರು ಆಟಗಾರರನ್ನು ಔಟ್ ಮಾಡುವಲ್ಲಿ ಯಶಸ್ವಿಯಾಯಿತು.

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಮಾರ್ಕಸ್ ಹ್ಯಾರಿಸ್

ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್

Story first published: Wednesday, June 7, 2023, 18:13 [IST]
Other articles published on Jun 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+