WTC Final: ಭಾರತದ ಈ ಇಬ್ಬರ ಬಗ್ಗೆ ಆಸ್ಟ್ರೇಲಿಯಾ ಹೆಚ್ಚು ತಲೆಕೆಡಿಸಿಕೊಂಡಿದೆ; ರಿಕಿ ಪಾಂಟಿಂಗ್
ಕ್ರಿಕೆಟ್ ಜಗತ್ತು ಭಾರೀ ಕುತೂಹಲದಿಂದ ಕಾಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) 2021-23ರ ಫೈನಲ್ ಪಂದ್ಯ ಜೂನ್ 7ರಿಂದ 11ರ ವರೆಗೆ ನಡೆಯಲಿದೆ.
ಇಂಗ್ಲೆಂಡ್‌ನ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿದ್ದು, ಈಗಾಗಲೇ ಭಾರತೀಯ ತಂಡದ ಸದಸ್ಯರು ಇಂಗ್ಲೆಂಡ್ ತಲುಪಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಅವರಂತಹ ಆಟಗಾರರ ಹೆಚ್ಚಿನ ಸವಾಲನ್ನು ಆಸೀಸ್ ಎದುರಿಸಲಿದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಜೂನ್ 7ರಂದು ಲಂಡನ್‌ನ ಓವಲ್‌ನಲ್ಲಿ ಏಕೈಕ ಟೆಸ್ಟ್ ಪಂದ್ಯ ಪ್ರಾರಂಭವಾಗಲಿದ್ದು, ಉಭಯ ತಂಡಗಳು ನಿರೀಕ್ಷಿತ ಪಲಿತಾಂಶ ಪಡೆಯಲು ಪೂರ್ಣ ಸ್ವಿಂಗ್‌ನಲ್ಲಿ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಆದರೆ, ಅಂತಿಮ ಟೆಸ್ಟ್ ಪಂದ್ಯದಲ್ಲಿ ಸವಾಲನ್ನು ಜಯಿಸಲು ಆಸ್ಟ್ರೇಲಿಯಾ ತಂಡ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಬಗ್ಗೆ ಎಚ್ಚರದಿಂದಿರಬೇಕು ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
"ಆಸ್ಟ್ರೇಲಿಯಾ ತಂಡವು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಿದೆ, ಅದರಲ್ಲಿ ಯಾವುದೇ ಸಂದೇಹವಿಲ್ಲ. ಚೇತೇಶ್ವರ ಪೂಜಾರ ಬಗ್ಗೆ ಕೂಡನಾ ಮಾತನಾಡುತ್ತಾರೆ. ಅವರಿಬ್ಬರು ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ".

ಚೇತೇಶ್ವರ ಪೂಜಾರ ಈ ಹಿಂದೆ ಆಸೀಸ್ ತಂಡಕ್ಕೆ ಆಸ್ಟ್ರೇಲಿಯಾದಲ್ಲಿ ಸಾಕಷ್ಟು ಕಂಟಕವಾಗಿದ್ದಾರೆ. ಇಂಗ್ಲೆಂಡ್‌ನ ಓವಲ್ ವಿಕೆಟ್ ಸಂಭಾವ್ಯವಾಗಿ ಆಸ್ಟ್ರೇಲಿಯನ್ ಪಿಚ್‌ನಂತೆಯೇ ಇರುತ್ತದೆ. ಅವರ ವಿಕೆಟ್ ಬೇಗನೆ ಪಡೆಯಬೇಕು ಎಂದು ಆಸ್ಟ್ರೇಲಿಯಾ ತಂಡಕ್ಕೆ ತಿಳಿದಿದೆ," ಎಂದು ರಿಕಿ ಪಾಂಟಿಂಗ್ ದಿ ಐಸಿಸಿ ರಿವ್ಯೂನಲ್ಲಿ ಹೇಳಿದರು.
"ಕಳೆದ ಕೆಲವು ವಾರಗಳಲ್ಲಿ ವಿರಾಟ್ ಕೊಹ್ಲಿ ಬಹುಶಃ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಸಂಪೂರ್ಣ ಅತ್ಯುತ್ತಮ ಸ್ಥಿತಿಗೆ ಮರಳಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಆಡುತ್ತಿರುವ ಆಟ ನೋಡಿದರೆ, ತಮ್ಮ ಅತ್ಯುತ್ತಮ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಯುತ್ತದೆ. ಇದು ಆಸ್ಟ್ರೇಲಿಯಾ ತಂಡಕ್ಕೆ ಅಶುಭ ಎಚ್ಚರಿಕೆ ಎಂದು ಆಸ್ಟ್ರೇಲಿಯಾ ಆಟಗಾರರು ನನಗೆ ಹೇಳಿದರು," ಎಂದು ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ತಿಳಿಸಿದರು.
ಶುಭ್ಮನ್ ಗಿಲ್ ಕ್ಲಾಸ್ ಆಟವನ್ನು ಹೊಂದಿದ್ದಾರೆ; ರಿಕಿ ಪಾಂಟಿಂಗ್
ಭಾರತದ ಆರಂಭಿಕ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಕೆಲವು ಗಂಭೀರ ಕ್ಲಾಸ್ ಆಟವನ್ನು ಹೊಂದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುಂಚಿತವಾಗಿ ಶುಭ್ಮನ್ ಗಿಲ್ ಬಗ್ಗೆ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ 2023ರಲ್ಲಿ ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಅನ್ನು ಶ್ಲಾಘಿಸಿದ ರಿಕಿ ಪಾಂಟಿಂಗ್, ಫ್ರಂಟ್-ಫುಟ್ ಪುಲ್ ಶಾಟ್ ಅನ್ನು ಬಹುತೇಕ ಕರಗತ ಮಾಡಿಕೊಂಡಿದ್ದಾರೆ. ಶುಭ್ಮನ್ ಗಿಲ್ ಆಸ್ಟ್ರೇಲಿಯಾದ ವೇಗದ ದಾಳಿಯ ವಿರುದ್ಧ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಗಮನಾರ್ಹವಾಗಿ, ಐಪಿಎಲ್ 2023ರಲ್ಲಿ ವಿರಾಟ್ ಕೊಹ್ಲಿ ಅವರು 14 ಪಂದ್ಯಗಳಲ್ಲಿ 639 ರನ್‌ಗಳನ್ನು ಗಳಿಸಿ, ಆರು ಅರ್ಧಶತಕಗಳು ಮತ್ತು ಎರಡು ಶತಕಗಳೊಂದಿಗೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಚೇತೇಶ್ವರ ಪೂಜಾರ ಆಸೀಸ್ ಒಡ್ಡುವ ಸವಾಲುಗಳನ್ನು ಎದುರಿಸಲು ಹೆಸರುವಾಸಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಐದು ಶತಕಗಳನ್ನು ಒಳಗೊಂಡ 50.82ರ ಉತ್ತಮ ಸರಾಸರಿಯಲ್ಲಿ 2033ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications