For Quick Alerts
ALLOW NOTIFICATIONS  
For Daily Alerts
 

WTC Final: ಆಸ್ಟ್ರೇಲಿಯಾ ತಂಡಕ್ಕೆ ಈತನ ಆಟವೇ ನಿರ್ಣಾಯಕ ಎಂದ ಆಸಿಸ್ ಹೆಡ್ ಕೋಚ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಟೆಸ್ಟ್ ಕ್ರಿಕೆಟ್‌ನ ಅಗ್ರ ಎರಡು ತಂಡಗಳಾಗಿರುವ ಭಾರತ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಮಾದರಿಯಲ್ಲಿ ಚಾಂಪಿಯನ್ ತಂಡಕ್ಕಾಗಿ ಕಾದಾಟ ನಡೆಸಲಿದೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು ಹೆಚ್ಚಿನ ಆಟಗಾರರು ಈ ಟೂರ್ನಿಯಲ್ಲಿ ಭಾಗಿಯಾಗಿದ್ದರೂ ಐಪಿಎಲ್ ಅಭಿಯಾನ ಮುಗಿಸಿರುವ ಆಟಗಾರರು ಈ ಪ್ರತಿಷ್ಠಿತ ಪಂದ್ಯಕ್ಕಾಗಿ ಸಿದ್ಧತೆ ಆರಂಭಿಸಿದ್ದಾರೆ. ವಿರಾಟ್ ಕೊಹ್ಲಿ ಸೇರಿದಂತೆ ಭಾರತ 7 ಆಟಗಾರರು ಕೋಚ್ ದ್ರಾವಿಡ್ ಹಾಗೂ ಸಹಾಯ ಸಿಬ್ಬಂದಿಗಳ ತಂಡ ಈಗಾಘಲೇ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದೆ.

ಈ ಪ್ರತಿಷ್ಠಿತ ಸರಣಿಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಆಂಡ್ರ್ಯೋ ಮೆಕ್‌ಡೊನಾಲ್ಡ್ ಮಾತನಾಡಿದ್ದು ತಂಡದ ಓರ್ವ ಆಟಗಾರನ ಬಗ್ಗೆ ವಿಶೇಷ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಆ ಆಟಗಾರ ಬೇರೆ ಯಾರೂ ಅಲ್ಲ. ಆಸಿಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್. ಅದ್ಭುತ ಲಯದಲ್ಲಿರುವ ವಾರ್ನರ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದಿದ್ದಾರೆ.

WTC Final: Australian coach on David Warner said will play big part in WTC final

ಡೇವಿಡ್ ವಾರ್ನರ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಮೋಘ ಲಯವನ್ನು ಪ್ರದರ್ಶಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ವಾರ್ನರ್ ಆಕ್ರಮಣಕಾರಿ ಪ್ರದರ್ಶ ನೀಡಿ ಗಮನಸೆಳೆದಿದ್ದಾರೆ. ಟೂರ್ನಿಯಲ್ಲಿ ಇಡೀ ತಂಡ ವೈಫಲ್ಯ ಅನುಭವಿಸಿದ್ದರೂ ವಾರ್ನರ್ ಬಹುತೇಕ ಏಕಾಂಗಿ ಹೋರಾಟ ಪ್ರದರ್ಶಿಸಿದ್ದಾರೆ. 14 ಪಂದ್ಯಗಳನ್ನು ಆಡಿರುವ ಅವರು 516 ರನ್‌ಗಳನ್ನು ಗಳಿಸಿದ್ದಾರೆ. 86 ರನ್ ಈ ಬಾರಿಯ ಟೂರ್ನಿಯಲ್ಲಿ ಅವರ ಹೈಯೆಸ್ಟ್ ಸ್ಕೋರ್ ಎನಿಸಿಕೊಂಡಿದೆ.

"ಡೇವಿಡ್ ವಾರ್ನರ್ ವಿಚಾರವಾಗಿ ನಾವು ಬಹಳಷ್ಟು ಆಶಾವಾದಿಯಾಗಿದ್ದೇವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಾಗೂ ಆಶಸ್ ಸರಣಿಯಲ್ಲಿ ಅವರು ದೊಡ್ಡ ಪಾತ್ರವಹಿಸಲಿದ್ದಾರೆ ಎಂಬ ವಿಶ್ವಾಸದಲ್ಲಿಯೇ ನಾವು ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದೇವೆ" ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ಕೋಚ್ ಆಂಡ್ರ್ಯೋ ಮೆಕ್‌ಡೊನಾಲ್ಡ್.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಹಾಗೂ ಆಶಸ್ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಆಯ್ಕೆ ಮಾಡಿರುವ ತಂಡದಲ್ಲಿ ಡೇವಿಡ್ ವಾರ್ನರ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ವಾರ್ನರ್ ಜೊತೆಗೆ ಮಾರ್ಜಸ್ ಹ್ಯಾರಿಸ್ ಹಾಗೂ ಮ್ಯಾಟ್ ರೆನ್‌ಶಾ ಕೂಡ ಹೆಚ್ಚುವರಿ ಆಯ್ಕೆಯಾಗಿ ಹೆಸರಿಸಲ್ಪಟ್ಟಿದ್ದಾರೆ.

ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೊಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಮಿಚ್ ಮಾರ್ಷ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾ, ಸ್ಟೀವ್ ಸ್ಮಿತ್, ಸ್ಟೀವ್ ಸ್ಮಿತ್ , ಡೇವಿಡ್ ವಾರ್ನರ್.

ರೋಹಿತ್ ಶರ್ಮಾ(ನಾಯಕ), ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಕೆಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಯ್‌ದೇವ್ ಉನಾದ್ಕಟ್, ಇಶಾನ್ ಕಿಶನ್(ವಿಕೆಟ್ ಕೀಪರ್)

Story first published: Wednesday, May 24, 2023, 21:16 [IST]
Other articles published on May 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+