WTC Final: "ಪಂತ್‌ನಿಂದ ಸಾಧ್ಯವಾಗದ್ದು ಗ್ರಾಂಡ್‌ಹೋಮ್‌ನಿಂದ ಸಾಧ್ಯವಾಗಲಿದೆ"

ಸೌಥಾಂಪ್ಟನ್, ಜೂನ್ 22: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಐದನೇ ದಿನಕ್ಕೆ ಕಾಲಿಡುವ ಮುನ್ನ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಕ್ರೇಗ್ ಮೆಕ್‌ಮಿಲನ್ ಭವಿಷ್ಯ ನುಡಿದಿದ್ದಾರೆ. ಫೈನಲ್ ಪಂದ್ಯದಲ್ಲಿ ಭಾರತದ ಯುವ ಆಟಗಾರ ರಿಷಭ್ ಪಂತ್‌ಗೆ ಸಾಧ್ಯವಾಗದಿರುವುದನ್ನು ಕಿವೀಸ್ ಆಲ್‌ರೌಂಡರ್ ಕಾಲಿನ್ ಡಿ ಗ್ರಾಂಡ್‌ಹೋಮ್ ಸಾಧ್ಯವಾಗಿಸಲಿದ್ದಾರೆ ಎಂದಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ರಿಷಭ್ ಪಂತ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇಂಗ್ಲೆಂಡ್‌ನ ಕಠಿಣ ಪಿಚ್‌ನಲ್ಲಿ ವೇಗವಾಗಿ ರನ್‌ಗಳಿಸುವುದು ಪಂತ್‌ಗೆ ಸಾಧ್ಯವಾಗಲಿಲ್ಲ. ನಂತರ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರುವ ಮೂಲಕ ಭಾರತೀಯ ಬ್ಯಾಟಿಂಗ್ ಪಡೆಯ ಕುಸಿತಕ್ಕೂ ಕಾರಣರಾದರು.
ಆದರೆ ನ್ಯೂಜಿಲೆಂಡ್ ಆಲ್‌ರೌಂಡರ್ ಕಾಲಿನ್ ಡಿ ಗ್ರಾಂಡ್‌ಹೋಮ್ ಭಾರತದ ವಿರುದ್ಧ ವೇಗವಾಗಿ ರನ್‌ಗಳಿಸುವಲ್ಲಿ ಸಫಲರಾಗಲಿದ್ದಾರೆ ಎಂದು ಮೆಕ್‌ಮಿಲನ್ ಹೇಳಿದ್ದಾರೆ. ತಾನು ಕಾಲಿನ್ ಡಿ ಗ್ರಾಂಡ್‌ಹೋಮ್ ಅವರ ಬ್ಯಾಟಿಂಗ್‌ಗಾಗಿ ಎದುರುನೋಡುತ್ತಿರುವುದಾಗಿ ಮೆಕ್‌ಮಿಲನ್ ಪ್ರತಿಕ್ರಿಯಿಸಿದ್ದಾರೆ.
ಹೆನ್ರಿ ನಿಕೋಲಸ್ ಅವರಂತಾ ಆಟಗಾರನ್ನು ಹೊಂದಿರುವುದರಿಂದ ನ್ಯೂಜಿಲೆಂಡ್‌ನ ಬ್ಯಾಟಿಂಗ್ ಕ್ರಮಾಂಕ ಹೆಚ್ಚು ಬಲಿಷ್ಠವಾಗಿದೆ. ಅದರಲ್ಲೂ ಗ್ರಾಂಡ್‌ಹೋಮ್ ಅತ್ಯಂತ ತ್ವರಿತವಾಗಿ ರನ್‌ಗಳಿಸಬಲ್ಲವರಾಗಿದ್ದಾರೆ. ಇಂದು ಅವರು ಯಾವ ರೀತಿ ಬ್ಯಾಟಿಂಗ್ ನಡೆಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಗ್ರಾಂಡ್‌ಹೋಮ್ ಎರಡು ತಮಡಗಳ ಮಧ್ಯೆ ವ್ಯತ್ಯಾಸಕ್ಕೆ ಕಾರಣವಾಗಲಿದ್ದಾರೆ ಎಂದು ಮೆಕ್‌ಮಿಲನ್ ಹೇಳಿದ್ದಾರೆ.
ಇನ್ನು ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯುವುದನ್ನು ಬಯಸುತ್ತದೆ ಎಂದಿರುವ ಮೆಕ್‌ಮಿಲನ್, ಕ್ರೀಸ್‌ನಲ್ಲಿರುವ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಅವರಿಂದ ಉತ್ತಮ ಪ್ರದರ್ಶನದ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಈ ಜೊತೆಗಾರಿಕೆ ನ್ಯೂಜಿಲೆಂಡ್ ಪಾಲಿಗೆ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications