Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC finalನಲ್ಲಿ ಭಾರತಕ್ಕಿಂತ ನ್ಯೂಜಿಲೆಂಡ್ ಗೆಲ್ಲುವ ಸಾಧ್ಯತೆ ಹೆಚ್ಚು: ಕಮಿನ್ಸ್

WTC final: English conditions should suit New Zealand more than India, says Pat Cummins
Ind vs NZ ಭಾರತಕ್ಕಿಂತ ನ್ಯೂಜಿಲೆಂಡ್‌ಗೆ ಗೆಲ್ಲುವ ಅವಕಾಶ ಹೆಚ್ಚು | Oneindia Kannada

ಸಿಡ್ನಿ: ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ಗಾಗಿ ಭಾರತ ಸಜ್ಜಾಗಿದೆ. ಫೈನಲ್‌ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ನಡೆಯಲಿದೆ. ಆದರೆ ಫೈನಲ್‌ನಲ್ಲಿ ಭಾರತಕ್ಕಿಂತ ನ್ಯೂಜಿಲೆಂಡ್‌ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆವೃತ್ತಿ ಮುಂದೂಡಲ್ಪಟ್ಟಿರುವುದರಿಂದ ಕ್ರಿಕೆಟ್ ಪ್ರೇಮಿಗಳ ಚಿತ್ತ ಈಗ ಟೆಸ್ಟ್ ಚಾಂಪಿಯನ್‌ಶಿಪ್‌ನತ್ತ ಹೊರಳಿದೆ. ಜೂನ್ 18ರಿಂದ 22ರ ವರೆಗೆ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯದ ವೇಳೆ ಇಂಗ್ಲೆಂಡ್ ಪರಿಸ್ಥಿತಿ ನ್ಯೂಜಿಲೆಂಡ್‌ಗೆ ಹೆಚ್ಚು ಹೊಂದಾಣಿಕೆಯಾಗುತ್ತದೆ ಎಂದು ಪ್ಯಾಟ್ ಕಮಿನ್ಸ್ ಅಭಿಪ್ರಾಯಿಸಿದ್ದಾರೆ.

ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡುವ ಬೌಲಿಂಗ್ ಆಲ್ ರೌಂಡರ್ ಕಮಿನ್ಸ್ ವರ್ಲ್ಡ್‌ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ನ ವಿಜೇತರನ್ನು ಹೆಸರಿಸಿಲ್ಲ. ಆದರೆ ಗೆಲ್ಲುವ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದಾರೆ. ವಿಶೇಷವೆಂದರೆ ಬಹುತೇಕ ವಿದೇಶಿ ಕ್ರಿಕೆಟಿಗರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಫೈನಲ್‌ ಪಂದ್ಯ ಒಳ್ಳೆಯ ಜಿದ್ದಾಜಿದ್ದಿಯ ಪಂದ್ಯವೆನಿಸಲಿದೆ. ನನಗೆ ಸಿಕ್ಕ ಸುದ್ದಿಯ ಪ್ರಕಾರ ಇಂಗ್ಲೆಂಡ್‌ನಲ್ಲಿ ಈ ವೇಳೆ ತುಂಬಾ ಮಳೆಯಾಗಲಿದೆ. ನನಗನ್ನಿಸುವ ಮಟ್ಟಿಗೆ ಇಂಗ್ಲೆಂಡ್‌ನ ಪರಿಸ್ಥಿತಿ ನ್ಯೂಜಿಲೆಂಡ್‌ಗೆ ಹೊಂದಿಕೆಯಾಗುವ ರೀತಿಯಲ್ಲೇ ಇದೆ,' ಎಂದು ಅಭಿಮಾನಿ ಪ್ರಶ್ನೆಗೆ ಯೂಟ್ಯೂಟ್‌ನಲ್ಲಿ ಉತ್ತರಿಸಿದ ಕಮಿನ್ಸ್ ವಿವರಿಸಿದ್ದಾರೆ.

Story first published: Wednesday, May 26, 2021, 23:15 [IST]
Other articles published on May 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+