Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC final: ಭಾರತ vs ನ್ಯೂಜಿಲೆಂಡ್ ಪಂದ್ಯದ ಮೊದಲ ಸೆಶನ್ ಮಳೆಗೆ ಆಹುತಿ!

WTC final: first session of at Southampton has been officially washed out
WTC ಮೊದಲ ದಿನ ದಿನದ ಪಂದ್ಯ ನಡೆಯೋದಿಲ್ಲ | Oneindia Kannada

ಸೌತಾಂಪ್ಟನ್: ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಭಾರತ-ನ್ಯೂಜಿಲೆಂಡ್ ಮಧ್ಯೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಜೂನ್ 18-22ರ ವರೆಗೆ ನಡೆಯಲಿದೆ. ಈ ಪಂದ್ಯದ ಆರಂಭಿಕ ಸೆಶನ್ ಮಳೆಗೆ ಆಹುತಿಯಾಗಿದೆ. ಮೊದಲ ಸೆಶನ್ ನಡೆಸಲಾಗುತ್ತಿಲ್ಲ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧಿಕೃತವಾಗಿ ಹೇಳಿದೆ.

ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಆರಂಭಗೊಳ್ಳುತ್ತಿರುವ ಜೂನ್ 18ರಂದು ಸೌತಾಂಪ್ಟನ್‌ನಲ್ಲಿ ತುಂಬಾ ಮಳೆ ಸುರಿಯುತ್ತಿದೆ. ಬೆಳಗ್ಗೆ ಶುರುವಾಗಿರುವ ಮಳೆ ಇನ್ನೂ ನಿಂತಿಲ್ಲ. ಹೀಗಾಗಿ ಉದ್ದೇಶಿತ ಪಂದ್ಯದ ಆರಂಭಿಕ ಸೆಶನ್ ನಡೆಸಲು ಸಾಧ್ಯವಾಗುತ್ತಿಲ್ಲ ಬಿಸಿಸಿಐ ಹೇಳಿದೆ.

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯುವ ಮೊದಲ ದಿನ ಸೌತಾಂಪ್ಟನ್‌ನಲ್ಲಿ ಶುಕ್ರವಾರ ಕನಿಷ್ಠ 17 ಡಿಗ್ರೀ ಸೆಲ್ಶಿಯಸ್ ತಾಪಮಾನ ಇದೆ. ಇದರರ್ಥ ಮಳೆ ಜಾಸ್ತಿಯಿದೆ. ಹೀಗಾಗಿ ಆರಂಭಿಕ ಪಂದ್ಯನಡೆಸಲು ಅಡಚಣೆಯಾಗಿದೆ. ಮೊದಲ ದಿನದ ಪಂದ್ಯ ನಡೆಯದಿರಲೂಬಹುದು ಎಂದು ಸೌತಾಂಪ್ಟನ್ ಹವಾಮಾನ ವರದಿ ಹೇಳುತ್ತಿದೆ.

ಶುಕ್ರವಾರವದಲ್ಲದೆ ಶನಿವಾರವೂ ಪಂದ್ಯಕ್ಕೆ ಮಳೆಯ ಕಾಟ ಇರಲಿದೆ. ಮೊದಲ ದಿನ ಪಂದ್ಯ ನಡೆಸಲು ಸಾಧ್ಯವೇ ಆಗದಿದ್ದರೆ ಪಂದ್ಯ ರಿಸರ್ವ್ಡ್ ಡೇಗೆ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಅಂದರೆ ಐದು ದಿನಗಳಲ್ಲದೆ ಆರನೇ ದಿನವೂ ಪಂದ್ಯ ನಡೆಸುವ ಲಕ್ಷಣಗಳಿವೆ. ಶುಕ್ರವಾರವಂತೂ ಸೌತಾಂಪ್ಟನ್‌ನಲ್ಲಿ ಬಿಡದೆ ಗುಡುಗು ಸಹಿತ ಮಳೆಯಾಗುವುದರಿಂದ ಟಾಸ್ ಕೂಡ ನಡೆಯೋದು ಅನುಮಾನವಾಗಿದೆ.

Story first published: Friday, June 18, 2021, 14:54 [IST]
Other articles published on Jun 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+