WTC Final: IND vs AUS ಫೈನಲ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಕುರಿತು ಗ್ರೆಗ್ ಚಾಪೆಲ್ ಹೇಳಿದ್ದೇನು?
ಜೂನ್ 7ರಂದು ಇಂಗ್ಲೆಂಡ್‌ನ ಓವಲ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲು ಸಜ್ಜಾಗಿದೆ. ಬಹುನಿರೀಕ್ಷಿತ ಐಸಿಸಿ ಪ್ರಶಸ್ತಿ ಗೆಲುವಿನ ರೋಹಿತ್ ಶರ್ಮಾ ಪಡೆ ಕಣ್ಣಿಟ್ಟಿದೆ.
ಇತ್ತೀಚಿಗೆ ತವರಿನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮುನ್ನಡೆ ಸಾಧಿಸಿದೆ. ಆದರೆ, ಐಸಿಸಿ ಫೈನಲ್‌ನಲ್ಲಿ ಭಾರತದ ಪ್ರದರ್ಶನವು ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ. ಮಾತ್ರವಲ್ಲದೆ, ಭಾರತವು ತನ್ನ ಕೆಲವು ಪ್ರಮುಖ ಆಟಗಾರರಾದ ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಆಡುತ್ತಿದೆ.

ಇದೇ ವೇಳೆ ಅಜಿಂಕ್ಯ ರಹಾನೆ ಟೆಸ್ಟ್ ತಂಡಕ್ಕೆ ಪುನರಾಗಮನ ಮಾಡುತ್ತಿದ್ದು, ನಾಯಕ ರೋಹಿತ್ ಶರ್ಮಾ ಇನ್ನೂ ಬ್ಯಾಟ್‌ನೊಂದಿಗೆ ತಮ್ಮ ಆಟವನ್ನು ಆಡಲು ಹೆಣಗಾಡುತ್ತಿದ್ದಾರೆ. ಇತರ ಸ್ಟಾರ್ ಆಟಗಾರರ ವಿಷಯಕ್ಕೆ ಬಂದರೆ, ಫೈನಲ್ ಪಂದ್ಯದಲ್ಲಿ ಭಾರತಕ್ಕೆ ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಮತ್ತು ಚೇತೇಶ್ವರ ಪೂಜಾರ ನಿರ್ಣಾಯಕರಾಗಿದ್ದಾರೆ.
2019 ಮತ್ತು 2022ರ ಅವಧಿಯಲ್ಲಿ ದೀರ್ಘಾವಧಿಯ ಕಳಪೆ ಫಾರ್ಮ್ ಅನ್ನು ಅನುಭವಿಸಿದ ನಂತರ, ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿದ್ದಾರೆ.
ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ರೆಗ್ ಚಾಪೆಲ್ ಅವರು ಭಾರತೀಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈ ಬಾರಿ ತಮ್ಮ ತಂಡಕ್ಕಾಗಿ ಹೆಚ್ಚಿನ ರನ್ ಗಳಿಸುತ್ತಾರೆ. ಏಕೆಂದರೆ ಪಂದ್ಯವು ಲಂಡನ್‌ನ ಓವಲ್‌ನಲ್ಲಿ ಆಡಲಾಗುತ್ತದೆ ಮತ್ತು ಪರಿಸ್ಥಿತಿಗಳು ಅವರಿಗೆ ಸರಿಹೊಂದುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಆಸ್ಟ್ರೇಲಿಯಾದ ಬೌಲರ್‌ಗಳು ಇಂಗ್ಲೆಂಡ್‌ನ ಬೌಲರ್‌ಗಳಿಗಿಂತ ಭಿನ್ನವಾಗಿ ಪರಿಸ್ಥಿತಿಗಳನ್ನು ತಮ್ಮ ಪರವಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿರಾಟ್ ಕೊಹ್ಲಿ ಸವಾಲುಗಳನ್ನು ಆನಂದಿಸುತ್ತಾರೆ ಮತ್ತು ಆಸೀಸ್‌ಗೆ ವಿರುದ್ಧ ಆಡುವುದರಿಂದ ಹಿಂದೆ ಸರಿಯುವುದಿಲ್ಲ," ಎಂದು ಗ್ರೆಗ್ ಚಾಪೆಲ್ ತಿಳಿಸಿದ್ದಾರೆ.
"2014 ಮತ್ತು 2021ರಲ್ಲಿ ಇಂಗ್ಲೆಂಡ್‌ನಲ್ಲಿ ವಿರಾಟ್ ಕೊಹ್ಲಿಗೆ ಆಂಡರ್ಸನ್, ಸ್ಟುವರ್ಟ್ ಬ್ರಾಡ್ ಮತ್ತು ಉಳಿದ ಇಂಗ್ಲೆಂಡ್ ಬೌಲರ್‌ಗಳು ಸಾಕಷ್ಟು ಕಾಟ ನೀಡಿದ್ದರು. ತಮಗೆ ಸೂಕ್ತವಾದ ಪರಿಸ್ಥಿತಿಗಳಲ್ಲಿ ಕೊಹ್ಲಿಗೆ ಕೆಲವು ಅತ್ಯುತ್ತಮ ಲೈನ್‌ಗಳು ಮತ್ತು ಲೆಂತ್‌ಗಳಲ್ಲಿ ಬೌಲ್ ಮಾಡಿದರು".
"ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟರ್ ಎಂದು ತಿಳಿದಿದ್ದರು. ಆದರೂ ಅವರಿಗೆ ಬೌಲಿಂಗ್ ಮಾಡುವಾಗ ತಮ್ಮನ್ನು ಮುನ್ನಡೆಗೆ ತಂದುಕೊಟ್ಟರು. ಆಸ್ಟ್ರೇಲಿಯನ್ನರು ಅದೇ ರೀತಿ ಮಾಡಲು ಸಾಧ್ಯವಾಗುತ್ತದೆ ಎಂದು ಯೋಚಿಸುವುದು ಸರಿಯಲ್ಲ," ಎಂದು ಬ್ಯಾಕ್‌ಸ್ಟೇಜ್ ವಿತ್ ಬೋರಿಯಾ ಶೋನಲ್ಲಿ ಗ್ರೆಗ್ ಚಾಪೆಲ್ ಹೇಳಿದರು.

"ಇಂಗ್ಲೆಂಡ್ ಬೌಲರ್‌ಗಳು ತಮ್ಮ ಪತಿಸ್ಥಿತಿಗಳನ್ನು ಜಗತ್ತಿನ ಇತರರಿಗಿಂತ ಚೆನ್ನಾಗಿ ತಿಳಿದಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯನ್ನರ ವಿರುದ್ಧ ಬ್ಯಾಟಿಂಗ್ ಮಾಡಲು ಇಷ್ಟಪಡುತ್ತಾರೆ. ನಾವು ಆಸ್ಟ್ರೇಲಿಯಾದಲ್ಲಿಯೂ ಅದನ್ನು ನೋಡಿದ್ದೇವೆ. ಕೊಹ್ಲಿಯ ದಾಖಲೆಯು ಅವರು ಎಷ್ಟು ಅತ್ಯುತ್ತಮ ಬ್ಯಾಟರ್ ಎಂಬುದಕ್ಕೆ ಸಾಕ್ಷಿಯಾಗಿದೆ. ಅವರು ಪೈಪೋಟಿಯಿಂದ ಹಿಂದೆ ಸರಿಯುವುದಿಲ್ಲ," ಎಂದು ಭಾರತದ ಮಾಜಿ ಕೋಚ್ ಗ್ರೆಗ್ ಚಾಪೆಲ್ ತಿಳಿಸಿದ್ದಾರೆ.
"ಓವಲ್ ಪಿಚ್ ಬಹುಶಃ ಬಲವಾದ ಬೌನ್ಸ್ ಅನ್ನು ಹೊಂದಿರುತ್ತದೆ, ಇದು ವಿರಾಟ್ ಕೊಹ್ಲಿಗೆ ಅನುಕೂಲವಾಗಲಿದೆ. ಹವಾಮಾನವು ಶುಷ್ಕವಾಗಿದ್ದರೆ, ಅದು ಆಸ್ಟ್ರೇಲಿಯಾದಲ್ಲಿ ಕಂಡುಬರುವ ವಿಕೆಟ್‌ಗೆ ಹೋಲುತ್ತದೆ. ವಿರಾಟ್ ಕೊಹ್ಲಿ ಪಂದ್ಯದ ಫಲಿತಾಂಶದಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡುವ ಸಾಮರ್ಥ್ಯವಿರುವ ಅತ್ಯಂತ ನುರಿತ ಆಟಗಾರ," ಎಂದು ಮಾಜಿ ಆಸ್ಟ್ರೇಲಿಯಾ ಕ್ರಿಕೆಟಿಗ ಹೇಳಿದರು.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತ ತಂಡವು ಸಿದ್ಧವಾಗಿದ್ದು, ವಿರಾಟ್ ಕೊಹ್ಲಿಯ ಫಾರ್ಮ್ ಮತ್ತು ಪ್ರದರ್ಶನದ ಬಗ್ಗೆ ಗಮನ ಹರಿಸಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications