WTC Final: ರಿಸರ್ವ್ ಡೇ ಟಿಕೇಟ್‌ಗಳ ಕಡಿಮೆ ಬೆಲೆಗೆ ಮಾರಲಿದೆ ಐಸಿಸಿ

ಸೌತಾಂಪ್ಟನ್: ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರಿಸರ್ವ್ ಡೇ ಟಿಕೇಟ್ ಬೆಲೆಯನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಡಿಮೆ ಮಾಡಿ ಮಾರಾಟ ಮಾಡುವುದರಲ್ಲಿದೆ. ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಐದು ದಿನಗಳ ಬದಲಾಗಿ ಆರನೇ ದಿನಕ್ಕೆ ಮುಂದುವರೆಯಲಿದೆ.
ಜೂನ್ 18-22ರ ವರೆಗೆ ನಡೆಯಲಿದ್ದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಜೂನ್ 18ರಂದು ಮಳೆಯ ಕಾರಣ ಶುರುವಾಗಿರಲೇ ಇಲ್ಲ. ಆ ಬಳಿಕ ಜೂನ್ 19 ಮತ್ತು 20ರಂದು ದಿನದಾಟಗಳು ನಡೆದಿತ್ತಾದರೂ ಜೂನ್ 21ರ ಸೋಮವಾರ ಮತ್ತೆ ಮಳೆಯ ಕಾರಣ ಪಂದ್ಯಕ್ಕೆ ಅಡಚಣೆಯಾಗಿತ್ತು.
'ಹೌದು, ಆರನೇ ದಿನದ ಟಿಕೇಟಿನ ಬೆಲೆ ಕಡಿಮೆ ಮಾಡಲಾಗಿದೆ. ಇದು ಯುನೈಟೆಡ್ ಕಿಂಗ್ಡಮ್‌ನಲ್ಲಿ ನಡೆಯುವ ಟೆಸ್ಟ್ ಪಂದ್ಯಗಳ ವೇಳೆ ನಡೆಯುವ ಪ್ರಮಾಣಿತ ಅಭ್ಯಾಸ. ಯುಕೆಯಲ್ಲಿ ವಾಸವಿರುರುವವರು ಮಾತ್ರ ಪಂದ್ಯ ವೀಕ್ಷಿಸಬಹುದಾಗಿದೆ. ಇದೇ ಮಾರ್ಗಸೂಚಿಯನ್ನು ರಿಸರ್ವ್ ಡೇಗೂ ಪಾಲಿಸಲಾಗುತ್ತದೆ,' ಎಂದು ಐಸಿಸಿ ಮೂಲವೊಂದು ಪಿಟಿಐಗೆ ಮಾಹಿತಿ ನೀಡಿದೆ.
ಟೆಸ್ಟ್ ಚಾಂಪಿಯನ್‌ಶಿಪ್ ರಿಸರ್ವ್ ಡೇ ಟಿಕೇಟ್‌ಗೆ ಮೂರು ವಿಭಾಗಗಳಲ್ಲಿ ಬೆಲೆಗಳನ್ನು ನಿಗದಿಪಡಿಸಲಾಗಿದೆ. ಜಿಬಿಪಿ (ಬ್ರಿಟಿಷ್ ಪೌಂಡ್ ಸ್ಟರ್ಲಿಂಗ್) 150 (15,444 ರೂ.), ಜಿಬಿಪಿ 100 (10,296 ರೂ.), ಜಿಬಿಪಿ 75 (7722 ರೂ.) ಈ ಮೂರು ಶ್ರೇಣಿಗಳಲ್ಲಿ ಟಿಕೇಟ್ ಬೆಲೆಯಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications