WTC Final: 3ನೇ ದಿನದಾಟ ಅಂತ್ಯ, 296 ರನ್‌ಗಳ ಮುನ್ನಡೆಯಲ್ಲಿ ಆಸಿಸ್: ಕುತೂಹಲ ಕೆರಳಿಸಿದ 4ನೇ ದಿನದಾಟ
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಮೂರನೇ ದಿನದಾಟ ಮುಕ್ತಾಯವಾಗಿದ್ದು ಕುತೂಹಲ ಘಟ್ಟಕ್ಕೆ ಬಂದಿದೆ. ಮೂರನೇ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್ ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ಆಸ್ಟ್ರೇಲಿಯಾ ದೊಡ್ಡ ಮೊತ್ತದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ ಆಸಿಸ್ ತಂಡ ಬ್ಯಾಟಿಂಗ್ ನಡೆಸುತ್ತಿದ್ದು ಭಾರತ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿದೆ.
ಎರಡನೇ ದಿನದಾಟದಲ್ಲಿ ಐದು ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಮೂರನ ದಿನದಾಟದ ಆರಂಭದಲ್ಲಿಯೇ ಶ್ರೀಕರ್ ಭರತ್ ವಿಕೆಟ್ ಕಳೆದುಕೊಂಡಿತು. ನಂತರ ಅಜಿಂಕ್ಯಾ ರಹಾನೆಗೆ ಜೊತೆಯಾಗಿದ್ದು ಶಾರ್ದೂಕ್ ಠಾಕೂರ್. ಈ ಜೋಡಿ ಮೂರನೇ ದಿನದಾಟದ ಮೊದಲ ಸೆಶನ್‌ನಲ್ಲಿ ಸಂಪೂರ್ಣವಾಗಿ ಆಸಿಸ್ ಬೌಲರ್‌ಗಳ ಬೆವರಿಳಿಸಿದ್ದು ತಂಡದ ಮೊತ್ತವನ್ನು ಹೆಚ್ಚಿಸಿದರು. ಈ ಪಂದ್ಯದಲ್ಲಿ ಅಮೂಲ್ಯ 89 ರನ್‌ಗಳ ಕೊಡುಗೆ ನೀಡಿದ ಅಜಿಂಕ್ಯಾ ರಹಾನೆ ಎರಡನೇ ಸೆಶನ್‌ನ ಆರಂಭದಲ್ಲಿ ಔಟಾಗಿ ನಿರ್ಗಮಿಸಿದರು. ಈ ಮೂಲಕ ಶಾರ್ದೂಲ್ ಠಾಕೂರ್ ಜೊತೆಗೆ ರಹಾನೆ 109 ರನ್‌ಗಳ ನಿರ್ಣಾಯಕ ಜೊತೆಯಾಟದಲ್ಲಿ ಭಾಗಿಯಾದರು.

ರಹಾನೆ ಔಟಾದ ಬಳಿಕವೂ ಶಾರ್ದೂಕ್ ತಮ್ಮ ಆಟವನ್ನು ಕೆಲಕಾಲ ಮುಂದುವರಿಸಿದರು. ಈ ಸಂದರ್ಭದಲ್ಲಿ ಅಮೂಲ್ಯ ಅರ್ಧ ಶತಕವನ್ನು ಕೂಡ ಅವರು ಪೂರ್ಣಗೊಳಿಸಿದ್ದು 51 ರನ್‌ಗಳಿಸಿ ನಂತರ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ಟೀಮ್ ಇಂಡಿಯಾ 296 ರನ್‌ಗೆ ಆಲೌಟ್ ಆಗಿದೆ. ಇನ್ನು ಆಸ್ಟ್ರೇಲಿಯಾ ಪರವಾಗಿ ಪ್ಯಾಟ್ ಕಮ್ಮಿನ್ಸ್ ಮೂರು ವಿಕೆಟ್ ಕಬಳಿಸಿದರೆ ಮಿಚೆಲ್ ಸ್ಟಾರ್ಕ್, ಬೋಲಂಡ್ ಹಾಗೂ ಗ್ರೀನ್ ತಲಾ ಎರಡು ವಿಕೆಟ್ ಪಡೆದರು. ಒಂದು ವಿಕೆಟ್ ಕ್ರಿಸ್ ಲಿನ್ ಪಾಲಾಗಿದೆ.
ನಂತರ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾದ ಆರಂಭಿಕ ಆಟಗಾರರಿಬ್ಬರನ್ನು ಕೂಡ 24 ರನ್‌ಗಳಿಸುವಷ್ಟರಲ್ಲಿ ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ನಂತರ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಸ್ಟೀವ್ ಸ್ಮಿತ್ ಮತ್ತೊಮ್ಮೆ ಭಾರತಕ್ಕೆ ಅಪಾಯಕಾರಿಯಾಗುವ ಸೂಚನೆ ನೀಡಿದರಾದರೂ ಜಡೇಜಾ ಮ್ಯಾಜಿಖ್‌ಗೆ ಬಲಿಯಾದಾಗ ಅವರು 34ರನ್ ಗಳಿಸಿದ್ದರು.

ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಆಸಿಸ್ ಪರ ಬೃಜತ್ ಶತಕ ಸಿಡಿಸಿದ್ದ ಟ್ರೆವಿಸ್ ಹೆಡ್ ಎರಡನೇ ಇನ್ನಿಂಗ್ಸ್‌ನಲ್ಲಿ 18 ರನ್‌ಗೆ ಆಟ ಮುಗಿಸಿದ್ದಾರೆ. ಇನ್ನು ಮಾರ್ನಸ್ ಲ್ಯಾಬುಶೇನ್ 41 ರನ್‌ಗಳಿಸಿದ್ದು ಕ್ಯಾಮರೂನ್ ಗ್ರೀನ್ 7 ರನ್‌ಗಳಿಸಿ ನಾಲ್ಕನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ. ಟೀಮ್ ಇಂಡಿಯಾ ಈ ಜೋಡಿಯನ್ನು ಬೇರ್ಪಡರಿಸುವುದರ ಜೊತೆಗೆ ಆಸ್ಟ್ರೇಲಿಯಾವನ್ನು ಸಾಧ್ಯವಾದಷ್ಟು ಬೇಗನೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರತಿರೋಧವೊಡ್ಡುವ ಲೆಕ್ಕಾಚಾರ ನಡೆಸುತ್ತಿದೆ. ಹೀಗಾಗಿ ನಾಲ್ಕನೇ ದಿನದಾಟದ ಪ್ರದರ್ಶನ ತೀವ್ರ ಕುತೂಹಲ ಕೆರಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications