Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final: ರಹಾನೆ- ಶಾರ್ದೂಲ್ ಅಮೋಘ ಆಟ: ಮೊದಲ ಇನ್ನಿಂಗ್ಸ್‌ನಲ್ಲಿ 296ಕ್ಕೆ ಭಾರತ ಆಲೌಟ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 296 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 173 ರನ್‌ಗಳ ಹಿನ್ನಡೆಯನ್ನು ಅನುಭವಿಸಿದೆ ರೋಹಿತ್ ಪಡೆ. ಅಗ್ರ ಕ್ರಮಾಂಕದ ಆಟಗಾರರು ಅಲ್ಪ ಮೊತ್ತಕ್ಕೆ ಔಟಾದ ಕಾರಣ ಟೀಮ್ ಇಂಡಿಯಾ ಭಾರೀ ದೊಡ್ಡ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಅಜಿಂಕ್ಯಾ ರಹಾನೆ, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಆಟ ಭಾರತವನ್ನು ಸಂಕಷ್ಟದಿಂದ ಒಂದು ಹಂತಕ್ಕೆ ಪಾರು ಮಾಡುವಲ್ಲಿ ಯಶಸ್ವಿಯಾಗಿದೆ.

ತಂಡದ ಮೊತ್ತ 71 ರನ್‌ಗಳಾಗಿದ್ದಾಗ 4 ವಿಕೆಟ್ ಕಳೆದುಕೊಂಡು ಭೌಆರತ ಭಾರೀ ಸಂಕಷ್ಟಕ್ಕೆ ಸಿಲುಕಿತ್ತು. ಅಗ್ರ ಕ್ರಮಾಂಕದ ಪ್ರಮುಖ ಆಟಗಾರರು ರನ್‌ಗಳಿಸಲು ವಿಫಲವಾದ ಕಾರಣ ಭಾರತ ತಂಡ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವ ಭೀತಿಯುಂಟಾಗಿತ್ತು. ಈ ಹಂತದಲ್ಲಿ ಒಂದು ಉತ್ತಮ ಜೊತೆಯಾಟ ಅಜಿಂಕ್ಯಾ ರಹಾನೆ ಹಾಗೂ ರವೀಂದ್ರ ಜಡೇಜಾ ಅವರಿಂದ ಬಂದಿತ್ತು. 71 ರನ್‌ಗಳ ಜೊತೆಯಾಟದ ಬಳಿಕ ರವೀಂದ್ರ ಜಡೇಜಾ 48 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.

WTC Final, India allout for 296, Australia lead by 177 runs in 1st innings

ನಂತರ ಶ್ರೀಕರ್ ಭರತ್ ಮೂರನ ದಿನದಾಟದ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡ ಬಳಿಕ ಅಜಿಂಕ್ಯಾ ರಹಾನೆಗೆ ಜೊತೆಯಾಗಿದ್ದು ಶಾರ್ದೂಕ್ ಠಾಕೂರ್. ಈ ಜೋಡಿ ಮೂರನೇ ದಿನದಾಟದ ಮೊದಲ ಸೆಶನ್‌ನಲ್ಲಿ ಸಂಪೂರ್ಣವಾಗಿ ಆಸಿಸ್ ಬೌಲರ್‌ಗಳ ಬೆವರಿಳಿಸಿದ್ದು ತಂಡದ ಮೊತ್ತವನ್ನು ಹೆಚ್ಚಿಸಿದರು. ಈ ಪಂದ್ಯದಲ್ಲಿ ಅಮೂಲ್ಯ 89 ರನ್‌ಗಳ ಕೊಡುಗೆ ನೀಡಿದ ಅಜಿಂಕ್ಯಾ ರಹಾನೆ ಎರಡನೇ ಸೆಶನ್‌ನ ಆರಂಭದಲ್ಲಿಔಟಾಗಿ ನಿರ್ಗಮಿಸಿದರು. ಈ ಮೂಲಕ ಶಾರ್ದೂಲ್ ಠಾಕೂರ್ ಜೊತೆಗೆ 109 ರನ್‌ಗಳ ಜೊತೆಯಾಟ ಬೇರ್ಪಟ್ಟಿತು.

ಇನ್ನು ರಹಾನೆ ಔಟಾದ ಬಳಿಕವೂ ಶಾರ್ದೂಕ್ ತಮ್ಮ ಆಟವನ್ನು ಕೆಲಕಾಲ ಮುಂದುವರಿಸಿದರು. ಈ ಸಂದರ್ಭದಲ್ಲಿ ಅಮೂಲ್ಯ ಅರ್ಧ ಶತಕವನ್ನು ಕೂಡ ಅವರು ಪೂರ್ಣಗೊಳಿಸಿದ್ದು 51 ರನ್‌ಗಳಿಸಿ ನಂತರ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ಟೀಮ್ ಇಂಡಿಯಾ 296 ರನ್‌ಗೆ ಆಲೌಟ್ ಆಗಿದೆ.

ಇನ್ನು ಆಸ್ಟ್ರೇಲಿಯಾ ಪರವಾಗಿ ಪ್ಯಾಟ್ ಕಮ್ಮಿನ್ಸ್ ಮೂರು ವಿಕೆಟ್ ಕಬಳಿಸಿದರೆ ಮಿಚೆಲ್ ಸ್ಟಾರ್ಕ್, ಬೋಲಂಡ್ ಹಾಗೂ ಗ್ರೀನ್ ತಲಾ ಎರಡು ವಿಕೆಟ್ ಪಡೆದರು. ಒಂದು ವಿಕೆಟ್ ಕ್ರಿಸ್ ಲಿನ್ ಪಾಲಾಗಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ XI: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಜೋಶ್ ಇಂಗ್ಲಿಸ್, ಮೈಕೆಲ್ ನೆಸರ್, ಟಾಡ್ ಮರ್ಫಿ, ಮಾರ್ಕಸ್ ಹ್ಯಾರಿಸ್
ಟೀಮ್ ಇಂಡಿಯಾ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ಅಕ್ಷರ್ ಪಟೇಲ್, ಜಯದೇವ್ ಉನದ್ಕತ್, ರವಿಚಂದ್ರನ್ ಅಶ್ವಿನ್

Story first published: Friday, June 9, 2023, 19:12 [IST]
Other articles published on Jun 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+