Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final, Live ಸ್ಕೋರ್‌: ಭಾರತ ವಿರುದ್ಧ ನ್ಯೂಜಿಲೆಂಡ್‌ಗೆ ಮುನ್ನಡೆ

WTC Final: India vs New Zealand, Day 5, Live Score, New Zealand 32 runs lead
ವೇಗಿಗಳ ಮಾರಕ ಬೌಲಿಂಗ್ನಿಂದ ಕಡಿಮೆ ಮೊತ್ತಕ್ಕೆ ಕಿವೀಸ್ ಕಟ್ಟಿಹಾಕಿದ ಭಾರತ | Oneindia Kannada

ಸೌತಾಂಪ್ಟನ್‌: ಸೌತಾಂಪ್ಟನ್‌ನ ಏಜಸ್ ಬೌಲ್‌ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಐಸಿಸಿ ವರ್ಲ್ಟ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡ 32 ರನ್ ಮುನ್ನಡೆ ಸಾಧಿಸಿದೆ. ಅನುಭವಿ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಮಾರಕ ಬೌಲಿಂಗ್‌ನಿಂದಾಗಿ ಭಾರತ ಹಿನ್ನಡೆಯ ಅಂತರ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗಿದೆ. ಈಗ ವಿರಾಟ್ ಕೊಹ್ಲಿ ಬಳಗ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ರೋಹಿತ್ ಶರ್ಮಾ 34, ಶುಬ್ಮನ್ ಗಿಲ್ 28, ವಿರಾಟ್ ಕೊಹ್ಲಿ 44, ಅಜಿಂಕ್ಯ ರಹಾನೆ 49, ರವೀಂದ್ರ ಜಡೇಜಾ 15, ಆರ್‌ ಅಶ್ವಿನ್ 22, ರಿಷಭ್ ಪಂತ್ 4, ಚೇತೇಶ್ವರ್ ಪೂಜಾರ 8 ರನ್‌ನೊಂದಿಗೆ 92.1 ಓವರ್‌ಗೆ 10 ವಿಕೆಟ್ ಕಳೆದು 217 ರನ್ ಗಳಿಸಿತ್ತು.

WTC Final: ಭಾರತ vs ನ್ಯೂಜಿಲೆಂಡ್, Live ಸ್ಕೋರ್‌ಕಾರ್ಡ್

1
50883
ಡೆವಾನ್ ಕಾನ್ವೇ ಅರ್ಧ ಶತಕ

ಡೆವಾನ್ ಕಾನ್ವೇ ಅರ್ಧ ಶತಕ

ನ್ಯೂಜಿಲೆಂಡ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಟಾಮ್ ಲ್ಯಾಥಮ್ 30, ಡೆವಾನ್ ಕಾನ್ವೇ 54, ರಾಸ್ ಟೇಲರ್ 11, ಹೆನ್ರಿ ನಿಕೋಲ್ಸ್ 7, ಬಿಜೆ ವಾಟ್ಲಿಂಗ್ 1, ಕೇನ್ ವಿಲಿಯಮ್ಸನ್ 49, ಕಾಲಿನ್ ಡಿ ಗ್ರ್ಯಾಂಡ್‌ ಹೋಮ್ 13, ಕೈಲ್ ಜೇಮಿಸನ್ 21, ಟಿಮ್ ಸೌಥೀ 30 ರನ್‌ನೊಂದಿಗೆ 99.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 249 ರನ್ ಗಳಿಸಿತು.

ಇತ್ತಂಡಗಳ ಬೌಲಿಂಗ್

ಇತ್ತಂಡಗಳ ಬೌಲಿಂಗ್

ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಟಿಮ್ ಸೌಥೀ 1, ಟ್ರೆಂಡ್ ಬೌಲ್ಟ್ 2, ಕೈಲ್ ಜೇಮಿಸನ್ 5, ನೀಲ್ ವ್ಯಾಗ್ನರ್ 2 ವಿಕೆಟ್‌ನೊಂದಿಗೆ ಗಮನ ಸೆಳೆದಿದ್ದರೆ, ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಇಶಾಂತ್ ಶರ್ಮಾ 3, ಮೊಹಮ್ಮದ್ ಶಮಿ 4, ಆರ್ ಅಶ್ವಿನ್ 2, ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.

ನ್ಯೂಜಿಲೆಂಡ್ ಪ್ಲೇಯಿಂಗ್ XI

ನ್ಯೂಜಿಲೆಂಡ್ ಪ್ಲೇಯಿಂಗ್ XI

ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್ (ವಿಕೆಟ್ ಕೀಪರ್), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜಾಮಿಸನ್, ನೀಲ್ ವ್ಯಾಗ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.

ಭಾರತ ಪ್ಲೇಯಿಂಗ್ XI

ಭಾರತ ಪ್ಲೇಯಿಂಗ್ XI

ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ.

Story first published: Tuesday, June 22, 2021, 21:30 [IST]
Other articles published on Jun 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+