
ಸೌತಾಂಪ್ಟನ್: ಸೌತಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಐಸಿಸಿ ವರ್ಲ್ಟ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯುತ್ತಿದೆ. ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ಆಡುತ್ತಿದ್ದು, ಭಾನುವಾರ (ಜೂನ್ 20) 3ನೇ ದಿನದಾಟದ ಅಂತ್ಯಕ್ಕೆ 49 ಓವರ್‌ಗೆ 2 ವಿಕೆಟ್ ಕಳೆದು 101 ರನ್ ಗಳಿಸಿತ್ತು. ಸೋಮವಾರದ ಪಂದ್ಯ ಮಳೆಗೆ ಆಹುತಿಯಾಗಿತ್ತು.
ಮಂಗಳವಾರ (ಜೂನ್ 21) ತಡವಾಗಿ ದಿನದಾಟ ಶುರುವಾಗಿದ್ದು, ನ್ಯೂಜಿಲೆಂಡ್ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಟಾಮ್ ಲ್ಯಾಥಮ್ (30), ಡೆವಾನ್ ಕಾನ್ವೇ (54), ರಾಸ್ ಟೇಲರ್ (11), ಹೆನ್ರಿ ನಿಕೋಲ್ಸ್ (7), ಬಿಜೆ ವಾಟ್ಲಿಂಗ್ (1) ನಿರ್ಮಿಸಿದ್ದಾರೆ. 72 ಓವರ್‌ಗೆ ಕಿವೀಸ್ 5 ವಿಕೆಟ್ ಕಳೆದುಕೊಂಡಿತ್ತು. ಇಶಾಂತ್ ಶರ್ಮಾ 2, ಮೊಹಮ್ಮದ್ ಶಮಿ 2, ಆರ್ ಅಶ್ವಿನ್ 1 ವಿಕೆಟ್ ಪಡೆದುಕೊಂಡಿದ್ದರು.
WTC Final: ಭಾರತ vs ಕಿವೀಸ್, Live ಸ್ಕೋರ್‌ಕಾರ್ಡ್
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ರೋಹಿತ್ ಶರ್ಮಾ 34, ಶುಬ್ಮನ್ ಗಿಲ್ 28, ವಿರಾಟ್ ಕೊಹ್ಲಿ 44, ಅಜಿಂಕ್ಯ ರಹಾನೆ 49, ರವೀಂದ್ರ ಜಡೇಜಾ 15, ಆರ್ ಅಶ್ವಿನ್ 22, ರಿಷಭ್ ಪಂತ್ 4, ಚೇತೇಶ್ವರ್ ಪೂಜಾರ 8 ರನ್‌ನೊಂದಿಗೆ 92.1 ಓವರ್‌ಗೆ 10 ವಿಕೆಟ್ ಕಳೆದು 217 ರನ್ ಗಳಿಸಿತ್ತು. ಮಳೆಯ ಕಾರಣ ಸೋಮವಾರ 4ನೇ ದಿನದಾಟದ ನಡೆಯಲಿಲ್ಲ. ಮಂಗಳವಾರವೂ ಮಳೆಯ ದಿನದಾಟದ ಆರಂಭ ವಿಳಂಬವಾಗಿತ್ತು.
ಭಾರತ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ.
ನ್ಯೂಜಿಲೆಂಡ್ ಪ್ಲೇಯಿಂಗ್ XI: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್ (ವಿಕೆಟ್ ಕೀಪರ್), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜಾಮಿಸನ್, ನೀಲ್ ವ್ಯಾಗ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.