Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final, ಭಾರತ vs ಕಿವೀಸ್, Live ಸ್ಕೋರ್‌: ಭಾರತದ 3 ವಿಕೆಟ್‌ಗಳು ಪತನ

WTC Final: India vs New Zealand Match, Live Score

ಸೌತಾಂಪ್ಟನ್‌: ಭಾರತ ಮತ್ತು ನ್ಯೂಜಿಲೆಂಡ್‌ ಮಧ್ಯೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯುತ್ತಿದೆ. ಜೂನ್ 18-22ರ ವರೆಗೆ ಈ ಪಂದ್ಯ ನಡೆಯಲಿದೆ. ಜೂನ್ 18ರಂದು ಆರಂಭಗೊಳ್ಳಬೇಕಿದ್ದ ಪಂದ್ಯ ವಿಪರೀತ ಮಳೆಯ ಕಾರಣ ತಡವಾಗಿ ಆರಂಭವಾಗಿದೆ.

ಸೌತಾಂಪ್ಟನ್‌ನಲ್ಲಿ ಜೂನ್ 18ರ ಶುಕ್ರವಾರ ತುಂಬಾ ಮಳೆಯಿದ್ದಿದ್ದರಿಂದ ಪಂದ್ಯದ ಆರಂಭಿಕ ದಿನ ಟಾಸ್ ಕೂಡ ನಡೆಯದೆ ಪಂದ್ಯಕ್ಕೆ ತೊಂದರೆಯಾಗಿತ್ತು. ಶನಿವಾರ ಟಾಸ್ ನಡೆದಿದ್ದು, ಟಾಸ್ ಗೆದ್ದಿರುವ ಕೇನ್ ವಿಲಿಯಮ್ಸ್ ಪಡೆ ಬೌಲಿಂಗ್ ಆಯ್ದುಕೊಂಡಿದೆ. ಬ್ಯಾಟಿಂಗ್ ಮಾಡುತ್ತಿರುವ ಭಾರತ, ರೋಹಿತ್ ಶರ್ಮಾ (34 ರನ್), ಶುಬ್ಮನ್ ಗಿಲ್ (28), ಚೇತೇಶ್ವರ ಪೂಜಾರ (8) ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಶನಿವಾರ ದಿನದಾಟದ ಅಂತ್ಯಕ್ಕೆ ಭಾರತ 64.4 ಓವರ್‌ಗೆ 3 ವಿಕೆಟ್‌ ಕಳೆದು 146 ರನ್ ಗಳಿಸಿತ್ತು. ನಾಯಕ ವಿರಾಟ್ ಕೊಹ್ಲಿ (44 ರನ್) ಮತ್ತು ಉಪನಾಯಕ ಅಜಿಂಕ್ಯ ರಹಾನೆ (29) ಕ್ರೀಸ್‌ನಲ್ಲಿದ್ದರು. ಬ್ಯಾಡ್‌ ಲೈಟ್ ಕಾರಣ ಶನಿವಾರ ಕೂಡ ಪಂದ್ಯ ಬೇಗನೆ ನಿಲ್ಲಿಸಲ್ಪಟ್ಟಿತು.

WTC Final, ಭಾರತ vs ನ್ಯೂಜಿಲೆಂಡ್, Live ಸ್ಕೋರ್‌

1
50883

ಭಾರತ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ.

ನ್ಯೂಜಿಲೆಂಡ್ ಪ್ಲೇಯಿಂಗ್ XI: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್ (ವಿಕೆಟ್ ಕೀಪರ್), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜಾಮಿಸನ್, ನೀಲ್ ವ್ಯಾಗ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.

Story first published: Sunday, June 20, 2021, 0:28 [IST]
Other articles published on Jun 20, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+