WTC final: ಭಾರತ ವಿರುದ್ಧ ಗೆದ್ದು ಚಾಂಪಿಯನ್ಸ್ ಪಟ್ಟಕ್ಕೇರಿದ ನ್ಯೂಜಿಲೆಂಡ್!

ಸೌಥಾಂಪ್ಟನ್: ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಬುಧವಾರ (ಜೂನ್ 23) ಮುಕ್ತಾಯಗೊಂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಕೇನ್ ವಿಲಿಯಮ್ಸ್ ಪಡೆ ಚಾಂಪಿಯನ್ಸ್ ಪಟ್ಟಕ್ಕೇರಿದೆ. ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗವನ್ನು ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿದೆ.
ದ್ವಿತೀಯ ಇನ್ನಿಂಗ್ಸ್ ಬಳಿಕ ಟೀಮ್ ಇಂಡಿಯಾ ನ್ಯೂಜಿಲೆಂಡ್ ಗೆಲುವಿಗೆ 53 ಓವರ್‌ಗಳಲ್ಲಿ 139 ರನ್ ಗುರಿ ನೀಡಿತ್ತು. ಬುಧವಾರ ಕೊನೇ ದಿನವಾಗಿದ್ದರಿಂದ ದಿನದಾಟ ಮುಗಿಯುವುದರೊಳಗೆ ಕಿವೀಸ್ 139 ರನ್ ಬಾರಿಸಬೇಕಾಗಿತ್ತು. ಅದರಂತೆ ಕಿವೀಸ್ ಸುಲಭವಾಗಿ ಗುರಿ ತಲುಪಿ ಚೊಚ್ಚಲ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ನಿರ್ಮಿಸಿದೆ.

ಇತ್ತಂಡಗಳ ಮೊದಲ ಇನ್ನಿಂಗ್ಸ್
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ, ರೋಹಿತ್ ಶರ್ಮಾ 34, ಶುಬ್ಮನ್ ಗಿಲ್ 28, ವಿರಾಟ್ ಕೊಹ್ಲಿ 44, ಅಜಿಂಕ್ಯ ರಹಾನೆ 49, ರವೀಂದ್ರ ಜಡೇಜಾ 15, ಆರ್ ಅಶ್ವಿನ್ 22, ರಿಷಭ್ ಪಂತ್ 4, ಚೇತೇಶ್ವರ್ ಪೂಜಾರ 8 ರನ್‌ನೊಂದಿಗೆ 92.1 ಓವರ್‌ಗೆ 10 ವಿಕೆಟ್ ಕಳೆದು 217 ರನ್ ಗಳಿಸಿತ್ತು.
ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಟಾಮ್ ಲ್ಯಾಥಮ್ 30, ಡೆವೊನ್ ಕಾನ್ವೇ 54, ರಾಸ್ ಟೇಲರ್ 11, ಹೆನ್ರಿ ನಿಕೋಲ್ಸ್ 7, ಬಿಜೆ ವಾಟ್ಲಿಂಗ್ 1, ಕೇನ್ ವಿಲಿಯಮ್ಸನ್ 49, ಕಾಲಿನ್ ಡಿ ಗ್ರ್ಯಾಂಡ್ ಹೋಮ್ 13, ಕೈಲ್ ಜೇಮಿಸನ್ 21, ಟಿಮ್ ಸೌಥೀ 30 ರನ್‌ನೊಂದಿಗೆ 99.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 249 ರನ್ ಗಳಿಸಿತ್ತು.

ದ್ವಿತೀಯ ಇನ್ನಿಂಗ್ಸ್ ಮಾಹಿತಿ
ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 30, ಶುಬ್ಮನ್ ಗಿಲ್ 8, ಚೇತೇಶ್ವರ್ ಪೂಜಾರ 15, ವಿರಾಟ್ ಕೊಹ್ಲಿ 13, ಅಜಿಂಕ್ಯ ರಹಾನೆ 15, ರಿಷಭ್ ಪಂತ್ 41, ರವೀಂದ್ರ ಜಡೇಜಾ 16, ಆರ್ ಅಶ್ವಿನ್ 7, ಮೊಹಮ್ಮದ್ ಶಮಿ 13 ರನ್ ಬಾರಿಸಿದ್ದರು. ಭಾರತ 73 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 170 ರನ್ ಬಾರಿಸಿತ್ತು. ನ್ಯೂಜಿಲೆಂಡ್ ಗೆಲುವಿಗೆ 53 ಓವರ್ ಗಳಲ್ಲಿ 139 ರನ್ ಬೇಕಿತ್ತು.
ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ನಿಂದ ಟಾಮ್ ಲ್ಯಾಥಮ್ 9, ಡೆವೊನ್ ಕಾನ್ವೇ 19, ಕೇನ್ ವಿಲಿಯಮ್ಸನ್ ಅಜೇಯ 54, ರಾಸ್ ಟೇಲರ್ ಅಜೇಯ 47 ರನ್ ಸೇರಿಸಿದರು. ಕಿವೀಸ್ 45.5ನೇ ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 140 ರನ್ ಬಾರಿಸಿ ಗೆಲುವನ್ನಾಚರಿಸಿತು.

ಬೌಲಿಂಗ್‌ನಲ್ಲಿ ಮಿಂಚಿದವರು
ಭಾರತದ ಇನ್ನಿಂಗ್ಸ್‌ಗಳಲ್ಲಿ ನ್ಯೂಜಿಲೆಂಡ್‌ನ ಟಿಮ್ ಸೌಥೀ 1+4, ಟ್ರೆಂಡ್ ಬೌಲ್ಟ್ 2+3, ಕೈಲ್ ಜೇಮಿಸನ್ 5+2, ನೀಲ್ ವ್ಯಾಗ್ನರ್ 2+1 ವಿಕೆಟ್‌ನೊಂದಿಗೆ ಗಮನ ಸೆಳೆದಿದ್ದರೆ, ನ್ಯೂಜಿಲೆಂಡ್ ಇನ್ನಿಂಗ್ಸ್‌ಗಳಲ್ಲಿ ಭಾರತದ ಇಶಾಂತ್ ಶರ್ಮಾ 3, ಮೊಹಮ್ಮದ್ ಶಮಿ 4, ಆರ್ ಅಶ್ವಿನ್ 2+2, ರವೀಂದ್ರ ಜಡೇಜಾ 1 ವಿಕೆಟ್ ಪಡೆದರು. ಇದು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಚೊಚ್ಚಲ ಆವೃತ್ತಿಯಾಗಿರುವುದರಿಂದ ಈ ಆವೃತ್ತಿಯಲ್ಲಿ ಟ್ರೋಫಿ ಜಯಿಸಿರುವ ನ್ಯೂಜಿಲೆಂಡ್ ಇತಿಹಾಸದ ಪುಟ ಸೇರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications