WTC Final, India vs New Zealand: ಇಂದಿನ ಪಂದ್ಯ ನಡೆಯುತ್ತಾ, ಇಲ್ವಾ?!

ಸೌತಾಂಪ್ಟನ್: ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಇಂದು ಭಾರತ-ಆಸ್ಟ್ರೇಲಿಯಾ ತಂಡಗಳು ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕಾಗಿ ಸಜ್ಜಾಗಿವೆ. 3 PMಗೆ ಪಂದ್ಯ ಶುರುವಾಗಲಿದೆ. ಆದರೆ ಇಂದಿನ ಪಂದ್ಯ ನಡೆಯುತ್ತಾ ಅನ್ನೋದೇ ಅನುಮಾನ ಮೂಡಿಸಿದೆ. ಯಾಕೆಂದರೆ ಪಂದ್ಯ ನಡೆಯುತ್ತಾ ಇಲ್ವಾ ಅನ್ನೋದನ್ನು ಅಲ್ಲಿನ ಹವಾಮಾನ (ಮಳೆ) ನಿರ್ಧರಿಸಲಿದೆ.
ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯ ಜೂನ್ 18 ರಿಂದ 22ರ ವರೆಗೆ ನಡೆಯಲಿದೆ. ಆದರೆ ನಡೆಯಲಿರುವ ಈ ಐದು ದಿನಗಳ ಪಂದ್ಯ ಎಲ್ಲಾ ದಿನವೂ ಸರಾಗವಾಗಿ ನಡೆಯಲಿದೆ ಅನ್ನಲಾಗದು. ಯಾಕೆಂದರೆ ಸೌತಾಂಪ್ಟನ್ ಹವಾಮಾನ ಪಂದ್ಯದ ಮೇಲೆ ಪರಿಣಾಮ ಬೀರಲಿದೆ.

ಸೌತಾಂಪ್ಟನ್ ಹವಾಮಾನ ಹೇಗಿದೆ?
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನ ಪಂದ್ಯ ನಡೆಯುವ ಮೊದಲ ದಿನ ಸೌತಾಂಪ್ಟನ್‌ನಲ್ಲಿ ಶುಕ್ರವಾರ ಕನಿಷ್ಠ 17 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ. ಇದರರ್ಥ ಮಳೆಯ ಸಾಧ್ಯತೆ ತುಂಬಾ ಹೆಚ್ಚು . ಹೀಗಾಗಿ ಆರಂಭಿಕ ಪಂದ್ಯ ಮಳೆಯಿಂದಾಗಿ ತುಂಬಾ ಸಮಸ್ಯೆಗೀಡಾಗಲಿದೆ. ಮೊದಲ ದಿನ ಬಹುತೇಕ ಪಂದ್ಯ ನಡೆಯದಿರಲೂಬಹುದು ಎನ್ನುತ್ತಿದೆ ಸೌತಾಂಪ್ಟನ್ ಹವಾಮಾನ ವರದಿ.

ಗುಡುಗು ಸಹಿತ ಜೋರು ಮಳೆ
ಭಾರತ-ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯುವ ಮೊದಲ ದಿನ ಅಂದರೆ ಶುಕ್ರವಾರ ಗುಡುಗು ಸಹಿತ ಜೋರು ಮಳೆ ಸುರಿಯಲಿದೆ. ಅದೂ ಕೂಡ ಶುಕ್ರವಾರ ಬೆಳಗ್ಗೆ 6 AMಗೆ ಆರಂಭವಾಗುವ ಮಳೆ ಶನಿವಾರ 6 AM ವರೆಗೂ ಬಿಡದೆ ಸುರಿಯಲಿದೆ ಎಂದು ಯುನೈಟೆಡ್ ಕಿಂಗ್ಡಮ್‌ನ ಹವಾಮಾನ ಇಲಾಖೆ ತಿಳಿಸಿದೆ. 'ಶುಕ್ರವಾರದಿಂದ ಶನಿವಾರದ ವರೆಗೆ ಸುಮಾರು 40mm ಮಳೆಯಾಗಲಿದೆ,' ಎಂದು ವರದಿ ತಿಳಿಸಿದೆ.

ಯಾವ ಸಮಯ ಎಷ್ಟೆಷ್ಟು ಮಳೆ
ಶುಕ್ರವಾರ ಸೌತಾಂಪ್ಟನ್‌ನಲ್ಲಿ ಮಳೆ ಸಾಧ್ಯತೆ ಹೇಗಿರಲಿದೆ ಅನ್ನೋ ಮಾಹಿತಿಯನ್ನು ಅಲ್ಲಿನ ಹವಾಮಾನ ಇಲಾಖೆ ನೀಡಿದೆ. ಜೂನ್ 18ರ ಶುಕ್ರವಾರ 10:00 amಗೆ ಶೇ 80, 12:00pmಗೆ ಶೇ. 90, 02:00pmಗೆ ಶೇ. 90, 05:00pmಗೆ ಶೇ. 80 ಮಳೆಯ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ. ಅಂದರೆ ಶುಕ್ರವಾರ ಇಡೀ ದಿನ ಮಳೆ ಸುರಿಯುವುದರಿಂದ ಅಂದು ಪಂದ್ಯ ನಡೆಯುವ ಸಾಧ್ಯತೆ ತೀರಾ ಕಮ್ಮಿ.

ಯಾವ ದಿನ ಎಷ್ಟು ಮಳೆ?
ಸೌತಾಂಪ್ಟನ್‌ನಲ್ಲಿ ಯಾವ ದಿನ ಎಷ್ಟೆಷ್ಟು ಮಳೆಯಾಗಲಿದೆ ಎನ್ನುವ ಅಂದಾಜನ್ನೂ ಯುಕೆ ಹವಾಮಾನ ಇಲಾಖೆ ನೀಡಿದೆ. ಪಂದ್ಯ ನಡೆಯುವ ಸಾಧ್ಯತೆಯನ್ನೂ ನಾವು ಈ ಮಾಹಿತಿಯಲ್ಲೇ ಅಂದಾಜಿಸಬಹುದು.
* Day 1, ಜೂನ್ 18, ವಾಶ್‌ಔಟ್ (ಪಂದ್ಯ ನಡೆಯೋದಿಲ್ಲ)
* Day 2, ಜೂನ್ 19, 98 ಓವರ್ ವರೆಗೆ ಪಂದ್ಯ
* Day 3, ಜೂನ್ 20, 50-70 ಓವರ್ ವರೆಗೆ ಪಂದ್ಯ
* Day 4, ಜೂನ್ 21, 30-50 ಓವರ್ ವರೆಗೆ ಪಂದ್ಯ
* Day 5, ಜೂನ್ 22, 98 ಓವರ್ ವರೆಗೆ ಪಂದ್ಯ
* Day 6, ಜೂನ್ 23 (ರಿಸರ್ವ್ ಡೇ), 98 ಓವರ್ ವರೆಗೆ ಪಂದ್ಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications