WTC Final: ಮೂರನೇ ದಿನ ಸೌಥಾಂಪ್ಟನ್ ಹವಾಮಾನ ಹೇಗಿದೆ? ಇಲ್ಲಿದೆ ಮಾಹಿತಿ

ಸೌಥಾಂಪ್ಟನ್, ಜೂನ್ 20: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೂನಲ್ ಪಂದ್ಯದ ಮೊದಲ ದಿನ ಸಂಪೂರ್ಣವಾಗಿ ಮಳೆಯಿಂದಾಗಿ ವ್ಯರ್ಥವಾಗಿತ್ತು. ಆದರೆ ಶನಿವಾರ ಕಡೆಗೂ ಪಂದ್ಯದ ಆರಂಭಕ್ಕೆ ಅವಕಾಶ ದೊರೆತಿದೆ. ಆದರೆ ಎರಡನೇ ದಿನದಾಟದಲ್ಲೂ ಪೂರ್ಣ ಪ್ರಮಾಣದಲ್ಲಿ ಆಟಕ್ಕೆ ಮಂದಬೆಳಕು ಅಡ್ಡಿಯಾಗಿದೆ.
ಶನಿವಾರ ಟಾಸ್ ಗೆದ್ದ ನ್ಯೂಜಿಲೆಂಡ್ ಪಿಚ್ ವೇಗದ ಬೌಲರ್‌ಗಳಿಗೆ ಸಹಕಾರಿಯಾಗಿರುವ ಕಾರಣ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಶನಿವಾರ ನಡೆದ 64.4 ಓವರ್‌ಗಳ ಆಟದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬೆಳಕಿನ ಅಭಾವದಿಂದ ನಂತರ ಆಟ ಮುಂದುವರಿಯಲು ಸಾಧ್ಯವಾಗಲಿಲ್ಲ.
ಇದೀಗ ಮೂರನೇ ದಿನದಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಸೌಥಾಂಪ್ಟನ್‌ನಲ್ಲಿ ಮೋಡಮುಸುಕಿದ ವಾತಾವರಣ ಮುಂದುವರಿದಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ 19 ಡಿಗ್ರಿ ಸೆಲ್ಲಿಯಸ್‌ನ ಆಸುಪಾಸಿನಲ್ಲಿರಲಿದೆ. ಮೋಡ ಕವಿದ ವಾತಾವರಣದೊಂದಿಗೆ ಕೆಲ ಕಾಲ ಮಳೆ ಸುರಿಯುವ ಸಾಧ್ಯತೆಯೂ ಇದೆ. ಮೋಡ ಮುಸುಕುವ ಪ್ರಮಾಣ 93 ಶೇಕಡಾದಷ್ಟಿದ್ದರೆ ಗುಡುಗಿನ ಸಾಧ್ಯತೆ 13% ಇದೆ ಎಂದು ಹವಾಮಾನ ವರದಿ ತಿಳಿಸುತ್ತಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಆರಂಭಿಕ ಎರಡು ದಿನಗಳಲ್ಲಿ 70 ಓವರ್‌ಗೂ ಕಡಿಮೆ ಆಟ ನಡೆದಿದೆ. ಮುಂದಿನ ದಿನಗಳಲ್ಲಿಯೂ ಆಟಕ್ಕೆ ಮಳೆ ಅಡ್ಡಿಯಾಗುವ ಸಾದ್ಯತೆ ಹೆಚ್ಚಿದೆ. ಆದರೆ ಆಟವನ್ನು ಮುಂದುವರಿಸಲು ಮೀಸಲು ದಿನವನ್ನು ನಿಗದಿಗೊಳಿಸಲಾಗಿದ್ದು ನಿಗದಿತ ಓವರ್‌ಗಳಲ್ಲಿ ಕಡಿತವಾಗಿರುವ ಓವರ್‌ಗಳ ಪಂದ್ಯವನ್ನು ಮೀಸಲು ದಿನದಲ್ಲಿ ಆಡಿಸಲಾಗುತ್ತದೆ.
ಇನ್ನು ಪಂದ್ಯದ ಎರಡನೇ ದಿನ ಆಟ ಆರಂಭಿಸಲು ಅವಕಾಶ ದೊರೆತ ನಂತರ ಭಾರತೀಯ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಪ್ರದರ್ಶನ ನೀಡಲು ಆರಂಭಿಸಿದ್ದಾರೆ. ಬ್ಯಾಟಿಂಗ್‌ಗೆ ಕಠಿಣವಾಗಿರುವ ಪರಿಸ್ಥಿತಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ನ್ಯೂಜಿಲೆಂಡ್ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications