WTC Final: ಒಂದೂ ಎಸೆತ ಕಾಣದೆ ಐತಿಹಾಸಿಕ ಪಂದ್ಯದ ಮೊದಲ ದಿನದಾಟ ಮಳೆಗೆ ಆಹುತಿ

ಭಾರೀ ನಿರೀಕ್ಷೆ ಮೂಡಿಸಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ದಿನದಾಟ ರದ್ದಾಗಿದೆ. ಸಾಕಷ್ಟು ದಿನಗಳಿಂದ ಕಾಯುತ್ತಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಮಳೆರಾಯ ವಿಲನ್‌ನಂತಾಗಿದ್ದಾನೆ. ಹೀಗಾಗಿ ಪಂದ್ಯದ ಮೊದಲ ದಿನದಾಟ ಒಂದೇ ಒಂದು ಎಸೆತ ಕಾಣಲು ಸಾಧ್ಯವಾಗಿಲ್ಲ. ಬಿಟ್ಟು ಬಿಟ್ಟು ಆಗಮಿಸುವ ಮಳೆಯಿಂದಾಗಿ ಪಂದ್ಯವನ್ನು ಆರಂಭಿಸುವ ಯಾವ ಅವಕಾಶಗಳು ಕೂಡ ಆಯೋಜಕರಿಗೆ ದೊರೆಯಲಿಲ್ಲ.
ಮುಂಜಾನೆಯಿಂದಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಡೆಯುವ ಸೌಥಾಂಪ್ಟನ್‌ನಲ್ಲಿ ಮಳೆ ಸುರಿಯಲು ಆರಂಭಿಸಿತ್ತು. ಈ ಮಳೆ ದಿನವಿಡೀ ಸುರಿದ ಪರಿಣಾಮವಾಗಿ ಟಾಸ್ ಪ್ರಕ್ರಿಯೆ ನಡೆಯಲು ಕೂಡ ಅವಕಾಶ ದೊರೆಯಲಿಲ್ಲ. ನಂತರ ಭಾರತೀಯ ಕಾಲಮಾನ 7:20ರ ವೇಳೆಗೆ ವಾತಾವರಣವನ್ನು ಪರಿಶೀಲಿಸಿದ ನಂತರ ಮೊದಲ ದಿನದಾಟವನ್ನು ಅಧಿಕೃತವಾಗಿ ಮುಂದೂಡಲಾಗಿದೆ.
ನಿಗದಿಯಂತೆ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತು. ಆದರೆ ಹವಾಮಾನ ಇದಕ್ಕೆ ಅವಕಾಶವನ್ನು ಮಾಡಿಕೊಡಲೇ ಇಲ್ಲ. ಕ್ರೀಡಾಂಗಳ ಸಂಪೂರ್ಣವಾಗಿ ಒದ್ದೆಯಾಗಿದ್ದು ಮಳೆ ನಿಂತರೂ ಪಂದ್ಯವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಪರಿಗಣಿಸಿದ ನಂತರ ಮೊದಲ ದಿನದಾಟವನ್ನು ರದ್ದುಗೊಳಿಸಲಾಗಿದೆ.
ಇನ್ನು ಐತಿಹಾಸಿಕ ಪಂದ್ಯವಾಗಿರುವ ಕಾರಣ ಈ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಗೊಳಿಸಲಾಗಿದೆ. ಹೀಗಾಗಿ ಆರನೇ ದಿನವೂ ಪಂದ್ಯವನ್ನು ಮುಂದುವರಿಯುವುದು ಖಚಿತವಾಗಿದೆ. ಮತ್ತೊಂದೆಡೆ ಎರಡನೇ ದಿನವಾದರೂ ಪಂದ್ಯ ಮುಂದುವರಿಸಲು ಅವಕಾಶ ದೊರೆಯುತ್ತದೆಯೇ ಎಂಬ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications