WTC Final: ಭಾರತ vs ನ್ಯೂಜಿಲೆಂಡ್, ಟಾಸ್ ಪಕ್ಕಾ ಸಮಯ ಬಹಿರಂಗ!

ಸೌತಾಂಪ್ಟನ್: ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಜೂನ್-18 ರಿಂದ 22ರ ವರೆಗೆ ನಡೆಯುವುದರಲ್ಲಿತ್ತು. ಆದರೆ ಜೂನ್ 18ರಂದು ಪಂದ್ಯ ಚಾಲನೆಗೊಳ್ಳಲೇಯಿಲ್ಲ. ಪಂದ್ಯದ ಟಾಸ್ ಕೂಡ ನಡೆಯದಿದ್ದುದು ಕ್ರಿಕೆಟ್ ಪ್ರಿಯರಿಗೆ ಬೇಸರ ಮೂಡಿಸಿತ್ತು.
ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಆರಂಭದ ಸಮಯ ಬಹಿರಂಗಗೊಂಡಿದೆ. ಜೂನ್ 18ಕ್ಕೆ ಚಾಲನೆಗೊಳ್ಳಬೇಕಿದ್ದ ಪಂದ್ಯ ಮಳೆಯಿಂದಾಗಿ ಶುರುವಾಗಿರಲಿಲ್ಲ. ಆದರೆ ಜೂನ್ 19ಕ್ಕೆ ಪಂದ್ಯ ಶುರುವಾಗಲಿದೆ.

ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆ
ಜೂನ್ 18ರಂದು ಆರಂಭಗೊಳ್ಳಬೇಕಿದ್ದ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಮಳೆಯಿಂದಾಗಿ ಶುರುವಾಗಿರಲಿಲ್ಲ. ಸೌತಾಂಪ್ಟನ್‌ನಲ್ಲಿ ತೀವ್ರ ಮಳೆ ಇದ್ದಿದ್ದರಿಂದ ಟಾಸ್ ಕೂಡ ನಡೆಸಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರಂಭಿಕ ದಿನವಾಗಿದ್ದ ಶುಕ್ರವಾರ ಬೆಳಗ್ಗೆಯಿಂದಲೂ ಸೌತಾಂಪ್ಟನ್‌ನಲ್ಲಿ ಮಳೆ ಸುರಿಯುತ್ತಿತ್ತು. ಅಂದು ಅಲ್ಲಿನ ತಾಪಮಾನ 17 ಡಿಗ್ರೀ ಸೆಲ್ಶಿಯಸ್ ಇತ್ತು.

ಪಂದ್ಯ ಆರಂಭದ ಪಕ್ಕಾ ಸಮಯ
ಜೂನ್ 19ರಂದು ಭಾರತ-ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಭಾರತೀಯ ಕಾಲಮಾನ 3 PMಗೆ ಆರಂಭಗೊಳ್ಳಲಿದೆ. ಅದಕ್ಕೂ ಅರ್ಧಗಂಟೆ ಮುನ್ನ ಅಂದರೆ 2.30 PMಗೆ ಟಾಸ್ ನಡೆಯಲಿದೆ. ಬಳಿಕ ಪಂದ್ಯ ಮುಂದುವರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಯಾವ ದಿನ ಎಷ್ಟು ಮಳೆ?
ಸೌತಾಂಪ್ಟನ್‌ನಲ್ಲಿ ಯಾವ ದಿನ ಎಷ್ಟೆಷ್ಟು ಮಳೆಯಾಗಲಿದೆ ಎನ್ನುವ ಅಂದಾಜನ್ನೂ ಯುಕೆ ಹವಾಮಾನ ಇಲಾಖೆ ನೀಡಿದೆ. ಪಂದ್ಯ ನಡೆಯುವ ಸಾಧ್ಯತೆಯನ್ನೂ ನಾವು ಈ ಮಾಹಿತಿಯಲ್ಲೇ ಅಂದಾಜಿಸಬಹುದು.
* Day 1, ಜೂನ್ 18, ವಾಶ್‌ಔಟ್ (ಪಂದ್ಯ ನಡೆಯೋದಿಲ್ಲ)
* Day 2, ಜೂನ್ 19, 98 ಓವರ್ ವರೆಗೆ ಪಂದ್ಯ
* Day 3, ಜೂನ್ 20, 50-70 ಓವರ್ ವರೆಗೆ ಪಂದ್ಯ
* Day 4, ಜೂನ್ 21, 30-50 ಓವರ್ ವರೆಗೆ ಪಂದ್ಯ
* Day 5, ಜೂನ್ 22, 98 ಓವರ್ ವರೆಗೆ ಪಂದ್ಯ
* Day 6, ಜೂನ್ 23 (ರಿಸರ್ವ್ ಡೇ), 98 ಓವರ್ ವರೆಗೆ ಪಂದ್ಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications