Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final: ಇಂಗ್ಲೆಂಡ್ ತಲುಪಿದ ಭಾರತೀಯ ಪುರುಷ, ಮಹಿಳಾ ತಂಡ

WTC Final: Indian cricket teams, both men and women land in England

ಲಂಡನ್: ಇಂಗ್ಲೆಂಡ್‌ಗೆ ಪ್ರಯಾಣ ಹೊರಟಿದ್ದ ಭಾರತೀಯ ಪುರುಷ ಮತ್ತು ಮಹಿಳಾ ತಂಡ ಜೂನ್ 3ರಂದು ಇಂಗ್ಲೆಂಡ್‌ಗೆ ತಲುಪಿದೆ. ಪುರುಷರ ತಂಡಕ್ಕೆ ಜೂನ್ 18ರಿಂದ 22ರ ವರೆಗೆ ನ್ಯೂಜಿಲೆಂಡ್ ವಿರುದ್ಧ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ನಡೆಯಲಿದೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಬಳಿಕ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಭಾರತ ಮಹಿಳಾ ತಂಡ ಮತ್ತು ಇಂಗ್ಲೆಂಡ್ ವನಿತಾ ತಂಡಗಳ ಮಧ್ಯೆ ಒಂದು ಟೆಸ್ಟ್‌ ಪಂದ್ಯ, ಮೂರು ಏಕದಿನ ಪಂದ್ಯ ಮತ್ತು ಮೂರು ಟಿ20ಐ ಪಂದ್ಯಗಳು ನಡೆಯಲಿವೆ.

ತಂಡ ಇಂಗ್ಲೆಂಡ್‌ಗೆ ತಲುಪಿರುವುದನ್ನು ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ ಕೆಎಲ್ ರಾಹುಲ್ ತಿಳಿಸಿದ್ದಾರೆ. ಟ್ವಿಟರ್‌ನಲ್ಲಿ ಫೋಟೋ ಹಾಕಿಕೊಂಡಿರುವ ರಾಹುಲ್, 'ಇಂಗ್ಲೆಂಡ್‌ ಭೂಸ್ಪರ್ಶ ಮಾಡುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

ಇಂಗ್ಲೆಂಡ್‌ಗೆ ಬಂದಿರುವ ಭಾರತೀಯ ತಂಡ ಅಲ್ಲಿಂದ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ನಡೆಯುವ ಸೌತಾಂಪ್ಟನ್‌ಗೆ ತೆರಳಲಿದೆ. ಅಲ್ಲಿ ಭಾರತ ತಂಡ ಕ್ವಾರಂಟೈನ್ ಪಾಲಿಸಲಿದೆ. ಮಹಿಳಾ ತಂಡಕ್ಕೆ ಜೂನ್ 16ರಿಂದ ಪ್ರವಾಸ ಸರಣಿಗಳು ನಡೆಯಲಿವೆ.

Story first published: Thursday, June 3, 2021, 15:26 [IST]
Other articles published on Jun 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+