Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final: ಇಂಗ್ಲೆಂಡ್‌ನಲ್ಲಿ ಕಪಿಲ್‌ದೇವ್ ಸಾಧನೆಯನ್ನು ಹಿಂದಿಕ್ಕಿ ದಾಖಲೆ ಬರೆದ ಇಶಾಂತ್

WTC Final: Ishant Sharma create record in England after surpasses Kapil Dev in England
WTC 2021 Final ನಲ್ಲಿ ಹೊಸ ದಾಖಲೆ ಬರೆದ ಇಶಾಂತ್ ಶರ್ಮಾ | Oneindia Kannada

ಸೌಥಾಂಪ್ಟನ್, ಜೂನ್ 21: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದು ಸದ್ಯ ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸುತ್ತಿದೆ. ಮೂರನೇ ದಿನ ನ್ಯೂಜಿಲೆಂಡ್ ತನ್ನ ಎರಡು ವಿಕೆಟ್ ಕಳೆದುಕೊಂಡಿದ್ದು ಒಂದು ವಿಕೆಟ್ ಇಶಾಂತ್ ಶರ್ಮಾ ಪಾಲಾದರೆ ಮತ್ತೊಂದು ವಿಕೆಟ್ ಆರ್ ಅಶ್ವಿನ್ ಪಾಲಾಗಿದೆ.

ಇನ್ನು ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಒಂದು ವಿಕೆಟ್‌ಅನ್ನು ತನ್ನ ಖಾತೆಗೆ ಸೇರಿಸಿಕೊಂಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಅನುಭವಿ ವೇಗಿ ಇಶಾಂತ್ ಶರ್ಮಾ ಇಂಗ್ಲೆಂಡ್ ನೆಲದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ.

ಇಶಾಂತ್ ಶರ್ಮಾ ನ್ಯೂಜಿಲೆಂಡ್ ಆರಂಭಿಕ ಆಟಗಾರ ಡೇವೊನ್ ಕಾನ್ವೆ ಅವರನ್ನು 54 ರನ್‌ಗಳಿಸಿದ್ದ ವೇಳೆ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದು ಇಂಗ್ಲೆಂಡ್ ನೆಲದಲ್ಲಿ ಇಶಾಂತ್ ಶರ್ಮಾ ಅವರ 44ನೇ ವಿಕೆಟ್ ಆಗಿದೆ. ಈ ಮೂಲಕ ಇಶಾಂತ್ ಶರ್ಮಾ ಕಪಿಲ್ ದೇವ್ ಹೆಸರಿನಲ್ಲಿದ್ದ ಈ ದಾಖಲೆಯನ್ನು ಮುರಿದಿದ್ದಾರೆ.

ಇದಕ್ಕೂ ಮುನ್ನ ಮಾಜಿ ನಾಯಕ ಕಪಿಲ್‌ದೇವ್ 13 ಪಂದ್ಯಗಳಲ್ಲಿ 43 ವಿಕೆಟ್ ಪಡೆದು ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿದ್ದರು. ಇಶಾಂತ್ ಶರ್ಮಾ ಕೂಡ ಇಷ್ಟೇ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ಆಡಿದ್ದು 44 ವಿಕೆಟ್ ಸಂಪಾದಿಸಿದ್ದು ಈ ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಮೂರನೇ ದಿನ ಮಂದ ಬೆಳಕಿನ ಕಾರಣದಿಂದ ಪಂದ್ಯ ಸ್ಥಗಿತಗೊಳ್ಳುವ ಕೆಲವೇ ಕ್ಷಣಗಳ ಮುನ್ನ ಈ ವಿಕೆಟ್ ಪಡೆಯುವಲ್ಲಿ ಇಶಾಂತ್ ಯಶಸ್ವಿಯಾಗಿದ್ದರು. ಇದಾದ ನಂತರ ನ್ಯೂಜಿಲೆಂಡ್ ತಂಡ 101 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಸದ್ಯ ನ್ಯೂಜಿಲೆಂಡ್ 116 ರನ್‌ಗಳ ಹಿನ್ನೆಡೆಯಲ್ಲಿದೆ. ನಾಲ್ಕನೇ ದಿನದಾಟಕ್ಕೆ ಮಳೆಯ ಆತಂಕ ಉಂಟಾಗಿದ್ದು ಪಂದ್ಯ ನಿರಾತಂಕವಾಗಿ ಮುಂದುವರಿಯಲು ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ.

Story first published: Monday, June 21, 2021, 14:30 [IST]
Other articles published on Jun 21, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+