WTC Final: ದೊಡ್ಡ ಎಡವಟ್ಟು ಮಾಡಿ ಮೈದಾನದಿಂದ ಹೊರಗೋಡಿದ ಬೂಮ್ರಾ

ಸೌತಾಂಪ್ಟನ್: ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಮೈದಾನದಲ್ಲಿ ದೊಡ್ಡ ಎಡವಟ್ಟು ಮಾಡಿ ಮೈದಾನದಿಂದ ಹೊರಗೋಡಿರುವ ಸಂಗತಿ ನಡೆದಿದೆ. ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಬೂಮ್ರಾ ತಪ್ಪೆಸಗಿದ್ದು ಕಂಡುಬಂತು.
ಭಾರತ-ನ್ಯೂಜಿಲೆಂಡ್ ನಡುವಿನ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ 5ನೇ ದಿನದಾಟವಾದ ಮಂಗಳವಾರ (ಜೂನ್ 23) ನಡೆದ ಪಂದ್ಯದ ವೇಳೆ ಜಸ್‌ಪ್ರೀತ್ ಬೂಮ್ರಾ ಹಳೆಯ ಜೆರ್ಸಿ ಧರಿಸಿ ಮೈದಾನಕ್ಕಿಳಿದಿದ್ದರು. ಹೀಗಾಗಿ ಆಟದ ಮಧ್ಯೆಯೇ ಬೂಮ್ರಾ ಮೈದಾನದಿಂದ ಹೊರ ನಡೆದಿದ್ದಾರೆ.
ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಯಾವುದೇ ಪ್ರಾಯೋಜಕರ ಹಂಗಿಲ್ಲದೆ ಐಸಿಸಿ ನಡೆಸುತ್ತಿರುವ ಪಂದ್ಯ. ಹೀಗಾಗಿ ಈ ಪಂದ್ಯದ ವೇಳೆ ಆಯಾ ತಂಡಗಳು ಪ್ರಾಯೋಜಕತ್ವದ ಜೆರ್ಸಿಗೆ ಬದಲು ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗೇ ಸಿದ್ಧಪಡಿಸಲಾದ ವಿಶೇಷ ಜೆರ್ಸಿಯಲ್ಲಿ ಆಡಬೇಕು.
ಆದರೆ 5ನೇ ದಿನದಾಟದ ವೇಳೆ ಜೂಮ್ರಾ ಹಳೆಯ (ಬೈಜೂಸ್, ಎಂಪಿಎಲ್ ಲೋಗೋವಿದ್ದ) ಜೆರ್ಸಿ ಧರಿಸಿ ಮೈದಾನಕ್ಕಿಳಿದಿದ್ದರು. ಒಂದು ಓವರ್ ಕೂಡ ಎಸೆದಿದ್ದರು. ಆಟದ ಮಧ್ಯೆ ತನ್ನ ತಪ್ಪು ಅರಿವಾಗಿದ್ದರಿಂದ ಬೂಮ್ರಾ ಮೈದಾನದಿಂದ ಡ್ರೆಸ್ಸಿಂಗ್ ರೂಮ್‌ಗೆ ಹೋಗಿ ಜೆರ್ಸಿ ಬದಲಿಸಿಕೊಂಡು ಬಂದು ಆಟ ಮುಂದುವರೆಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications