WTC FInal: ಭಾರತೀಯ ಅಭಿಮಾನಿಗಳ ಕಾಲೆಳೆದ ಮೈಕಲ್ ವಾನ್

ಸೌಥಾಂಪ್ಟನ್: ಬುಧವಾರ (ಜೂನ್ 23) ಮುಕ್ತಾಯಗೊಂಡ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಸುಲಭ ಜಯ ಗಳಿಸಿದೆ. ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತ ಬಳಿಕ ಇಂಗ್ಲೆಂಡ್ ಮಾಜಿ ನಾಯಕ ಭಾರತೀಯ ಅಭಿಮಾನಿಗಳ ಕಾಲೆಳೆಯುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 217 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 170 ರನ್ ಗಳಿಸಿತ್ತು. ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 249 ರನ್ ಪೇರಿಸಿದ್ದರಿಂದ ಅಂತಿಮ ಇನ್ನಿಂಗ್ಸ್‌ನಲ್ಲಿ ಕಿವೀಸ್ 53 ಓವರ್‌ಗೆ 139 ರನ್ ಗಳಿಸಬೇಕಿತ್ತು. ಕಿವೀಸ್ ಈ ಗುರಿಯನ್ನು ಸುಲಭವಾಗಿ ತಲುಪಿ 8 ವಿಕೆಟ್‌ಗಳ ಗೆಲುವಾಚರಿಸಿತ್ತು.
ಪಂದ್ಯದ ಬಳಿಕ ಮೈಕಲ್ ವಾನ್ ಟ್ವೀಟ್ ಮಾಡಿದ್ದಾರೆ. 'ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ಗೆಲ್ಲುತ್ತದೆ ಎಂದು ಮೊದಲೇ ಊಹಿಸಿದ್ದಕ್ಕಾಗಿ ನಾನು ಭಾರತೀಯ ಸಾವಿರಾರು ಅಭಿಮಾನಿಗಳಲ್ಲಿ ಕೆಲ ಗಂಟೆಗಳು ಕ್ಷಮೆ ಯಾಚಿಸಬೇಕಾಗುತ್ತದೆ ಎಂದು ನನಗನ್ನಿಸುತ್ತಿದೆ' ಎಂದು ವಾನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಫೈನಲ್ ಪಂದ್ಯಕ್ಕೂ ಮುನ್ನ ಅನೇಕ ಕ್ರಿಕೆಟಿಗರು ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಅನ್ನೋದನ್ನು ಊಹಿಸಿದ್ದರು. ಕೆಲವರು ನ್ಯೂಜಿಲೆಂಡ್ ಗೆಲ್ಲಲಿದೆ ಎಂದಿದ್ದರೆ, ಇನ್ನು ಕೆಲವರು ಭಾರತ ಗೆಲ್ಲಲಿದೆ ಎಂದಿದ್ದರು. ವಾನ್, ಕೂಡ ಕಿವೀಸ್ ಗೆಲ್ಲಲಿದೆ ಎಂದಿದ್ದರು. ಅದರಂತೆ ಭಾರತ ಪಂದ್ಯದಲ್ಲಿ ಸೋತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications