WTC Final: 'ವೇಗಿ ಮೊಹಮ್ಮದ್ ಸಿರಾಜ್‌ಗೆ ಆಡುವ ತಂಡದಲ್ಲಿ ಸ್ಥಾನ ಏಕಿಲ್ಲ?'

ಸೌತಾಂಪ್ಟನ್: ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ಜೂನ್ 18-22ರ ವರೆಗೆ ಸೌತಾಂಪ್ಟನ್‌ನ ಏಜಸ್ ಬೌಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. 3 PMಗೆ ಪಂದ್ಯ ಆರಂಭಗೊಳ್ಳಲಿದೆ. ಆದರೆ ಭಾರತ ಪ್ಲೇಯಿಂಗ್ XIನಲ್ಲಿ ಮೊಹಮ್ಮದ್ ಸಿರಾಜ್‌ಗೆ ಸ್ಥಾನ ಲಭಿಸಿಲ್ಲ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಲ್ಪಡುತ್ತಿದೆ.
ಭಾರತೀಯ ಪ್ಲೇಯಿಂಗ್ XIನಲ್ಲಿ ವೇಗಿಗಳ ಜಾಗದಲ್ಲಿ ಅನುಭವಿ ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಆದರೆ ಯುವ ವೇಗಿ ಮೊಹಮ್ಮದ್ ಸಿರಾಜ್‌ಗೆ ಸ್ಥಾನ ಲಭಿಸಿಲ್ಲ. ಹೀಗಾಗಿ ಟ್ವಿಟರ್‌ನಲ್ಲಿ ಬಗೆ ಬಗೆಯ ಟ್ವೀಟ್‌ಗಳು ಈ ಸಂಬಂಧ ಓಡಾಡುತ್ತಿದೆ.
ಸುದ್ದಿಯಾಗೋದಕ್ಕೆ ಕಾರಣ
ಮೊಹಮ್ಮದ್ ಸಿರಾಜ್ ಪ್ಲೇಯಿಂಗ್ XIನಲ್ಲಿ ಆಡಿಸದಿರುವುದು ಸುದ್ದಿಯಾಗುವುದಕ್ಕೆ ಕಾರಣವಿದೆ. ಅದೇನೆಂದರೆ ಈ ಮೊದಲು ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ಸಿರಾಜ್ ಅವರನ್ನು ಆಡಿಸುವ ಬಗ್ಗೆ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.
ಕೊಹ್ಲಿ-ಶಾಸ್ತ್ರಿ ಆಡಿಯೋ ವೈರಲ್
'WTC ಫೈನಲ್‌ನಲ್ಲಿ ಸಿರಾಜ್ ಮೊದಲಿನಿಂದಲೂ ಆಡಸಬೇಕು. ಯಾಕೆಂದರೆ ಅವರಲ್ಲಿ ಲೆಫ್ಟ್ ಹ್ಯಾಂಡರ್ ಇದ್ದಾರೆ. ಆಗ ಕಿವೀಸ್ ಬ್ಯಾಟ್ಸ್‌ಮನ್‌ಗೆ ಕಷ್ಟವಾಗಲಿದೆ,' ಎಂದು ಆಡಿಯೋ ಒಂದರಲ್ಲಿ ಕೊಹ್ಲಿ-ಶಾಸ್ತ್ರಿ ಮಾತನಾಡಿದ್ದರು. ಅದಲ್ಲದೆ ಸಿರಾಜ್ ಕೂಡ ತನಗೆ WTC ಫೈನಲ್‌ನಲ್ಲಿ ಆಡೋ ಆಸೆಯಿದೆ ಎಂದು ಹೇಳಿಕೊಂಡಿದ್ದರು. ಆದರೆ ಸಿರಾಜ್‌ಗೆ ಅವಕಾಶವೇ ಸಿಗದಿರುವುದು ದುರದೃಷ್ಟಕರ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
WTC ಫೈನಲ್‌ಗೆ ಭಾರತ XI
ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications