For Quick Alerts
ALLOW NOTIFICATIONS  
For Daily Alerts
 

WTC 2021-23: ಭಾರತ ತಂಡದ ಪರ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು; ಕೊಹ್ಲಿಗೆ ಅಗ್ರಸ್ಥಾನ

ಭಾನುವಾರ, ಜೂನ್ 11ರಂದು ಲಂಡನ್‌ನ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 209 ರನ್‌ಗಳಿಂದ ಹೀನಾಯ ಸೋಲು ಕಂಡಿತು. ಈ ಮೂಲಕ ಸತತ ಎರಡನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಮುಗ್ಗರಿಸಿ ಐಸಿಸಿ ಪ್ರಶಸ್ತಿ ಕನಸು ನುಚ್ಚುನೂರು ಆಯಿತು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) 2021-23ರ ಋತುವಿನಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 17 ಪಂದ್ಯಗಳಲ್ಲಿ 32.13 ಸರಾಸರಿಯೊಂದಿಗೆ 932 ರನ್‌ ಬಾರಿಸಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದರಲ್ಲಿ 3 ಅರ್ಧಶತಕ ಮತ್ತು 1 ಶತಕ ಸೇರಿದೆ.

WTC Final: Most Runs For Team India In WTC 2021-23; Virat Kohli In Top Spot

ಇತ್ತೀಚಿಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ 14 ಮತ್ತು 49 ರನ್‌ ಬಾರಿಸಿದ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಅವರಿಗಿಂತ 4 ರನ್‌ ಹೆಚ್ಚು ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುನ್ನ ಚೇತೇಶ್ವರ ಪೂಜಾರ ಅವರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ವಿರಾಟ್ ಕೊಹ್ಲಿಗಿಂತ 18 ರನ್‌ಗಳ ಮುಂದಿದ್ದರು. ಫೈನಲ್ ಪಂದ್ಯದದಲ್ಲಿ ಚೇತೇಶ್ವರ ಪೂಜಾರಗಿಂತ ಹೆಚ್ಚು ರನ್ ಗಳಿಸಿದ ಕಾರಣ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದರು.

ಇನ್ನು ಎರಡನೇ ಸ್ಥಾನದಲ್ಲಿ ಚೇತೇಶ್ವರ ಪೂಜಾರ ಅವರಿದ್ದು, 17 ಪಂದ್ಯಗಳಿಂದ 32 ಸರಾಸರಿಯಲ್ಲಿ 928 ರನ್ ಗಳಿಸಿದ್ದಾರೆ. ಇದರಲ್ಲಿ 6 ಅರ್ಧಶತಕ ಮತ್ತು 1 ಶತಕ ಸೇರಿದೆ.

WTC Final: Most Runs For Team India In WTC 2021-23; Virat Kohli In Top Spot

ಇದೇ ವೇಳೆ ಕಳೆದ ಆರು ತಿಂಗಳು ಕ್ರಿಕೆಟ್ ಆಡದಿದ್ದರೂ, ಮೂರನೇ ಸ್ಥಾನದಲ್ಲಿ ರಿಷಭ್ ಪಂತ್ ಅವರಿದ್ದಾರೆ. 12 ಪಂದ್ಯಗಳಿಂದ 43.40 ಸರಾಸರಿಯಲ್ಲಿ 868 ರನ್ ಗಳಿಸಿದ್ದಾರೆ. ಇದರಲ್ಲಿ 5 ಅರ್ಧಶತಕ ಮತ್ತು 2 ಶತಕಗಳು ಒಳಗೊಂಡಿವೆ.

ನಾಯಕ ರೋಹಿತ್ ಶರ್ಮಾ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23ರ ಚಕ್ರದಲ್ಲಿ ಭಾರತ ಪರ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಅವರು 11 ಪಂದ್ಯಗಳಿಂದ 42.11 ಸರಾಸರಿಯಲ್ಲಿ 758 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 2 ಅರ್ಧಶತಕಗಳು ಒಳಗೊಂಡಿವೆ.

ಇನ್ನು 5ನೇ ಸ್ಥಾನದಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಇದ್ದಾರೆ. 13 ಪಂದ್ಯಗಳಿಂದ 36.05 ಸರಾಸರಿಯಲ್ಲಿ 721 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕ ಮತ್ತು 2 ಶತಕಗಳು ಸೇರಿವೆ.

2021-23ರ ಅವಧಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಾದಿಯಲ್ಲಿ ಶ್ರೇಯಸ್ ಅಯ್ಯರ್ ಅವರು ಭಾರತದ ಪರ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ. 44.60ರ ಸರಾಸರಿಯಲ್ಲಿ 666 ರನ್ ಕಲೆ ಹಾಕಿದ್ದಾರೆ.

ಕುತೂಹಲಕಾರಿ ಅಂಶವೆಂದರೆ, ಅತಿ ಹೆಚ್ಚು ಸರಾಸರಿ ಹೊಂದಿರುವ ಭಾರತೀಯ ಬ್ಯಾಟರ್ ಆಗಿ ಆಲ್‌ರೌಂಡರ್ ಅಕ್ಷರ್ ಪಟೇಲ್ ಇದ್ದಾರೆ. ಅಕ್ಷರ್ ಪಟೇಲ್ ಆಡಿದ ಒಂಬತ್ತು ಪಂದ್ಯಗಳಲ್ಲಿ 458 ರನ್‌ಗಳಿಂದ 45.80 ಸರಾಸರಿ ಹೊಂದಿದ್ದಾರೆ.

Story first published: Tuesday, June 13, 2023, 17:25 [IST]
Other articles published on Jun 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+