WTC Final: ಈ ತಂಡವೇ ಚಾಂಪಿಯನ್ ಆಗಲಿದೆ; ಬಲವಾದ ಕಾರಣ ನೀಡಿದ ಇಂಗ್ಲೆಂಡ್ ದಿಗ್ಗಜ
ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಅಭಿಮಾನಿಗಳ ಕಾತುರತೆಯನ್ನು ಹೆಚ್ಚಿಸಿದೆ. ಎರಡು ಬಲಿಷ್ಠ ತಂಡಗಳ ಈ ಸೆಣೆಸಾಟದಲ್ಲಿ ಯಾವ ತಂಡ ಗೆದ್ದು ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಕ್ರಿಕೆಟ್ ಪಂಡಿತರಲ್ಲಿಯೂ ಇದೆ. ಇಂಗ್ಲೆಂಡ್‌ನ ಮಾಜಿ ನಾಯಕ ಹಾಗೂ ಕಾಮೆಂಟೇಟರ್ ನಾಸಿರ್ ಹುಸೇನ್ ಕೂಡ ಈ ಹಿನ್ನೆಲೆಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕಾಗಿ ಬೌಲಿಂಗ್ ವಿಭಾಗದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರೆ ಆಸ್ಟ್ರೇಲಿಯಾವನ್ನು ಭಾರತ ಮಣಿಸಬಹುದು ಎಂದಿದ್ದಾರೆ ನಾಸಿರ್ ಹುಸೇನ್. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದ ಆಯ್ಕೆಯ ಬಗ್ಗೆ ಕೆಲ ಗೊಂದಲಗಳು ತಂಡದಲ್ಲಿದ್ದು ಯಾರಿಗೆ ಆಡುವ ಬಳಗದಲ್ಲಿ ಅವಕಾಶ ನೀಡಬೇಕು ಎಂಬ ಬಗ್ಗೆ ಪ್ರಶ್ನೆಗಳಿವೆ.

"ನನ್ನ ಪ್ರಕಾರ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಿದೆ. ಅವರು ಈಗಾಗಲೇ ಸಾಬೀತುಪಡಿಸಿರುವಂತೆ ಯಾವುದೇ ಪರಿಸ್ಥಿಯಲ್ಲಿಯೂ ಅವರು ಗೆಲ್ಲುವ ಸಾಮರ್ಥ್ಯವನ್ನು ಈಗಾಗಲೇ ಪ್ರದರ್ಶಿಸಿದ್ದಾರೆ. ಹಲಮಾನ ಉತ್ತಮವಾಗಿದ್ದರೆ ಅದು ಅವರ ತಂಡದ ಸಮತೋಲನದ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರಲಿದೆ. ಓವಲ್ ಮೈದಾನದಲ್ಲಿ ಸೂರ್ಯನ ಬೆಳಕು ಉತ್ತಮವಾಗಿದ್ದಲ್ಲಿ ಭಾರತ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡುವುದು ಬಹಳ ಉತ್ತಮ. ಇಬ್ಬರು ಪ್ರಮುಖ ವೇಗಿಗಳು ಹಾಗೂ ಶಾರ್ದೂಲ್ ಠಾಕೂರ್ ಮೂರನೇ ವೇಗಿಯಾಗಿ ಆಡುವ ಬಳಗದಲ್ಲಿ ಸ್ಥಾನ ಪಡೆಯಬೇಕು" ಎಂದಿದ್ದಾರೆ ನಾಸಿರ್ ಹುಸೇನ್.
"ಕಳೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ನೋಡಿದರೆ ಭಾರತ ವಾತಾವರಣವನ್ನು ತಪ್ಪಾಗಿ ಅರ್ಥಮಾಡಿಕೊಂಡಿತ್ತು. ಐದು ದಿನಗಳು ಕೂಡ ವಾತಾವಣ ಮೋಡಕವಿದಂತಿತ್ತು. ನ್ಯೂಜಿಲೆಂಡ್ ಯಾವುದೇ ಪ್ರಮುಖ ಸ್ಪಿನ್ನರ್ ಇಲ್ಲದೆ ಆಡಿದ್ದರೆ ಭಾರತ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿತ್ತು. ವೇಗ ಹಾಗೂ ಸ್ಪಿಂಗ್ ಪರಿಣಾಮಕಾರಿಯಾಗಿದ್ದ ಕಾರಣ ಭಾರತದ ವಿರುದ್ಧ ನ್ಯೂಜಿಲೆಂಡ್ ಮೇಲುಗೈ ಸಾಧಿಸಿತ್ತು" ಎಂದಿದ್ದಾರೆ ಇಂಗ್ಲೆಂಡ್ ಮಾಜಿ ನಾಯಕ.
ಮುಂದಿವರಿದು ಮಾತನಾಡಿದ ಅವರು ಭಾರತ ಓವಲ್ ಮೈದಾನದಲ್ಲಿ ನೀಡಿದ ಪ್ರದರ್ಶನವನ್ನು ಉಲ್ಲೇಖಿಸಿದ್ದಾರೆ. "ಓವಲ್ ಅಂಗಳದಲಲ್ಇ ಭಾರತ ಕೆಲ ಅದ್ಭುತ ಪ್ರದರ್ಶನಗಳನ್ನು ನೀಡಿದೆ. ಕೊನೆಯ ಬಾರಿ ಇಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಆಡಿದ್ದಾಗ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಆ ಪಂದ್ಯ ಬಹಳ ಅದ್ಭುತವಾಗುತ್ತು. ಹಾಗಾಗಿ ಇದು ಬಹಳ ಸೂಕ್ತವಾದ ತಾಣ ಎನಿಸುತ್ತದೆ" ಎಂದಿದ್ದಾರೆ ನಾಸಿರ್ ಹುಸೇನ್.
ಟೀಮ್ ಇಂಡಿಯಾ ಸಂಪೂರ್ಣ ತಂಡ: ರೋಹಿತ್ ಶರ್ಮಾ(ನಾಯಕ), ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಕೆಎಲ್ ರಾಹುಲ್, ಕೆಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಯ್‌ದೇವ್ ಉನಾದ್ಕಟ್
ಆಸ್ಟ್ರೇಲಿಯಾ ಸಂಪೂರ್ಣ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications