Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final: ಅಂತಿಮ ಟೆಸ್ಟ್‌ ಆಡುತ್ತಿರುವ ವಾಟ್ಲಿಂಗ್‌ಗೆ ಶುಭ ಕೋರಿದ ಕೊಹ್ಲಿ

WTC Final:On the final day of Test cricket for BJ Watling, Virat Kohli wishing him

ಸೌಥಾಂಪ್ಟನ್, ಜೂನ್ 23: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೀಸಲು ದಿನದಲ್ಲಿ ಕಾದಾಟವನ್ನು ನಡೆಸುತ್ತಿದೆ. ಅಂತಿಮ ದಿನದಾಟವನ್ನು ಆರಂಭಿಸುವ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡೆ ಪ್ರೇಕ್ಷಕರ ಹೃದಯ ಗೆದ್ದಿದೆ.

ನ್ಯೂಜಿಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬಿಜೆ ವಾಟ್ಲಿಂಗ್ ವಿದಾಯ ಪಂದ್ಯವನ್ನು ಆಡುತ್ತಿದ್ದಾರೆ. ಈ ವಿದಾಯ ಪಂದ್ಯದ ಅಂತಿಮ ದಿನದಾಟವನ್ನು ಆರಂಭಿಸುವ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕೀಪರ್ ವಾಟ್ಲಿಂಗ್ ಬಳಿಗೆ ತೆರಳಿ ಕೈಕುಲುಕುವ ಮೂಲಕ ಶುಭಹಾರೈಸಿದ್ದಾರೆ.

ಕೇನ್ ವಿಲಿಯಮ್ಸನ್ ನೇತೃತ್ವ ನ್ಯೂಜಿಲೆಂಡ್ ತಂಡದ ಪ್ರಮುಖ ಆಧಾರ ಸ್ಥಂಭವಾಗಿ ಸುದೀರ್ಘ ಕಾಲದಿಂದ ತಂಡದಲ್ಲಿದ್ದಾರೆ. 35ರ ಹರೆಯದ ವಾಟ್ಲಿಂಗ್ ಈವರೆಗೆ 73 ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದು 3773 ರನ್‌ಗಳಿಸಿದ್ದಾರೆ. 8 ಶತಕಗಳನ್ನು ತಮ್ಮ ತಂಡದ ಪರವಾಗಿ ಸಿಡಿಸಿದ್ದಾರೆ. 28 ಏಕದಿನ ಹಾಗೂ 5 ಟಿ20 ಪಂದ್ಯಗಳಲ್ಲಿಯೂ ಆಡಿರುವ ಅವರು ಕ್ರಮವಾಗಿ 573 ಹಾಗೂ 38 ರನ್‌ ಬಾರಿಸಿದ್ದಾರೆ.

ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಕಠಿಣ ಸಂದರ್ಭದಲ್ಲಿ ತಂಡಕ್ಕೆ ಸಾಕಷ್ಟು ಸಂದರ್ಭದಲ್ಲಿ ನೆರವಾಗಿದ್ದಾರೆ. ಸದ್ಯ ನಿವೃತ್ತಿಯನ್ನು ಘೋಷಿಸಿ ಕುಟುಂಬದೊಂದಿಗೆ ಕಾಲ ಕಳೆಯುವ ನಿರ್ಧಾರವನ್ನು ಮಾಡಿದ್ದಾರೆ ನ್ಯೂಜಿಲೆಂಡ್‌ನ ಈ ಅನುಭವಿ ವಿಕೆಟ್ ಕೀಪರ್. ಜೊತೆಗೆ ನಿವೃತ್ತಿಯ ಬಳಿಕ ಕೋಚಿಂಗ್ ವೃತ್ತಿಗಿಳಿಯುವ ಯೋಜನೆಯನ್ನು ಕೂಡ ಹಾಕಿಕೊಂಡಿದ್ದಾರೆ.

ವಾಟ್ಲಿಂಗ್ ದ್ವಿಶತಕವನ್ನು ಸಿಡಿಸಿದ 9ನೇ ವಿಕೆಟ್ ಕೀಪರ್ ಎನಿಸಿದ್ದು ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. 2019ರಲ್ಲಿ ಬೇ ಓವಲ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಎರಡು ಬಾರಿ 350ಕ್ಕೂ ಅಧಿಕ ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ.

Story first published: Wednesday, June 23, 2021, 17:16 [IST]
Other articles published on Jun 23, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+