WTC Final: ನ್ಯೂಜಿಲೆಂಡ್ ಗೆಲುವಿನ ಸಂಭ್ರಮವನ್ನು ನೋಡುವುದು ನಮಗೆ ಕಠಿಣವಾಗಿತ್ತು: ಆರ್ ಅಶ್ವಿನ್

ವಿಶ್ವ ಟೆಸ್ಟ್ ಚಾಂಪಿಯನ್‌ಶೀಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮಣಿಸಿದ ನ್ಯೂಜಿಲೆಂಡ್ ತಂಡ ಪ್ರಥಮ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಚಾಂಪಿಯನ್ ತಂಡ ಎನಿಸಿತ್ತು. ಸುದೀರ್ಘ ಕಾಲದ ಬಳಿಕ ಐಸಿಸಿ ಟ್ರೋಫಿಯನ್ನು ಎತ್ತಿ ಹಿಡಿದ ಕಾರಣಕ್ಕೆ ಸಹಜವಾಗಿಯೇ ನ್ಯೂಜಿಲೆಂಡ್ ತಂಡದ ಸಂಭ್ರಮ ಮುಗಿಲು ಮುಟ್ಟಿತ್ತು. ಹೀಗಾಗಿ ಮಧ್ಯ ರಾತ್ರಿಯವರೆಗೂ ನ್ಯೂಜಿಲೆಂಡ್ ತಂಡದ ಆಟಗಾರರ ಸಂಭ್ರಮಾಚರಣೆ ಮುಂದುವರಿದಿತ್ತು. ಈ ಬಗ್ಗೆ ಟೀಮ್ ಇಂಡಿಯಾ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಮಾತನಾಡಿದ್ದಾರೆ. ನ್ಯೂಜಿಲೆಂಡ್ ಆಟಗಾರರ ಸಂಭ್ರಮ ತಮಗೆಷ್ಟು ಕಠಿಣವಾಗಿತ್ತು ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆರ್ ಅಶ್ವಿನ್ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಣಾಹಣಿಯ ಬಗ್ಗೆ ನೆನಪಿಸಿಕೊಂಡಿದ್ದಾರೆ. ಪಂದ್ಯ ನಡೆದ ಕ್ರೀಡಾಂಗಣದ ಒಂದು ಭಾಗದಲ್ಲಿ ನ್ಯೂಜಿಲೆಂಡ್ ಆಟಗಾರರು ರೂಮ್‌ನಲ್ಲಿದ್ದರು. ಅವರ ಗೆಲುವಿನ ಸಂಭ್ರಮ ಮಧ್ಯರಾತ್ರಿಯವರೆಗೂ ಮುಂದುವರಿದಿತ್ತು ಎಂದು ಆರ್ ಅಶ್ವಿನ್ ವಿವರಿಸಿದ್ದಾರೆ.
"ಪಂದ್ಯದ ಮುಕ್ತಾಯದ ಬಳಿಕ ನ್ಯೂಜಿಲೆಂಡ್ ಆಟಗಾರರು ಟ್ರೋಫಿಯ ಜೊತೆಗೆ ಸಂಭ್ರಮಾಚರಣೆಯನ್ನು ಮಾಡುತ್ತಿದ್ದರು. ಈ ಸಂದರ್ಭದಲಲ್ಇ ಅವರ ಕೋಣೆಯಲ್ಲಿ ಡ್ರಿಂಕ್ಸ್‌ಗಳು ಕೂಡ ಇದ್ದವು. ಅವುಗಳನ್ನೆಲ್ಲಾ ನೋಡುವುದು ತುಂಬಾ ಕಷ್ಟವಾಉತ್ತಿತ್ತು" ಎಂದು ಆರ್ ಅಶ್ವಿನ್ ಹೇಳಿದ್ದಾರೆ.
"12 ಗಂಟೆಯ ವರೆಗೂ ಅವರು ತಮ್ಮ ಕೋಣೆಯಲ್ಲಿ ಸಂಭ್ರಮಾಚರಣೆಯನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಅವರು ಪಿಚ್‌ನ ಬಳಿಗೂ ಅವರು ತೆರಳಿದ್ದರು. ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದರೆ ಯುದ್ಧದ ಕೂಗಿನಂತೆ ಭಾಸವಾಗುತ್ತಿತ್ತು. ನಮ್ಮಿಂದ ಅದನ್ನು ಸಾಧಿಸಲು ಸಾಧ್ಯವಾಗದ್ದಕ್ಕೆ ತುಂಬಾ ಬೇಸರವಾಯಿತು" ಎಂದು ಆರ್ ಅಶ್ವಿನ್ ಹೇಳಿದ್ದಾರೆ.
ಇನ್ನು ಸುದೀರ್ಘ ಕಾಲದಿಂದ ಬಯೋಬಬಲ್‌ನಲ್ಲಿರುವ ಟೀಮ್ ಇಂಡಿಯಾ ಆಟಗಾರರು ಈಗ ಬಯೋಬಬಲ್‌ನಿಂದ ವಿರಾಮವನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆಯೂ ಆರ್ ಆಶ್ವಿನ್ ಮಾತನಾಡಿದ್ದು ಸಂತಸವನ್ನು ವ್ಯಕ್ತಪಡಿಸಿದ್ದಾರೆ. "ನಾವು ಸುದೀರ್ಘ ಕಾಲದಿಂದ ಬಯೋಬಬಲ್‌ನಲ್ಲಿ ಇದ್ದೇವೆ. ಸುದೀರ್ಘ ಸಮಯದ ನಂತರ ನಾವು ಹೊರಗಡೆ ಬಂದು ಶುಭ್ರ ಗಾಳಿಯನ್ನು ಸೇವಿಸುತ್ತಿದ್ದೇವೆ. ನಾನೀಗ ಕಾರೊಂದನ್ನು ಬಾಡಿಗೆ ಪಡೆದಿದ್ದು ದೇಶಾದ್ಯಂತ ಸುತ್ತಾಡುತ್ತಿದ್ದೇನೆ" ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications