ಮೊದಲು ರಹಾನೆ, ನಂತರ ಶಾರ್ದೂಲ್: ಆಸಿಸ್ ನಾಯಕನ ನೋಬಾಲ್‌ನಿಂದ ಭಾರತಕ್ಕೆ 2 ಅಮೂಲ್ಯ ಜೀವದಾನ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟದಲ್ಲಿದ್ದರೂ ಒಂದು ಹಂತಕ್ಕೆ ಚೇತರಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾ ಪರವಾಗಿ ಅಜಿಂಕ್ಯಾ ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಜೊತೆಯಾಟ ಭಾರತಕ್ಕೆ ಚೇತರಿಕೆ ನೀಡಿದೆ. ಅಗ್ರ ಕ್ರಮಾಂಕದ ಆಟಗಾರರ ವೈಫಲ್ಯದ ನಂತರ ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ತಂಡದ ಚೇತರಿಕೆಯ ಜವಾಬ್ಧಾರಿ ವಹಿಸಿಕೊಂಡಿದ್ದು ಅವರಿಗೆ ಶಾರ್ದೂಲ್ ಠಾಕೂರ್ ಉತ್ತಮವಾಗಿ ಸಾಥ್ ನೀಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ಅಮೂಲ್ಯ ಜೀವದಾನ ದೊರೆಯಿತು. ಅದು ಕೂಡ ನೋ ಬಾಲ್ ರೂಪದಲ್ಲಿ. ಈ ಎರಡು ಜೋವದಾನ ಕೂಡ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿಯೇ ಎಂಬುದು ಗಮನಾರ್ಹ ಅಂಶ. ಮೊದಲಿಗೆ ಅಜಿಂಕ್ಯಾ ರಹಾನೆ ಅವರನ್ನು ಎಲ್‌ಬಿಡ್ಲ್ಯೂ ಬಲೆಗೆ ಬೀಳಿಸಿ ವಿಕೆಟ್ ಪಡೆದ ಸಂಭ್ರಮದಲ್ಲಿದ್ದರು ಪ್ಯಾಟ್ ಕಮ್ಮಿನ್ಸ್. ನಂತರ ಆ ಎಸೆತ ನೋಬಾಲ್ ಎಂದು ಅಂಪಾಯರ್ ಘೋಷಿಸಿದರು. ಈ ಜೀವದಾನದ ಲಾಭವನ್ನು ಉತ್ತಮವಾಗಿ ಬಳಸಿಕೊಂಡ ಅಜಿಂಕ್ಯಾ ರಹಾನೆ ತಂಡವನ್ನು ಚೇತರಿಕೆಯತ್ತ ಮುನ್ನಡೆಸಿದರು.

ಇನ್ನು ಮೂರನೇ ದಿನದಾಟದಲ್ಲಿ ಶಾರ್ದೂಲ್ ಠಾಕೂರ್ ಕೂಡ ಇದೇ ರೀತಿಯ ಜೀವದಾನವನ್ನು ಪಡೆದುಕೊಂಡರು. ಅಜಿಂಕ್ಯಾ ರಹಾನೆ ಜೊತೆಗೆ ಉತ್ತಮ ಜೊತೆಯಾಟದಲ್ಲಿ ಭಾಗಿಯಾದ ಶಾರ್ದೂಲ್ ಠಾಕೂರ್ ತಂಡದ ಪರವಾಗಿ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಈ ಜೋಡಿಯನ್ನು ಬೇರ್ಪಡಿಸಲು ಆಸಿಸ್ ಸರ್ವ ಪ್ರಯತ್ನ ನಡೆಸಿತು. ಮೊದಲ ಸೆಶನ್‌ನಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್ ಶಾರ್ದೂಲ್ ಠಾಕೂರ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು. ನಂತರ ಈ ಎಸೆತ ಕೂಡ ನೋಬಾಲ್ ಆಗಿದ್ದ ಕಾರಣ ಶಾರ್ದೂಲ್ ಮತ್ತೆ ಬ್ಯಾಟಿಂಗ್ ಮುಂದುವರಿಸುವ ಅವಕಾಶ ಪಡೆದುಕೊಂಡರು.
ಇನ್ನು ಮೊದಲ ಸೆಶನ್‌ನಲ್ಲಿ ಟೀಮ್ ಇಂಡಿಯಾ ಕೇವಲ ಒಂದು ವಿಕೆಟ್ ಮಾತ್ರವೇ ಕಳೆದುಕೊಂಡಿತು. ಆದರೆ ಎರಡನೇ ಸೆಶನ್‌ನ ಆರಂಭದಲ್ಲಿಯೇ ಟೀಮ್ ಇಂಡಿಯಾದ ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಕ್ಯಾಮರೂನ್ ಗ್ರೀನ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಈ ಮೂಲಕ 7ನೇ ವಿಕೆಟ್‌ಗೆ 109 ರನ್‌ಗಳ ಜೊತೆಯಾಟ ಮುರಿದುಬಿತ್ತು.

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಜೋಶ್ ಇಂಗ್ಲಿಸ್, ಮೈಕೆಲ್ ನೆಸರ್, ಟಾಡ್ ಮರ್ಫಿ, ಮಾರ್ಕಸ್ ಹ್ಯಾರಿಸ್
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ಅಕ್ಷರ್ ಪಟೇಲ್, ಜಯದೇವ್ ಉನದ್ಕತ್, ರವಿಚಂದ್ರನ್ ಅಶ್ವಿನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications