ನ್ಯೂಜಿಲೆಂಡ್‌ನ ಈ ಬೌಲರ್‌ಗೆ ಕೊಹ್ಲಿ ಹೆದರುತ್ತಾರೆ; ರಹಸ್ಯ ಬಿಚ್ಚಿಟ್ಟ ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್!

ಜೂನ್ 18-22ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದ್ದು ಟೀಮ್ ಇಂಡಿಯಾ ತಂಡ ಈಗಾಗಲೇ ಸೌತಂಪ್ಟನ್ ತಲುಪಿ ಕ್ವಾರಂಟೈನ್ ನಿಯಮವನ್ನು ಅನುಸರಿಸುತ್ತಿದ್ದು, ಈ ಹಿಂದೆಯೇ ಇಂಗ್ಲೆಂಡ್ ತಲುಪಿರುವ ನ್ಯೂಜಿಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ.
ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‌ನಲ್ಲಿ ಭಾರತದ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಇರ್ಫಾನ್ ಪಠಾಣ್!
ಇನ್ನು ಜೂನ್ 18ರಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಸದ್ಯ ಕ್ರಿಕೆಟ್ ಜಗತ್ತಿನ ಎರಡು ದೈತ್ಯ ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ದೊಡ್ಡ ಟ್ರೋಫಿಗಾಗಿ ಸೆಣಸಾಡಲಿದ್ದು ಈ ಪಂದ್ಯದ ಕುರಿತು ಕ್ರಿಕೆಟ್ ಪಂಡಿತರು, ಮಾಜಿ ಕ್ರಿಕೆಟಿಗರು ಹಾಗೂ ಕ್ರೀಡಾಭಿಮಾನಿಗಳು ಸಾಕಷ್ಟು ಚರ್ಚೆಗಳನ್ನು ನಡೆಸುತ್ತಿದ್ದಾರೆ.
ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಭಾರತ ಗೆದ್ದು ಬೀಗಿದ್ದ ಟೆಸ್ಟ್ ಸರಣಿಯೇ ಅತ್ಯುತ್ತಮ ಎಂದು ಘೋಷಿಸಿದ ಐಸಿಸಿ
ಇನ್ನು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ನ್ಯೂಜಿಲೆಂಡ್ ತಂಡದ ವಿರುದ್ಧ ವಿರಾಟ್ ಕೊಹ್ಲಿಗಿರುವ ನ್ಯೂನ್ಯತೆಯನ್ನು ಬಿಚ್ಚಿಟ್ಟಿದ್ದಾರೆ. ಹೌದು ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ತಂಡದ ಓರ್ವ ಬೌಲರ್‌ನ್ನು ಎದುರಿಸಲು ತುಂಬಾ ಪರದಾಡುತ್ತಾರೆ ಎಂಬ ವಿಷಯವನ್ನು ರಾಜ್‌ಕುಮಾರ್ ಶರ್ಮಾ ಈ ಕೆಳಕಂಡಂತೆ ತೆರೆದಿಟ್ಟಿದ್ದಾರೆ..

ಟಿಮ್ ಸೌಥಿ ವಿರಾಟ್ ಕೊಹ್ಲಿಯನ್ನು ಕಾಡುವ ಆ ಬೌಲರ್!
ವಿರಾಟ್ ಕೊಹ್ಲಿಯ ನ್ಯೂನ್ಯತೆಯನ್ನು ಬಿಚ್ಚಿಟ್ಟಿರುವ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ತಂಡದ ಪ್ರಸಿದ್ಧ ಬೌಲರ್ ಟಿಮ್ ಸೌಥಿ ಎಸೆತವನ್ನು ಎದುರಿಸಲಾರದೆ ಪರದಾಡುತ್ತಾರೆ ಎಂದಿದ್ದಾರೆ.

ಈ ಸಮಸ್ಯೆ ಈಗಿನದ್ದಲ್ಲ, ಅಂಡರ್ 19ನಿಂದಲೂ ಇದೆ
ಟಿಮ್ ಸೌಥಿ ಎಸೆತವನ್ನು ಎದುರಿಸಲು ಪರದಾಡುವ ವಿರಾಟ್ ಕೊಹ್ಲಿಯ ಸಮಸ್ಯೆ ಈಗಿನದ್ದಲ್ಲ, ಅಂಡರ್ 19 ಸಮಯದಿಂದಲೂ ಸಹ ಟಿಮ್ ಸೌಥಿ ಎಸೆತವನ್ನು ಸಮರ್ಥವಾಗಿ ಎದುರಿಸಲು ವಿರಾಟ್ ಕೊಹ್ಲಿ ವಿಫಲರಾಗುತ್ತಿದ್ದಾರೆ ಎಂದು ರಾಜ್‌ಕುಮಾರ್ ಶರ್ಮಾ ಹೇಳಿಕೊಂಡಿದ್ದಾರೆ.

ಸೌಥಿಗೆ ವಿರಾಟ್ ಕೊಹ್ಲಿ ಹತ್ತು ಬಾರಿ ವಿಕೆಟ್ ಒಪ್ಪಿಸಿದ್ದಾರೆ
ಇನ್ನೂ ಮುಂದುವರೆದು ಮಾತನಾಡಿರುವ ರಾಜ್‌ಕುಮಾರ್ ಶರ್ಮಾ ವಿರಾಟ್ ಕೊಹ್ಲಿ ಎಷ್ಟರಮಟ್ಟಿಗೆ ಸೌಥಿ ಎಸೆತವನ್ನು ಎದುರಿಸಲು ವಿಫಲರಾಗಿದ್ದಾರೆ ಎಂದರೆ ಇದುವರೆಗೂ ಹತ್ತು ಬಾರಿ ವಿಕೆಟ್ ಒಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications