Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final: ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ರಿಷಭ್ ಪಂತ್!

WTC Final: Rishabh Pant scored century on intra squad practice match

ಲಂಡನ್: ಇಂಗ್ಲೆಂಡ್‌ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಮುಂಬರಲಿರುವ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಕಡ್ಡಾಯ ಕ್ವಾರಂಟೈನ್ ಮುಗಿಸಿರುವ ಭಾರತೀಯ ತಂಡ ಸದ್ಯ ಅಭ್ಯಾಸ ಪಂದ್ಯ ಆಡುತ್ತಿದೆ. ಭಾರತ ತಂಡದ ಮಧ್ಯೆಯೇ 4 ದಿನಗಳ ಅಭ್ಯಾಸ ಪಂದ್ಯ ನಡೆಯುತ್ತಿದ್ದು, ಎರಡನೇ ದಿನದಾಟದಲ್ಲಿ ಯುವ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಅಜೇಯ, ಸ್ಫೋಟಕ ಶತಕ ಬಾರಿಸಿದ್ದಾರೆ.

ಭಾರತೀಯ ಇಂಟ್ರಾ ಸ್ಕ್ವಾಡ್ ಪಂದ್ಯದ ಬಗ್ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ರಿಷಭ್ ಪಂತ್, ಶುಬ್ಮನ್ ಗಿಲ್ ಮತ್ತು ಇಶಾಂತ್ ಶರ್ಮಾ ಉತ್ತಮ ಪ್ರದರ್ಶನ ನೀಡಿರುವ ಬಗ್ಗೆ ಬಿಸಿಸಿಐ ಟ್ವಿಟರ್ ಪೋಸ್ಟ್ ಹಾಕಿಕೊಂಡಿದೆ.

ರಿಷಭ್ ಪಂತ್ ಸ್ಫೋಟಕ ಶತಕ

ರಿಷಭ್ ಪಂತ್ ಸ್ಫೋಟಕ ಶತಕ

ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಜೊತೆ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್‌ ಆಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ ರಿಷಭ್ ಪಂತ್, ಅಂತರ್ ತಂಡದ ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದಾರೆ. ಪಂತ್ ಕೇವಲ 94 ಎಸೆತಗಳಲ್ಲಿ ಅಜೇಯ 121 ರನ್ ಬಾರಿಸಿರುವುದಾಗಿ ಬಿಸಿಸಿಐ ತಿಳಿಸಿದೆ.

ಗಿಲ್, ಇಶಾಂತ್ ಉತ್ತಮ ಪ್ರದರ್ಶನ

ಗಿಲ್, ಇಶಾಂತ್ ಉತ್ತಮ ಪ್ರದರ್ಶನ

ಯುವ ಆರಂಭಿಕ ಬ್ಯಾಟ್ಸ್‌ಮನ್‌ ಶುಬ್ಮನ್ ಗಿಲ್ ಮತ್ತು ಅನುಭವಿ ವೇಗಿ ಇಶಾಂತ್ ಶರ್ಮಾ ಕೂಡ ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಗಿಲ್ 135 ಎಸೆತಗಳಲ್ಲಿ 85 ರನ್ ಬಾರಿಸಿದ್ದರೆ, ಇಶಾಂತ್ 36 ರನ್‌ಗೆ 3 ವಿಕೆಟ್ ಪಡೆದಿದ್ದಾರೆ.

ಸುಗೀರ್ಘ ಪ್ರವಾಸ ಸರಣಿ

ಸುಗೀರ್ಘ ಪ್ರವಾಸ ಸರಣಿ

ಇಂಗ್ಲೆಂಡ್‌ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ಪಡೆ ಅಲ್ಲಿ ದೀರ್ಘ ಕಾಲ ತಂಗಲಿದೆ. ಜೂನ್ 18-22ರ ವರೆಗೆ ನ್ಯೂಜಿಲೆಂಡ್-ಭಾರತ ಮಧ್ಯೆ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆದರೆ, ಅದಾಗಿ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಆಗಸ್ಟ್‌ 4ರಿಂದ ಆರಂಭಗೊಳ್ಳುವ ಟೆಸ್ಟ್‌ ಸರಣಿ ಸೆಪ್ಟೆಂಬರ್ 14ಕ್ಕೆ ಕೊನೆಗೊಳ್ಳಲಿದೆ.

Story first published: Saturday, June 12, 2021, 20:47 [IST]
Other articles published on Jun 12, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+